Saturday, 23rd November 2024

ಮತ್ತೆ ಮಳೆಯಾಟ ಶುರು: ನಾಳೆಯೇ ಕ್ಲೈಮ್ಯಾಕ್ಸ್

ಬ್ರಿಸ್ಬೇನ್: ಗಬ್ಬಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ವಿರುದ್ದದ ನಾಲ್ಕನೇ ಟೆಸ್ಟ್‌ನ ನಾಲ್ಕನೇ ದಿನ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ 294 ರನ್ನಿಗೆ ಆಲೌಟಾಗಿ ಪ್ರವಾಸಿಗರಿಗೆ 328 ರನ್ನುಗಳ ಗೆಲುವಿನ ಗುರಿ ನೀಡಿದೆ. ಆಸೀಸ್‌ ಪ್ರಥಮ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದೆ.

ಪ್ರತಿಯಾಗಿ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ ಎರಡು ಓವರುಗಳಲ್ಲಿ ನಾಲ್ಕು ರನ್‌ ಗಳಿಸುವಷ್ಟರಲ್ಲಿ ವರುಣನ ಆಟ ಮತ್ತೆ ಮುಂದುವರಿದಿದೆ.

ಇದಕ್ಕೂ ಮುನ್ನ ಭಾರತ ತಂಡದ ವಿರುದ್ಧ ಕೊನೆಯ ಹಾಗೂ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬಿರುಸಿನ ಬ್ಯಾಟಿಂಗ್‌ಗೆ ಕಡಿವಾಣ ಹಾಕುವಲ್ಲಿ ಭಾರತೀಯ ಬೌಲರ್‌ಗಳು ಯಶಸ್ವಿಯಾದರು. ಭಾರತದ ಯುವ ವೇಗಿ ಮುಹಮ್ಮದ್ ಸಿರಾಜ್ ಐದು ವಿಕೆಟ್‌ ಕಿತ್ತು, ಆತಿಥೇಯರ ರನ್‌ ಪ್ರವಾಹಕ್ಕೆ ಕಡಿವಾಣ ಹೇರಿದರು. ಇವರಿಗೆ ಇನ್ನೋರ್ವ ವೇಗಿ ಶಾರ್ದೂಲ್‌ ಉತ್ತಮ ಬೆಂಬಲ ನೀಡಿದರು. ಶಾರ್ದೂಲ್‌ ನಾಲ್ಕು ವಿಕೆ‌ಟ್‌ ಕಬಳಿಸಿದರೆ, ಉಳಿದ ಒಂದು ವಿಕೆಟ್‌ ಸ್ಪಿನ್ನರ್‌ ವಾಷಿಂಗ್ಟನ್‌ ಸುಂದರ್‌ ಪಾಲಾಯಿತು.