ನವದೆಹಲಿ : ಗುರು ತೇಗ್ ಬಹದ್ದೂರ್ ಅವರ ಪರಮ ತ್ಯಾಗಕ್ಕಾಗಿ ದೆಹಲಿಯ ಗುರುದ್ವಾರ ರಕಾಬ್ ಗಂಜ್ ಸಾಹಿಬ್ ಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಭೇಟಿ ನೀಡಿ ಗೌರವ ಸಲ್ಲಿಸಿದರು.
‘ಶ್ರೀ ಗುರು ತೇಗ್ ಬಹದ್ದೂರ್ ಜೀ ಯವರ ಜೀವನವು ಧೈರ್ಯ ಮತ್ತು ಕರುಣೆಯ ಲಕ್ಷಣಗಳನ್ನು ಹೊಂದಿದೆ. ಅವರ ಶಾಹಿದಿ ದಿವಸ್ ನಲ್ಲಿ ನಾನು ಮಹಾನ್ ಶ್ರೀ ಗುರು ತೇಗ್ ಬಹದ್ದೂರ್ ಜಿಗೆ ನಮಿಸುತ್ತೇನೆ ಮತ್ತು ಅವರ ದೂರದೃಷ್ಟಿಯನ್ನು ನಾನು ಸ್ಮರಿಸುತ್ತೇನೆ’ ಎಂದು ಹೇಳಿದ್ದಾರೆ.
ಗುರು ತೇಗ್ ಬಹದ್ದೂರ್ ಸಿಖ್ ಧರ್ಮದ 10 ಗುರುಗಳಲ್ಲಿ ಒಂಬತ್ತನೇಯವರು ಮತ್ತು ಗುರು ಹರಗೋಬಿಂಡ್ ನ ಕಿರಿಯ ಮಗ. 1621ರಲ್ಲಿ ಅಮೃತಸರದಲ್ಲಿ ಜನಿಸಿದರು.