Thursday, 12th December 2024

ಕಾಬೂಲ್‌ನಲ್ಲಿ ಬಾಂಬ್ ಸ್ಫೋಟ: ಮೂವರ ಸಾವು

ಕಾಬೂಲ್‌: ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್‌ನ ರಸ್ತೆಬದಿಯಲ್ಲಿ ಭಾನುವಾರ ಬಾಂಬ್ ಸ್ಫೋಟಗೊಂಡಿದ್ದು, ಇದರಲ್ಲಿ ಮೂರು ಮಂದಿ ಮೃತಪಟ್ಟಿದ್ದಾರೆ.

ಕತಾರ್‌ನಲ್ಲಿ ತಾಲಿಬಾನ್‌ ಜೊತೆಗಿನ ಶಾಂತಿ ಮಾತುಕತೆಯನ್ನು ಮುಂದುವರಿಸಿದೆ. ಈ ಸಂದರ್ಭದಲ್ಲೇ ಕಾಬೂಲ್‌ನಲ್ಲಿ ಬಾಂಬ್‌ ಸ್ಫೋಟಗೊಂಡಿದೆ. ‘ಭದ್ರತಾ ಸಿಬ್ಬಂದಿ ಸೇರಿದಂತೆ ಒಟ್ಟು ಮೂರು ಮಂದಿ ಸ್ಫೋಟದಲ್ಲಿ ಮೃತಪಟ್ಟಿದ್ದಾರೆ. ಒಬ್ಬರಿಗೆ ಗಂಭೀರ ಗಾಯಗಳಾಗಿವೆ’ ಎಂದು ಆಂತರಿಕ ಸಚಿವಾಲಯದ ವಕ್ತಾರ ತಾರಿಕ್ ಅರಿಯನ್ ತಿಳಿಸಿದರು.