Friday, 29th November 2024

ದಿಲ್ಲಿ ಗಲ್ಲಿಯಿಂದ – ನಾರದ

ರೈತರಿಗೆ ಛಡ್ಡಾ ನೀರು

ದೆಹಲಿಯ ಶಾಸಕ ಹಾಗೂ ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಛಡ್ಡಾ ರೈತರ ಪ್ರತಿಭಟನೆ ಬೆಂಬಲ ನೀಡಿದ ಮೊದಲ ಆಮ್ ಆದ್ಮಿ ಪಕ್ಷದ ನಾಯಕರು. ಪೊಲೀಸರು ದೆಹಲಿಯ ರಾಷ್ಟ್ರೀಯ ಮೈದಾನವನ್ನು ಪ್ರತಿಭಟನಾ ನಿರತ ರೈತರ ಜೈಲಾಗಿ ಮಾರ್ಪಾಡು ಮಾಡಲು ಮನವಿ ಮಾಡಿದಾಗ, ಅದನ್ನು ಪುರಸ್ಕರಿಸದಂತೆ ಟ್ವೀಟ್ ಮೂಲಕ ಕೇಳಿಕೊಂಡಿದ್ದರು. ನಂತರ ದೆಹಲಿ ಸರಕಾರ ಸಹ ರೈತರಿಗೆ ಶಾಂತಿಯುತ ಪ್ರತಿಭಟನೆ ನಡೆಸಲು ಹಕ್ಕಿದೆ ಎನ್ನುವ ಕಾರಣ ನೀಡಿ, ಪೊಲೀಸರ ಮನವಿಯನ್ನು ತಿರಸ್ಕರಿಸಿತ್ತು. ಇಷ್ಟೇ ಅಲ್ಲದೇ, ಹೋರಾಟ ನಡೆಸುತ್ತಿರುವ ರೈತರಿಗೆ ವಿವಿಧ ರೀತಿಯಲ್ಲಿ ಸಹಾಯ ಮಾಡು ತ್ತಿದ್ದಾರೆ. ದೆಹಲಿ ಜಲ ಮಂಡಳಿಯ ಅಧ್ಯಕ್ಷರಾಗಿರುವ ಅವರು, ಇತ್ತೀಚೆಗೆ ರೈತರಿಗೆ ನೀರು ಸರಬರಾಜು ಮಾಡುವಲ್ಲಿ ನಿರತ ರಾಗಿದ್ದಾರೆ.

ಸಿಟ್ಟಿಗೆದ್ದ ಮಹಿಳೆಯರು

ಕರ್ನಾಟಕದ ಸರಕಾರದಲ್ಲಿ ಸಂಪುಟ ವಿಸ್ತರಣೆಯೇ ದೊಡ್ಡ ಚರ್ಚೆಯ ವಿಷಯವಾಗಿದೆ. ಈ ಕುರಿತು ಹಲವಾರು ಊಹಾ ಪೋಹಗಳು ಸಹ ಹರಿದಾಡುತ್ತಿವೆ. ಅದರಲ್ಲೂ ಯಡಿಯ್ಯೂರಪ್ಪ ಸಂಪುಟದ ಏಕೈಕ ಮಹಿಳಾ ಸಚಿವೆಯಾಗಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರ ಬದಲಾವಣೆ ಬಗ್ಗೆ ಕೇಳಿ ಬರುತ್ತಿದೆ. ಶಶಿಕಲಾ ಅವರ ಬದಲಿಗೆ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ನೀಡುವ ಕುರಿತು ಮಾತುಗಳು ಕೇಳಿ ಬರುತ್ತಿವೆ. ಈ ವಿಷಯ ಇಬ್ಬರು ಮಹಿಳಾ ಮಣಿಗಳ ಕೋಪಕ್ಕೆ ಕಾರಣವಾಗಿದೆ. ಇಷ್ಟಕ್ಕೂ ಈ ಸಚಿವ ಸಂಪುಟದಲ್ಲಿ ಇಬ್ಬರು ಮಹಿಳಾ ಸಚಿವೆಯರು ಏಕಿರಬಾರದು ಎಂಬುದು ಅವರ ಪ್ರಶ್ನೆ. ಈ ಎಲ್ಲ ಬೆಳವಣಿಗೆ ಗಳನ್ನು ಗಮನಿಸಿದರೆ, ಕರ್ನಾಟಕ ರಾಜಕೀಯದಲ್ಲಿ ಯಾವುದೇ ಪಕ್ಷ ಆಡಳಿತದಲ್ಲಿದ್ದರೂ, ಮಹಿಳೆಯರ ಪ್ರಾತಿನಿಧ್ಯ ಕೇವಲ ಸಾಂಕೇತಿಕವಾಗಿದೆ.

ಖಾನ್ ಸೆಳೆಯಲು ಕೈ ಯತ್ನ

ಸಮಾಜವಾದಿ ಪಕ್ಷದ ಪ್ರಮುಖ ಮುಸ್ಲಿಂ ಮುಖಂಡರಾಗಿರುವ ಅಜಾಂ ಖಾನ್ ಸಹಿ ನಕಲು ಪ್ರಕರಣದ ಅಡಿಯಲ್ಲಿ ಮಗನೊಂದಿಗೆ ಜೈಲಿನಲ್ಲಿ ದ್ದಾಾರೆ. ಆದರೂ ಸಹ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಖಾನ್ ಹೆಸರಿತ್ತು. ಆದರೆ ಉತ್ತರ ಪ್ರದೇಶ ಕಾಂಗ್ರೆಸ್ ಮಾತ್ರ, ಪ್ರಚಾರ ಸಭೆಗಳ ಪೋಸ್ಟರ್‌ಗಳಲ್ಲಿ ಖಾನ್ ಅವರ ಫೋಟೋ ಹಾಕದೆ
ಸಮಾಜವಾದಿ ಮುಖಂಡ ಅಖಿಲೇಶ್ ಯಾದವ್, ಅಜಂ ಖಾನ್ ಕುರಿತು ನಿರಾಸಕ್ತಿ ಹಾಗೂ ಉದಾಸೀನಾ ತೋರಿಸಿದ್ದಾರೆ ಎಂದು ಹೇಳಿಕೊಂಡು ಬಂದಿದೆ. ಕಾಂಗ್ರೆಸ್ ಮೂಲಗಳ ಪ್ರಕಾರ ಖಾನ್ ಬಗ್ಗೆ ಕಾಂಗ್ರೆಸ್ ತೋರಿಸುತ್ತಿರುವ ಈ ಕಾಳಜಿ ಅವರನ್ನು ಪಕ್ಷಕ್ಕೆ ಸೆಳೆಯುವ ಪ್ರಯತ್ನ ಎನ್ನಲಾಗುತ್ತಿದೆ.

ಊಟ ಆಟಾಟೋಪ

ಮಧ್ಯಪ್ರದೇಶದ ಅರಣ್ಯ ಸಚಿವ ವಿಜಯ್ ಶಾ ಅವರು ವಿಧ್ಯಾಬಾಲನ್ ನಟಿಸುತ್ತಿರುವ ಬಾಲಿವುಡ್ ಚಿತ್ರ ಶೆರ್ನಿ ತಂಡದ ಕಾರುಗಳನ್ನು ಬಾಲ್ ಘಾಟ್‌ನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ತಡೆಹಿಡಿದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರಿ ಸುದ್ದಿಯಲ್ಲಿದ್ದಾರೆ. ವಿಜಯ್ ಶಾ ನಟಿಗೆ ನೀಡಿದ್ದ ಔತಣದ ಆಹ್ವಾನವನ್ನು ನಟಿ ತಿರಸ್ಕರಿಸಿದ ಪ್ರತಿಯಾಗಿ ಕಾರನ್ನು ತಡೆಯ ಲಾಗಿದೆ ಎಂದು ಗುಸುಗುಸು ಕೇಳಿ ಬಂದಿದೆ. ಆದರೆ ವಿಜಯ್ ಅವರು ನನಗೆ ಚಿತ್ರತಂಡ ನೀಡಿದ್ದ ಔತಣದ ಆಹ್ವಾನ ನಾನು ತಿರಸ್ಕರಿಸಿದ್ದೇನೆ ಎನ್ನುವ ಮೂಲಕ ಈ ಮಾತುಗಳಿಗೆ ಬ್ರೇಕ್ ಹಾಕಿದ್ದರು. ಕಾರಿನ ಪ್ರಕರಣ ವೇನು ಸುಖಾಂತ್ಯ ಕಂಡಿದೆ. ಆದರೆ ಬೆಂಕಿ ಇಲ್ಲದೆ ಹೊಗೆ ಆಡಲ್ಲ ಎಂಬುದು ಕೆಲವರ ಮಾತು.

ರೂಪಾಯಿ 700 ಕೋಟಿ ಪೋರ್ಟಲ್‌

ಕೇಂದ್ರ ಕಾರ್ಮಿಕ ಸಚಿವಾಲಯ ವಲಸೆ ಕಾರ್ಮಿಕರ ಪೋರ್ಟಲ್ ಆರಂಭಿಸಲು 700 ಕೋಟಿ ರು ಬಿಡುಗಡೆ ಮಾಡಿದೆ. ವಲಸೆ ಕಾರ್ಮಿಕರ ಕುರಿತಾದ ಆನಂದ್ ಬೋಸ್ ಆಯೋಗ ನೀಡಿದ ವರದಿ ಆಧಾರದ ಮೇಲೆ ಪೋರ್ಟಲ್  ಆರಂಭಿಸಲಾಗುತ್ತಿದ್ದು, ಇದನ್ನು ರಾಷ್ಟ್ರೀಯ ಮಾಹಿತಿ ಕೇಂದ್ರ ತಯಾರಿಸುತ್ತಿದೆ. ಈ ಪೋರ್ಟಲ್ ಮೂಲಕ 5 ಕೋಟಿ ವಲಸೆ ಕಾರ್ಮಿಕರಿಗೆ ಆರೋಗ್ಯ ಮತ್ತು ಉಳಿ ತಾಯ ಸೇವೆಗಳನ್ನು ಸರಕಾರ ನೀಡಲು ಸಹಾಯವಾಗುತ್ತದೆ. ಆದರೆ ಸರಕಾರ ಬಿಡುಗಡೆ ಮಾಡಿರುವ 7 ಕೋಟಿ ರುಗಳಲ್ಲಿ 1 ರುಪಾಯಿ ಸಹ ಕಾರ್ಮಿಕರಿಗೆ ಸೇರುವುದಿಲ್ಲ. ಆ ಹಣ, ಪೋರ್ಟಲ್ ತಯಾರಿಸು ತ್ತಿರುವ ತಂತ್ರಜ್ಞರಿಗೆ, ಕಂಪ್ಯೂಟರ್ ‌ಗಳಿಗೆ ಹಾಗೂ ಸಿಬ್ಬಂದಿಗಳ ಸಂಬಳಕ್ಕೆ ಸಾಕಾಗುತ್ತದೆ ಎಂಬುದು ಅಚ್ಚರಿಯ ವಿಷಯ.

ಚಿಗುರೊಡೆಯದ ಕನಸು

ಇಸ್ರೇಲ್ ಪ್ರಧಾನಿ ನೆತನ್ಯಾಹು ಮತ್ತು ಅಮೆರಿಕದ ಅಧ್ಯಕ್ಷೀಯ ಸಲಹೆಗಾರ ಜರೇಡ್ ಕುಶ್ನರ್ ಅವರಿಂದ ಡಿಸೆಂಬರ್ 21ರಂದು ಜೆರುಸಲೇಮ್‌ನಲ್ಲಿ ‘ಆಲಿವ್’ ಗಿಡವನ್ನು ಟ್ರಂಪ್ ನೆಡಿಸಿದ್ದರಂತೆ. ಅಧ್ಯಕ್ಷೀಯ ಅವಧಿಯ ಕೊನೆಯಲ್ಲಿ ಏನೇನೋ ಮಾಡು ತ್ತಿರುವ ಟ್ರಂಪ್‌ಗೆ ಏನು ಮಾಡಿದರೂ ನಿರಾಸೆ ಎಂಬುದು ಬೆಂಬಿಡದೆ ಕಾಡುತ್ತಲೇ ಇದೆ. ಈಗ ಟ್ರಂಪ್‌ಗೆ ನಿರಾಸೆ ಮಾಡುವ ಸರದಿ ಅಮೆರಿಕದ ರಕ್ಷಣಾ ಸಲಹೆಗಾರರದ್ದು. ಅಧಿಕಾರವನ್ನು ಶಾಂತಿಯುತವಾಗಿ ಬೈಡನ್ ಅವರಿಗೆ ಹಸ್ತಾಂತರಿಸಿ ಎಂದು  ಟ್ರಂಪ್‌ಗೆ ಒಲ್ಲದ ಸಲಹೆ ನೀಡಿದ್ದಾರಂತೆ. ಯಾವ ಗಿಡ ನೆಟ್ಟರೂ ಫಲ ಬರುತ್ತಿಲ್ಲ ಎಂದು ಟ್ರಂಪ್ ಕೈ ಹಿಚುಕಿ ಕೊಳ್ಳಬೇಕಷ್ಟೇ.