Friday, 22nd November 2024

ಪಶ್ಟಿಮ ಬಂಗಾಳದಲ್ಲಿ ಬಿಜೆಪಿ ಎರಡಂಕಿ ದಾಟುವುದಿಲ್ಲ: ಪ್ರಶಾಂತ್ ಕಿಶೋರ್

ಕೊಲ್ಕತ್ತಾ: ಟಿಎಂಸಿ ಪಕ್ಷದ ಚುನಾವಣಾ ತಂತ್ರಜ್ಞರಾಗಿ ‘ಹೊರಗಿನವರಾದ ಪ್ರಶಾಂತ್ ಕಿಶೋರ್ ಅವರು, ಬಿಜೆಪಿ ಏನಾದರೂ ಉತ್ತಮ ಸಾಧನೆ ಮಾಡಿದರೆ ತಮ್ಮ ಸ್ಥಾನವನ್ನು ಬಿಟ್ಟು ಬಿಡುವುದಾಗಿ ಹೇಳಿದ್ದಾರೆ.

ಕೆಲ ಮಾಧ್ಯಮಗಳ ಬೆಂಬಲದಿಂದ ಈ ರೀತಿಯ ಹೈಪ್ ಸೃಷ್ಟಿಸಲಾಗುತ್ತಿದೆ. ವಾಸ್ತವವಾಗಿ ಪಶ್ಟಿಮ ಬಂಗಾಳದಲ್ಲಿ ಬಿಜೆಪಿ ಎರಡಂಕಿ ದಾಟುವುದಿಲ್ಲ. ದಯವಿಟ್ಟು ಈ ಟ್ವೀಟ್ ಸೇವ್ ಮಾಡಿಕೊಳ್ಳಿ ಎಂದು ಹೇಳಿದ್ದಾರೆ.

ಆಡಳಿತಾರೂಢ ತೃಣಮೂಲ ಕಾಂಗ್ರಸ್ ಕಾರ್ಯಕರ್ತರಿಂದ ಪ್ರಬಲ ವಿರೋಧ, ಹಿಂಸಾತ್ಮಕ ಪ್ರತಿರೋಧಗಳೂ ವ್ಯಕ್ತವಾಗುತ್ತಿದೆ ಕೂಡ. ಇವೆಲ್ಲದರ ನಡುವೆ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರ ಟ್ವೀಟ್ ಗಮನ ಸೆಳೆದಿದೆ.

ಚಾಣಕ್ಯ ಎಂದೇ ಬಿಜೆಪಿವಲಯದಲ್ಲಿ ಬಿಂಬಿಸಲ್ಪಟ್ಟಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಎರಡು ದಿನಗಳ ಪಶ್ಚಿಮ ಬಂಗಾಳ ಪ್ರವಾಸ ಮುಗಿಸಿ ದೆಹಲಿಗೆ ಹಿಂತಿರುಗಿದ ಬೆನ್ನಲ್ಲೇ ಪ್ರಶಾಂತ್ ಕಿಶೋರ್ (ಪಿಕೆ) ಈ ಟ್ವೀಟ್ ಮಾಡಿದ್ದಾರೆ.

ಈ ಸಲದ ವಿಧಾನ ಸಭಾ ಚುನಾವಣೆಯಲ್ಲಿ 294 ಸ್ಥಾನಗಳ ಪೈಕಿ 200ಕ್ಕೂ ಹೆಚ್ಚು ಸ್ಥಾನಗಳಲ್ಲಿ ಪಕ್ಷ ಗೆಲುವು ದಾಖಲಿಸಬೇಕು ಎಂಬ ಗುರಿಯನ್ನು ಬಿಜೆಪಿ ಕಾರ್ಯಕರ್ತರಿಗೆ ಅಮಿತ್ ಷಾ ನೀಡಿದ್ದಾರೆ.

ವಾಸ್ತವದಲ್ಲಿ ನೋಡಿದರೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಎರಡಂಕಿ ಸ್ಥಾನ ದಾಟುವುದೂ ಕಷ್ಟವಿದೆ. ಈ ಟ್ವೀಟ್​ ಅನ್ನು ಸೇವ್ ಮಾಡಿ ಇಟ್ಟುಕೊಂಡಿರು. ಒಂದೊಮ್ಮೆ ಬಿಜೆಪಿ ಇದಕ್ಕಿಂತ ಉತ್ತಮ ಸಾಧನೆ ತೋರಿದರೆ ನಾನು ಈ ಜಾಗವನ್ನು ಖಾಲಿ ಮಾಡುವೆ!- ಎಂಬರ್ಥದ ಟ್ವೀಟ್​ ಪಿಕೆ ಖಾತೆಯಲ್ಲಿ ಅಪ್ಡೇಟ್ ಆಗಿದೆ.