Friday, 22nd November 2024

ನಾಲ್ಕನೇ ಟೆಸ್ಟ್: ಎರಡನೇ ದಿನ ವರುಣನ ಆಟ

ಬ್ರಿಸ್ಬೇನ್‌: ಗವಾಸ್ಕರ್‌-ಬೋರ್ಡ್‌ರ್‌ ಟ್ರೋಫಿಯ ನಾಲ್ಕನೇ ಟೆಸ್ಟ್‌’ನಲ್ಲಿ ಆತಿ ಥೇಯ ಆಸೀಸ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 369 ರನ್ನುಗಳಿಗೆ ಆಲೌಟಾಗಿದೆ.

ಪ್ರತಿಯಾಗಿ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾದ ಆರಂಭಿ ಕರು ಈಗಾಗಲೇ ತಮ್ಮ ಆಟ ಮುಗಿಸಿದ್ದಾರೆ. ನಾಯಕ ಅಜಿಂಕ್ಯ ರೆಹಾನೆ ಹಾಗೂ ಚೇತೇಶ್ವರ ಪೂಜಾರ ಟೀ ವಿರಾಮದವರೆಗೂ ಕ್ರಮವಾಗಿ ಎರಡು ಮತ್ತು ಎಂಟು ರನ್‌ ಗಳಿಸಿ ಅಜೇಯರಾಗುಳಿದಿದ್ದಾರೆ.

ಇದೇ ಹೊತ್ತಿಗೆ ಆರಂಭವಾದ ವರುಣನ ಆರ್ಭಟಕ್ಕೆ ಆಟ ನಿಂತಿದೆ. ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸೀಸ್‌ಗೆ ಮಾರ್ಕಸ್‌ ಲ್ಯಾಬಶ್ಗನನೆ ಶತಕ ಗಮನಾರ್ಹ ಮೊತ್ತ ಪೇರಿಸಲು ಸಾಧ್ಯವಾಯಿತು.ನಾಯಕ ಟಿಮ್ ಪೇನ್ 50 ರನ್ ಗಳಿಸಿ ತಂಡದ ಮೊತ್ತ ಹೆಚ್ಚಲು ಕಾರಣರಾದರು. ಮೊದಲ ಟೆಸ್ಟ್ ಆಡುತ್ತಿರುವ ವಾಷಿಂಗ್ಟನ್ ಸುಂದರ್ ಮತ್ತು ಶಾರ್ದೂಲ್ ಠಾಕೂರ್ ತಲಾ 3 ವಿಕೆಟ್ ಪಡೆದುಕೊಂಡು ಆಸಿಸ್ ರನ್ ವೇಗಕ್ಕೆ ಬ್ರೇಕ್ ಹಾಕಿದ್ದರು.

ಇವತ್ತು ಶಾರ್ದೂಲ್ ಠಾಕೂರ್ ಟಿಮ್ ಪೇನ್, ಪ್ಯಾಟ್ ಕಮಿನ್ಸ್ ವಿಕೆಟ್ ಪಡೆದರೆ, ವಾಷಿಂಗ್ಟನ್ ಸುಂದರ್, ಕೆಮರೂನ್ ಗ್ರೀನ್ ಮತ್ತು ನಥನ್ ಲಯೋನ್ ವಿಕೆಟ್ ಪಡೆದರು. ನಟರಾಜನ್, ಜೋಶ್ ಹ್ಯಾಜಲ್‌ವುಡ್ ವಿಕೆಟ್ ಪಡೆದು ಇನ್ನಿಂಗ್ಸ್ ಮುಗಿಸಿದರು.

ಆರಂಭಿಕ ‌ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ(44), ಶುಭ್ಮನ್ ಗಿಲ್(7) ಕ್ರಮವಾಗಿ ನಥನ್ ಲಯೋನ್ ಮತ್ತು ಪ್ಯಟ್ ಕಮಿನ್ಸ್ ಅವರಿಗೆ ವಿಕೆಟ್ ಒಪ್ಪಿಸಿದ್ದಾರೆ. ಕ್ರೀಸ್‌ನಲ್ಲಿರುವ ಚೇತೇಶ್ವರ್ ಪೂಜಾರ ಮತ್ತು ನಾಯಕ ಅಜಿಂಕ್ಯ ರಹಾನೆ ಇನ್ನಿಂಗ್ಸ್ ಕಟ್ಟುವ ಪ್ರಯತ್ನ ನಡೆಸಿದ್ದಾರೆ.