ರಾವ್-ಭಾಜಿ
ಪಿ.ಎಂ.ವಿಜಯೇಂದ್ರ ರಾವ್
Allergy is the inability of a human being to adjust himself to altered circumstances. ಬದಲಾದ ಸನ್ನಿವೇಶಕ್ಕೆ ಹೊಂದಿ ಕೊಳ್ಳಲು ವಿಫಲವಾಗುವುದಕ್ಕೆ ಅಲರ್ಜಿ ಎನ್ನುತ್ತಾರೆ. ಅಲರ್ಜಿಯ ಈ ವ್ಯಾಖ್ಯಾನವನ್ನು ನೀಡಿದವರು ಬೆಂಗಳೂರು ವೈದ್ಯಕೀಯ
ಕಾಲೇಜಿನ ಪ್ರಿನ್ಸಿಪಾಲ್ ಆಗಿ ಸೇವೆ ಸಲ್ಲಿಸಿದ ಡಾ.ಬಿ.ಸಿ.ದಾಸ್. ನಾನು ಡಾ.ಎಚ್. ನರಸಿಂಹಯ್ಯ ಸ್ಥಾಪಿಸಿದ ಬೆಂಗಳೂರು ವಿಜ್ಞಾನ ವೇದಿಕೆಯ ಕಾರ್ಯಕಾರಿ ಸಮಿತಿಯಲ್ಲಿ ವಿದ್ಯಾರ್ಥಿಯಾಗಿ ಸೇವೆ ಸಲ್ಲಿಸಿದ ದಿನಗಳಲ್ಲಿ ದಾಸ್ ರನ್ನು ಅಲರ್ಜಿ ಕುರಿತಾಗಿ ಉಪನ್ಯಾಸ ನೀಡಲು ನ್ಯಾಷನಲ್ ಕಾಲೇಜಿಗೆ ಕರೆಸಿzವು. ನಲವತ್ತು ವರ್ಷಗಳ ಮೇಲಾಗಿದೆ.
ಅವರ ಭಾಷಣದ ಮುಖ್ಯಾಂಶವಾಗಲೀ, ಅವರ ವೈಖರಿಯಾಗಲೀ ಮರೆತಿಲ್ಲ. ಒಬ್ಬ ವ್ಯಕ್ತಿ ನಿತ್ಯ ಬಸ್ನಲ್ಲಿ ಪ್ರಯಾಣಿಸು ತ್ತಿರುತ್ತಾನೆ. ಓರ್ವ ಸುಂದರ ತರುಣಿ ಅದೇ ಬಸ್ನಲ್ಲಿ ಪ್ರಯಾಣಿಸುತ್ತಿದ್ದು ಅವರ ಕಣ್ಣುಗಳು ಸಂಽಸಿ, ಮುಗುಳ್ನಗೆಯ ವಿನಿಮ ಯಕ್ಕೆ ತೊಡಗುತ್ತಾರೆ. ಒಂದು ದಿನ ಆತ ಆಕೆಯನ್ನು ಈಜುಕೊಳದಲ್ಲಿ ಸಂಧಿಸುತ್ತಾನೆ. ಎಂದಿನಂತೆ ಅವಳು ಮಂದಹಾಸ ಬೀರು ತ್ತಾಳೆ. ಇವನು ಸುಮ್ಮನಿರುತ್ತಾನೆ. ದಿನಾ ಬಸ್ನಲ್ಲಿ ಸಿಗುತ್ತೇನಲ್ಲ, ಅದೇ ಹುಡುಗಿ ನಾನು ಎಂದು ಅವಳು ಹೇಳುತ್ತಾಳೆ. ನಿಜ, ಆದರೆ ನಿನ್ನನ್ನು ಈ ವೇಷದಲ್ಲಿ ನೋಡಿರಲಿಲ್ಲವಲ್ಲ? ಕಳವಳಕಾರಿ ಸತ್ಯವೆಂದರೆ ಪ್ರಾಥಮಿಕ ಶಾಲಾ ಶಿಕ್ಷಕರು ಅವರು ಪಾಠ ಮಾಡಬೇಕಾದ ಮಕ್ಕಳಷ್ಟೇ ಮುಗ್ಧರು.
ಬಿತ್ತುವ ಹಂತದ ಸಮಸ್ಯೆ ಇರುವಾಗ ಫಲ ಉತ್ತಮವಾಗಿರುವುದಾದರೂ ಹೇಗೆ? ಸಮಾಜದ ಏಳಿಗೆಯೇ ಎಲ್ಲರ ಒಟ್ಟಾರೆ ಗುರಿ ಯಾದರೆ ಮಾತ್ರ ಈ ಸಮಸ್ಯೆಯನ್ನು ಬಗೆಹರಿಸಬಹುದು, ಆದರೆ ಪ್ರಸಕ್ತದಲ್ಲಿ ಪರಿಹಾರಗಳನ್ನೇ ಸಮಸ್ಯೆಯ ಆಗರವನ್ನಾ ಗಿಸುವ ದುಷ್ಟಶಕ್ತಿಗಳು ಹೊರಗೂ ಒಳಗೂ ಕಾರ್ಯನಿರತವಾಗಿವೆ. ಅದೇ ಅಲರ್ಜಿ, ಎಂದ ದಾಸ್ ವಿನೋದಭರಿತವಾಗಿ ಅಲರ್ಜಿಯ ಲಕ್ಷಣ ನಿರೂಪಣೆಯನ್ನು ಯಶಸ್ವಿಯಾಗಿ ಮಾಡಿದ್ದರು.
ವಿಜ್ಞಾನದ ಗಂಧವೇ ಇಲ್ಲದವರಿಗೂ ವೈಜ್ಞಾನಿಕ ವಿಷಯ ಕುರಿತು ಅರ್ಥವಾಗುವಂತೆ ಮಾತನಾಡಬಲ್ಲ ಸಾಮರ್ಥ್ಯ ಅವರದು. ಎಂತಲೇ ವೈದ್ಯಕೀಯ ವಿದ್ಯಾರ್ಥಿಗಳೂ ಅವರ ಉಪನ್ಯಾಸವನ್ನು ಇಷ್ಟಪಡುತ್ತಿದ್ದರು ಎಂದು ಕೇಳಿ ಬ.ಪ್ರಾಥಮಿಕ ಶಿಕ್ಷಣ ಹಂತ ದಲ್ಲಿ ಶಿಕ್ಷಕರು ದಾಸ್ರಷ್ಟೇ ಸಮರ್ಥವಾಗಿ ಪಾಠ ಮಾಡಿದ್ದೇ ಆದರೆ ಮಕ್ಕಳಲ್ಲಿ ತಾವು ಓದುವ/ ಆಲಿಸುವ ಎಲ್ಲ ವಿಷಯಗಳ ಬಗ್ಗೆ ಆಸಕ್ತಿ ಮೂಡಿ ಸರಿಯಾದ ಸಮಯದಲ್ಲಿ ಸರಿಯಾದ ಆಯ್ಕೆ ಮಾಡುವಲ್ಲಿ ಸಫಲರಾಗುತ್ತಾರೆ.
ಊರು ಹೊಡೆಯುವ ಪ್ರವೃತ್ತಿ ತಪ್ಪಿ ವ್ಯಾಸಂಗದಲ್ಲಿ ಶ್ರದ್ಧಾಸಕ್ತಿಗಳಿಂದ ತೊಡಗಿಸಿಕೊಳ್ಳುತ್ತಾರೆ. ಕಳವಳಕಾರಿ ತಥ್ಯವೆಂದರೆ ಪ್ರಾಥಮಿಕ ಶಾಲಾ ಶಿಕ್ಷಕರು ಅವರು ಪಾಠ ಮಾಡಬೇಕಾದ ಮಕ್ಕಳಷ್ಟೇ ಮುಗ್ಧರು. ಬಿತ್ತುವ ಹಂತದ ಸಮಸ್ಯೆ ಇರುವಾಗ ಫಲ ಉತ್ತಮ ವಾಗಿರುವುದಾದರೂ ಹೇಗೆ? ಸಮಾಜದ ಏಳಿಗೆಯೇ ಎಲ್ಲರ ಒಟ್ಟಾರೆ ಗುರಿಯಾದರೆ ಮಾತ್ರ ಈ ಸಮಸ್ಯೆಯನ್ನು ಬಗೆ ಹರಿಸಬಹುದು, ಆದರೆ ಪ್ರಸಕ್ತದಲ್ಲಿ ಪರಿಹಾರಗಳನ್ನೇ ಸಮಸ್ಯೆಯ ಆಗರವನ್ನಾಗಿಸುವ ದುಷ್ಟಶಕ್ತಿಗಳು ಹೊರಗೂ ಒಳಗೂ ಕಾರ್ಯನಿರತವಾಗಿವೆ.
ವಿದ್ಯಾರ್ಥಿಗಳು ವಿಜ್ಞಾನ ವಿಷಯಗಳತ್ತ ಹೆಚ್ಚು ಆಸಕ್ತಿ ವಹಿಸುವುದಕ್ಕೆ ಉದ್ಯೋಗಾವಕಾಶವೇ ಮುಖ್ಯ ಕಾರಣ ಹೇಗೋ, ಹಾಗೆಯೇ ಕಲಾ ವಿಭಾಗವನ್ನು ಆಯ್ಕೆ ಮಾಡಿಕೊಂಡು ಮಾನವೀಯ ಶಾಸದತ್ತ ಹೊರಳುವ ವಿದ್ಯಾರ್ಥಿಗಳಿಗೆ ಗಣಿತ ಶಾಸ್ತ್ರವೂ ಸೇರಿದಂತೆ ವಿಜ್ಞಾನದ ವಿಷಯಗಳು ತಲೆಗೆ ಹತ್ತದಿರುವುದು ಮುಖ್ಯ ಕಾರಣ. (ಅಪರೂಪಕ್ಕೆ ಗಿರೀಶ್ ಕಾರ್ನಾಡರಂತಹವರು ಇದಕ್ಕೆ ಅಪವಾದ). ಇವರಲ್ಲಿ ಬಹುತೇಕರು ಯಾವುದೇ ಉತ್ತಮ ಉದ್ಯೋಗವನ್ನು ಪಡೆಯಲು ಬೌದ್ಧಿಕವಾಗಿ ಅನರ್ಹರಾದರೂ ಯೂನಿವರ್ಸಿಟಿಗಳಲ್ಲೂ, ಮಾಧ್ಯಮದಲ್ಲೂ, ಅಕಾಡೆಮಿಗಳಲ್ಲೂ ಇವರದ್ದೇ ಕಾರುಬಾರು.
ಗಿರೀಶರಂಥ ತಿಳಿವಳಿಕೆಯುಳ್ಳವರೂ ಒತ್ತಡಕ್ಕೆ ಮಣಿದೋ, ಮುಲಾಜಿಗೆ ಒಳಗಾಗೋ, ಸ್ವಂತ ಅಭ್ಯುದಯಕ್ಕೋ ಇವರೊಂದಿಗೆ
ಏಗುತ್ತಾರಷ್ಟೆ ಮಾತ್ರವಲ್ಲ, ಒಂದಾಗುತ್ತಾರೆ. ಒಂದಾಗಿ ಅವರಿಗೆ ಮನ್ನಣೆ ಒದಗಿಸುತ್ತಾರೆ. ಖೊಟ್ಟಿ ಸಂಸ್ಕೃತಿಗೆ ಚಲಾವಣೆ ದೊರಕಿಸಿಕೊಡುತ್ತಾರೆ. ಸುಳ್ಳುಗಳಿಗೆ ಸಾಂಸ್ಥಿಕ ರೂಪ ತೊಡಿಸುತ್ತಾರೆ. ವಿಕೃತತೆ ಕಲೆಯ ಸ್ವರೂಪ ಪಡೆದು ವಿಜೃಂಭಿಸುವುದಕ್ಕೆ ಸಾಕ್ಷಿಯಾಗುತ್ತಾರೆ.
ಇತಿಹಾಸ ಉದುರಿದ ಕೂದಲ ಜೊಂಪೆಯನ್ನು ಹೆಣೆದು ಮಾಡಲಾದ ಚೌರಿ – ಟೋಪಿಯಾಗಿ ರೂಪಾಂತರಗೊಂಡು ಸ್ವಾರ್ಥ
ರಾಜಕಾರಣಿಗಳ ಮುಡಿ ಏರುತ್ತದೆ. ವರ್ತಮಾನದ ಮೇಲೆ ನಿರಂತರ ಪ್ರಭಾವ ಬೀರುತ್ತಲೇ ಭವಿಷ್ಯವನ್ನು ರೂಪಿಸಬೇಕಾದ ಇತಿಹಾಸ ಕಪಿಮುಷ್ಠಿಗೆ ಸಿಲುಕಿದ್ದು ಹೀಗೆ. ಯಾವುದೇ ವಿಷಯದಲ್ಲಿ ಆಸಕ್ತಿ ಕೆರಳಿಸುವ ಶಿಕ್ಷಕರೇ ವಿರಳ. ಚರಿತ್ರೆಯ ಹಣೆಬರಹ ವಿಭಿನ್ನವಲ್ಲ. ಈ ದುಸ್ಥಿತಿಯನ್ನು ಇನ್ನಷ್ಟು ಹಾಳುಗೆಡವುತ್ತಿರುವುದು ಅಂತಹ ಬೋಧಕರಿಂದ ಕಲಿತ ಮೇಲ್ಕಂಡ ಅಲ್ಪಜ್ಞಾನಿ ಗಳು!
ವಿಜ್ಞಾನದಿಂದ ದೂರವುಳಿದ ಜನ ಹೇಗೊ ಪಡೆದ ತಿರುಗುವ ಕುರ್ಚಿಯಲ್ಲಿ ಕುಳಿತು ಸರ್ವಜ್ಞರಂತೆ ಪೋಸ್ ಕೊಡುತ್ತಾರೆ.
ನ್ಯೂಟನ್ನಿನ ನಿಯಮಗಳು ಇವರಿಗೆ ಅರ್ಥವಾಗುವುದಿಲ್ಲ. ಲೇಖನದ ಸಂದರ್ಭಕ್ಕೆ ಮೊದಲ ಮತ್ತು ಮೂರನೆಯ ನಿಯಮಗಳು ಸಾಕು. ಬಾಹ್ಯ ಬಲಪ್ರಯೋಗವಾಗುವವರೆಗೂ ಸ್ಥಿರ – ಚರಗಳೆರೆಡೂ ವಸ್ತುಗಳು ಆಯಾ ಸ್ಥಿತಿಯ ಮುಂದುವರಿಯುತ್ತವೆ. ಇದು ಮೇರು ಭೌತಶಾಸಜ್ಞನ ಮೊದಲ ನಿಯಮ. ಡಾ.ದಾಸ್ರಂತೆ ಸರಳ ಉದಾಹರಣೆಗಳ ಮೂಲಕ ಅರ್ಥಮಾಡಿಕೊಳ್ಳೋಣ.
ಟೇಬಲ್ ಕ್ಲೀನ್ ಮಾಡುವ ವ್ಯಕ್ತಿ ಎದುರು ನಿಂತು ನೀವು ಜಾಗ ಖಾಲಿ ಮಾಡಬೇಕೆಂದು ಸೂಚ್ಯವಾಗಿ ನೆನಪಿಸುವವರೆಗೂ
ಮೃಷ್ಟಾನ್ನವನ್ನು ಭುಜಿಸಿ ಎಲೆ ಖಾಲಿಯಾದ ಮೇಲೂ ಎಲೆಯನ್ನು ನೆಕ್ಕುತ್ತಿರುತ್ತೀರಿ, ಬೆರಳುಗಳನ್ನು ಚೀಪುತ್ತಿರುತ್ತೀರಿ. ಬಾಯ್ ಫ್ರೆಂಡ್ನ ಜತೆ ಸವಿ ಮಾತುಗಳ ವಿನಿಮಯವನ್ನು ಮಾಡಿದ ನವಪ್ರೇಮಿಯನ್ನು ಆ ಗುಂಗಿನಿಂದ ಹೊರ ತರುವುದು ಎದುರು ಕಾಣುವ ಪುಂಡು ದನ. ಮೊಘಲರ ಆಳ್ವಿಕೆಯಲ್ಲಿ ಶುರುವಾದ ವಿಗ್ರಹ ಭಂಜನೆ ಎರಡೂ ಆಕ್ರಮಣಕಾರಿ ರಿಲೀಜನಿಷ್ಟುಗಳಿಂದ ಮುಂದುವರಿಯುತ್ತಿರುವುದು, ಅದನ್ನು ತಡೆಯಬೇಕಾದ ಪೊಲೀಸರೂ ಸ್ವಾತಂತ್ರ್ಯ – ಪೂರ್ವ ಮನಸ್ಥಿತಿಯ ಮುಂದುವರಿದಿ ದ್ಧಾರೆ.
ಮೊಘಲರಿಂದ ಆರಂಭವಾಗಿ ಯೂರೋಪಿನ ಕಿರಿಸ್ತಾನರಿಂದ ಬಲಗೊಂಡ ಮತಾಂತರವೆಂಬ ಬೃಹತ್ ಕಾರ್ಖಾನೆ ನಿರಂತರ ವಾಗಿ ಮುಂದುವರಿಯುತ್ತಿದೆ. ನಿತ್ಯ ಬಸ್ನಲ್ಲಿ ಸಿಗುತ್ತಿದ್ದ ಹುಡುಗಿ ಇದ್ದಕ್ಕಿದ್ದಂತೆ ಈಜುಡುಗೆಯಲ್ಲಿ ಸಿಕ್ಕಿ ಆತನಿಗೆ ಅಲರ್ಜಿ ಯಾದಂತೆ ಅಮಾಯಕ ಹಿಂದೂ ಗಳಿಗೂ ಅಲರ್ಜಿಯಾಗಬಾರದೆಂದು ಯೇಸುಪಂಥೀಯರು ಸನ್ಯಾಸಿಗಳಂತೆ ಕಾವಿ ಗೆಟ್ – ಅಪ್ನ ಕಾಣಿಸಿಕೊಳ್ಳಲಾರಂಭಿಸಿದ್ಧಾರೆ.
ಪ್ರೇಮದ ಹೂ ಬಿಡುವುದೇ ಅವರ ಹೃದಯಗಳದರಿಂದ ಚರ್ಚ್ಗಳೂ ಆಲಯಗಳ ಹೆಸರು ಹೊತ್ತು ಪ್ರಸಾದವೂ ಪುಳಿಯೋಗರೆ ಯಾಗಿ ಪರಿವರ್ತನೆ ಯಾಗಿದೆ. (ಸ್ಥಳಾವಭಾವದಿಂದ ನಾಮವನ್ನು ಯೇಸುವಿನ ಹಣೆಯ ಬದಲಾಗಿ ಹಿಂದೂಗಳ ಹಣೆಗಳ ಮೇಲೇ
ತೀಡಲಾಗುತ್ತಿದೆ.) ಸ್ವಾರ್ಥ ಸಾಧನೆಗೆ ಅಂದೂ ಸ್ವಧರ್ಮವನ್ನೂ, ದೇಶವನ್ನೂ ಬಲಿಗೊಡಲು ಉತ್ಸುಕರಾಗಿದ್ದ ಹಿಂದೂ ನಾಯಕರಿದ್ದರು. ಇಂದು ಅವರ ಸಂಖ್ಯೆ ನೂರ್ಮಡಿಗೊಂಡಿರುವುದು ಬಿಟ್ಟರೆ ಅಂದಿಗೂ ಇಂದಿಗೂ ಅಂತಹ ವ್ಯತ್ಯಾಸವೇನೂ ಕಾಣುತ್ತಿಲ್ಲ.
ಕಾನೂನು ಜಾರಿಗೊಳಿಸಬೇಕಾದ ಮಂದಿ ಅಂದೂ ಅನ್ನದಾತರ ಅಡಿಯಾಳಾಗಿದ್ದರು, ಇಂದಿಗೂ ಸೂತ್ರದ ಬೊಂಬೆಗಳಾಗೇ ಮುಂದುವರಿದಿದ್ಧಾರೆ. ಶತಮಾನಗಳ ಕಾಲ ದಾಸ್ಯಕ್ಕೆ ಬಿದ್ದ ಭಾರತೀಯರು ಇನ್ನೂ ಗುಲಾಮಿ ಸ್ಥಿತಿಯಲ್ಲಿ ಮುಂದುವರಿಯು ತ್ತಿದ್ದು ಅದಕ್ಕೆ ಅಲ್ಪಮಟ್ಟಿನ ತಡೆ ಬಿದ್ದಿರುವುದು ಮುಖ್ಯವಾಗಿ ಸಾಮಾಜಿಕ ಜಾಲತಾಣದಿಂದ. ಈ ವ್ಯವಸ್ಥೆಯ ಚೌಕಟ್ಟಿನ ಹೊರಗಿನ ಶಕ್ತಿಗೆ ಮುಂದುವರಿದ ಯಥಾಸ್ಥಿತಿಯನ್ನು ತಡೆಯುವಷ್ಟು ಬಲಬಂದಿಲ್ಲ.
ನ್ಯೂಟನ್ನಿನ ಮೂರನೇ ನಿಯಮವನ್ನು ಅರ್ಥಮಾಡಿಕೊಳ್ಳುವುದು ಅಷ್ಟೇನೂ ಕಷ್ಟವಲ್ಲ. ನಮ್ಮ ನೆಲದ ಸಂಸ್ಕೃತಿಯಿಂದ ಬೇರ್ಪಡಿಸಲಾಗದ ಭಾರತದ ಧಾರ್ಮಿಕ ಬೇರುಗಳನ್ನು ನಿರಂತರವಾಗಿ ಸಡಿಲಗೊಳಿಸುತ್ತಿರುವ ಹೊರಗಿನ ಮತ್ತು ಒಳಗಿನ ಶಕ್ತಿಗಳಿಗಂತೂ ಅದನ್ನು ಅರ್ಥ ಮಾಡಿಸುವುದು ಕಷ್ಟ ಅಲ್ಲವೇ ಅಲ್ಲ. ಹೇಳಿ ಕೇಳಿ ಕ್ರಿಯೆ – ಪ್ರತಿಕ್ರಿಯೆಯ ಪ್ರತಿಪಾದಕನಾದ ನ್ಯೂಟನ್ ಯುರೋಪಿನವನೇ. ಈ ರಿಲೀಜನಿಷ್ಟುಗಳಿಗೆ ತಿಳಿಯ ದಿರುವ ಮುಖ್ಯ ಸಂಗತಿಯೊಂದಿದೆ.
ಅವನ ಮೂರನೇ ತತ್ವವನ್ನೇ ಹೋಲುವ, ಅದಕ್ಕಿಂತಲೂ ಪುರಾತನವಾದ ಕರ್ಮ ಸಿದ್ಧಾಂತ ನಮ್ಮ ನೆಲದ ಉದ್ಭವಿಸಿದ್ದು. ಭಾರತದ ಮೂಲ ಸ್ವರೂಪವನ್ನೇ ಹಾಳುಗೆಡವಲು ನಿಂತವರೂ, ಅದಕ್ಕೆ ಕುಮ್ಮಕ್ಕು ನೀಡುತ್ತಿರುವ ಸ್ಥಳೀಯರೂ, ಅದನ್ನೆಲ್ಲ ಮೌನವಾಗಿ ಅನುಭವಿಸುತ್ತಿರುವ ಅಮಾಯಕರೂ, ವೀಕ್ಷಿಸು ತ್ತಿರುವ ಅಸಹಾಯಕರೆಲ್ಲರಿಗೂ ಕರ್ಮವೆಂಬ ಹೊರಗಿನ ಶಕ್ತಿ ತಪರಾಕಿ ನೀಡುತ್ತದೆ. ಅಂದು ನ್ಯೂಟನ್ನಿನ ನಿಯಮಗಳು ವಿಜ್ಞಾನವರಿಯದವರಿಗೂ ಧಿಗ್ಗನೆ ಹೊಳೆದಿರುತ್ತವೆ. ವಿಜ್ಞಾನ ತಲೆಗೆ ಹತ್ತದೆಂದು ಮಾನವ ಶಾಸದತ್ತ ಹೊರಳಿದವರು ಗಮನಿಸಬೇಕು.