ನವದೆಹಲಿ: ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆಯನ್ನ ಕೇಂದ್ರ ತನಿಖಾ ದಳ, ಜಾರಿ ನಿರ್ದೇಶನಾಲಯ, ಮಾದಕ ವಸ್ತು ನಿಯಂತ್ರಣ ದಳ ಸೇರಿದಂತೆ ಮೂರು ಕೇಂದ್ರೀಯ ಸಂಸ್ಥೆಗಳು ನಡೆಸುತ್ತಿದೆ. ಈ ನಡುವೆ ಸುಶಾಂತ್ ಸಾವು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದನ್ನು ಬಹಿರಂಗಪಡಿಸುವಂತೆ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ತನಿಖಾ ಸಂಸ್ಥೆಗೆ ಮನವಿ ಮಾಡಿದ್ದಾರೆ.
ಇನ್ನು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರಿಗೆ ಪತ್ರ ಬರೆದಿರುವ ಸಿಬಿಐ, ತನಿಖೆಯನ್ನ ವೃತ್ತಿಪರ ರೀತಿಯಲ್ಲಿ ನಡೆಸ ಲಾಗುತ್ತಿದೆ. ಯಾವುದೇ ರೀತಿಯ ‘ಆಯಾಮ’ವನ್ನ ತಳ್ಳಿಹಾಕಿಲ್ಲ ಎಂದು ಹೇಳಿದೆ.
‘ವೈಜ್ಞಾನಿಕ ತಂತ್ರಗಳನ್ನ ಬಳಸಿ ಸಿಬಿಐ ಸಮಗ್ರ ಹಾಗೂ ವೃತ್ತಿಪರವಾಗಿ ತನಿಖೆ ನಡೆಸುತ್ತಿದೆ. ತನಿಖೆಯ ವೇಳೆ ಎಲ್ಲ ಆಯಾಮ ಗಳನ್ನು ಪರಿಶೀಲನೆ ಮಾಡಲಾಗುತ್ತಿದೆ ಮತ್ತು ಯಾವುದೇ ಆಯಾಮವನ್ನು ತಳ್ಳಿ ಹಾಕಲಾಗಿಲ್ಲ’ ಎಂದು ಸಿಬಿಐ ತನ್ನ ಪತ್ರದಲ್ಲಿ ತಿಳಿಸಿದೆ.