ಬೆಂಗಳೂರು: ಟಿ20 ಕ್ರಿಕೆಟ್ ಟೂರ್ನಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಮೊದಲ ಪಂದ್ಯದಲ್ಲಿ ಕರ್ನಾಟಕ ತಂಡ ತನ್ನ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದೆ.
ಜಮ್ಮು ಕಾಶ್ಮೀರ ವಿರುದ್ಧ ಪಂದ್ಯದ ಬೆಂಗಳೂರಿನ ಆಲೂರ್ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ಟಾಸ್ ಗೆದ್ದ ಜಮ್ಮು ಕಾಶ್ಮೀರ ತಂಡ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಬ್ಯಾಟಿಂಗ್‌ಗೆ ಇಳಿದ ಕರ್ನಾಟಕ ನಿಧಾನಗತಿಯ ಆರಂಭ ಪಡೆಯಿತು. ದೇವದತ್ ಪಡಿಕ್ಕಲ್ ಹಾಗೂ ಕರುಣ್ ನಾಯರ್ ಮೊದಲ ವಿಕೆಟ್‌ಗೆ 37 ರನ್‌ಗಳ ಕೊಡುಗೆ ನೀಡಿದರು. 17 ಎಸೆತಗಳಲ್ಲಿ 18 ರನ್ ಬಾರಿಸಿದ ಪಡಿಕ್ಕಲ್ ಪರ್ವೀಜ್ ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು.
ನಾಯಕ ಕರುಣ್ ನಾಯಕ 27 ರನ್‌ಗಳಿಗೆ ಹೊರ ನಡೆದರು. ಅಲ್ಲಿಗೆ ಕರ್ನಾಟಕ 11.4 ಓವರ್‌ಗಳಲ್ಲಿ 73 ರನ್‌ಗೆ 4 ವಿಕೆಟ್ ಕಳೆದು ಕೊಂಡಿತ್ತು. ಕರ್ನಾಟಕ ತಂಡದ ಪರವಾಗಿ ಚೊಚ್ಚಲ ಟಿ20 ಪಂದ್ಯವನ್ನಾಡುತ್ತಿರುವ ಶ್ರೀಜಿತ್ 31 ಎಸೆತಗಳಲ್ಲಿ 48 ರನ್ ಬಾರಿಸಿ ಮಿಂಚಿದರು. ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ ಕರ್ನಾಟಕ 150 ರನ್‌ಗಳನ್ನು ಗಳಿಸಲು ಕರ್ನಾಟಕ ತಂಡ ಯಶಸ್ವಿ ಯಾಗಿತ್ತು.
151 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಜಮ್ಮು ಮತ್ತು ಕಾಶ್ಮೀರ ತಂಡದ ಮೇಲೆ ಕರ್ನಾಟಕ ಬೌಲರ್‌ಗಳು ಉತ್ತಮ ನಿಯಂತ್ರಣ ಸಾಧಿಸಿದರು. ಜಮ್ಮು ಕಾಶ್ಮೀರ ತಂಡ 18.4 ಓವರ್‌ಗಳಲ್ಲಿ 107 ರನ್‌ಗಳಿಸಿ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡಿತ್ತು. ಜಮ್ಮು ಕಾಶ್ಮೀರ ತಂಡದ ಪರ ಅಬ್ದುಕ್ ಸಮದ್ ಗಳಿಸಿದ 30 ರನ್ ಅತ್ಯಧಿಕ ಮೊತ್ತವಾಗಿದೆ.