Sunday, 27th October 2024

ಛೋಟಾ ರಾಜನ್‌ ಸೇರಿ ನಾಲ್ವರಿಗೆ ಎರಡು ವರ್ಷ ಜೈಲು ಶಿಕ್ಷೆ

ಮುಂಬೈ: ಭೂಗತ ಪಾತಕಿ ಛೋಟಾ ರಾಜನ್ ಮತ್ತು ಇತರ ಮೂವರಿಗೆ ಮುಂಬೈ ಸೆಷನ್ಸ್ ನ್ಯಾಯಾಲಯ ಸೋಮವಾರ ಶಿಕ್ಷೆ ವಿಧಿಸಿದೆ. ನಾಲ್ವರಿಗೂ ಎರಡು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ನಂದು ವಾಜೇಕರ್ ಎಂಬ ಪನ್ವೇಲ್ ಬಿಲ್ಡರ್ ಗೆ ರಾಜನ್ ಬೆದರಿಕೆ ಹಾಗೂ ರಾಜನ್ ವಾಜೇಕರ್ ನಿಂದ 26 ಕೋಟಿ ರೂಪಾಯಿ ಗಳನ್ನು ಸುಲಿಗೆ ಮಾಡಲು ಯತ್ನಿಸಿದ್ದಎಂದು ಆರೋಪಿಸಲಾಗಿದ್ದ ಪ್ರಕರಣದಲ್ಲಿ ಶಿಕ್ಷೆ ವಿ#ಧಿಸಿದೆ.

ಬಿಲ್ಡರ್ ನಂದು ವಾಜೇಕರ್ ಗೆ ಬೆದರಿಕೆ ಹಾಕಿದ ಆರೋಪ ಛೋಟಾ ರಾಜನ್ ಮೇಲಿದ್ದು, ಅವರಿಂದ 26 ಕೋಟಿ ರೂಪಾಯಿ ಗಳನ್ನು ದೋಚಲು ಯತ್ನಿಸಿದ್ದಾನೆ ಎನ್ನಲಾಗಿದೆ. ಪ್ರಕರಣದ ವಿವರಗಳ ಪ್ರಕಾರ, ನಂದು ಎಂಬ ಬಿಲ್ಡರ್ 2015ರಲ್ಲಿ ಪುಣೆಯಲ್ಲಿ ಜಮೀನು ಖರೀದಿಸಿದ್ದು, 2 ಕೋಟಿ ರೂ ಕಮಿಷನ್ ಅನ್ನು ಪರಮಾನಂದ್ ಠಕ್ಕರ್ ಎಂಬ ಏಜೆಂಟ್ ಗೆ ನೀಡಲು ನಿರ್ಧರಿಸ ಲಾಗಿತ್ತು.