Friday, 22nd November 2024

ಎರಡನೇ ಟೆಸ್ಟ್ ಪಂದ್ಯಕ್ಕೆ ರಾಹುಲ್‌, ಪಂತ್‌, ಗಿಲ್‌ ಇನ್‌

ನವದೆಹಲಿ: ಆಡಿಲೇಡ್ ಟೆಸ್ಟ್ ನಲ್ಲಿ ಹೀನಾಯ ಸೋಲುಂಡ ನಂತರ ಟೀಇಂಡಿಯಾ ತನ್ನ ಹನ್ನೊಂದರ ಬಳಗದಲ್ಲಿ ಮಹತ್ತರ ಬದಲಾವಣೆ ಮಾಡಲಿದೆ. ಉಳಿದಿರುವ ಟೆಸ್ಟ್ ಪಂದ್ಯಗಳಿಗೆ ವಿಕೆಟ್ ಕೀಪರ್ -ಬ್ಯಾಟ್ಸ್ ಮನ್ ವೃದ್ಧಿಮನ್ ಸಹಾ ಮತ್ತು ಆರಂಭಿಕ ಆಟಗಾರ ಪೃಥ್ವಿ ಶಾ ಅವರಿಗೆ ಕೊಕ್ ನೀಡುವ ಸಾಧ್ಯತೆಯಿದೆ.

ಮೂರನೇ ಟೆಸ್ಟ್ ಪಂದ್ಯದವರೆಗೂ ಹಿರಿಯ ಆಟಗಾರ ರೋಹಿತ್ ಶರ್ಮಾ ಲಭ್ಯವಿಲ್ಲದ ಕಾರಣ ಯುವ ಆಟಗಾರ ಶುಬ್ಮನ್ ಗಿಲ್, ಶಾ ಅವರ ಬದಲಿಯಾಗಿ ಕಣಕ್ಕಿಳಿಯಲಿದ್ದಾರೆ. ವೃದ್ದಿಮನ್ ಸಹಾ ಕೂಡಾ ವಿಫಲವಾಗಿದ್ದು, ರಿಷಭ್ ಪಂತ್ ಬರುವ ಸಾಧ್ಯತೆಯಿದೆ.

ಕೆ.ಎಲ್. ರಾಹುಲ್ ಮತ್ತು ಮೊಹಮ್ಮದ್ ಸಿರಾಜ್ ಇಲೆವೆನ್ ನಲ್ಲಿ ಆಡಲು ಮುಂದಾಗಿದ್ದಾರೆ. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಸ್ಥಳಗಳಲ್ಲಿ ರಿಷಭ್ ಪಂತ್ ನಮ್ಮ ಮೊದಲ ಆಯ್ಕೆಯ ಕೀಪರ್ ಆಗಿರುತ್ತಾರೆ ಎಂಬುದನ್ನು ಸಮಿತಿ ಸ್ಪಷ್ಟ ಪಡಿಸಿದೆ.

ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಹನುಮ ವಿಹಾರಿ ಮತ್ತು ಕೆಎಲ್ ರಾಹುಲ್ ಗೆ ಅವಕಾಶ ದೊರೆಯಲಿದ್ದು, ವಿಹಾರಿ ನಂಬರ್ 4 ಅಥವಾ 5, ಕೆ. ಎಲ್. ರಾಹುಲ್ ನಂಬರ್ 6ರ ಬ್ಯಾಟಿಂಗ್ ಕ್ರಮಾಂಕದಲ್ಲಿ ಉತ್ತಮ ನಿರ್ವಹಣೆ ಮಾಡುವ ವಿಶ್ವಾಸದಲ್ಲಿರುವು ದಾಗಿ ಆಯ್ಕೆದಾರರ ಮಾಜಿ ಅಧ್ಯಕ್ಷ ಪ್ರಸಾದ್ ಹೇಳಿದ್ದಾರೆ.