ಬ್ರಿಸ್ಬೇನ್: ಗಬ್ಬಾ ಸ್ಟೇಡಿಯಂನಲ್ಲಿ ನಾಲ್ಕನೇ ಹಾಗೂ ನಿರ್ಣಾಯಕ ಟೆಸ್ಟ್‌ನ ನಾಲ್ಕನೇ ದಿನ ಕೊನೆಯಲ್ಲಿ ಮಳೆ ಆರಂಭವಾಗಿ, ದಿನದ ಆಟ ಮುಕ್ತಾಯಗೊಳಿಸಲು ಅಂಪಾಯರ್‌ಗಳು ನಿರ್ಧಾರ ತೆಗೆದುಕೊಂಡಿರುವುದು ವರದಿಯಾಗಿದೆ. ಈ ಮೂಲಕ ಐದನೇ ದಿನದ ಮೊದಲಾರ್ಧದ ಆಟ ತುಂಬಾ ಪ್ರಾಮುಖ್ಯತೆ ಪಡೆದಿದೆ.
ಭಾರತ ವಿರುದ್ದದ ನಾಲ್ಕನೇ ಟೆಸ್ಟ್‌ನ ನಾಲ್ಕನೇ ದಿನ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ 294 ರನ್ನಿಗೆ ಆಲೌಟಾಗಿ ಪ್ರವಾಸಿಗರಿಗೆ 328 ರನ್ನುಗಳ ಗೆಲುವಿನ ಗುರಿ ನೀಡಿದೆ. ಆಸೀಸ್ ಪ್ರಥಮ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದೆ.
ಭಾರತದ ಯುವ ವೇಗಿ ಮುಹಮ್ಮದ್ ಸಿರಾಜ್ ಐದು ವಿಕೆಟ್ ಕಿತ್ತು, ಆತಿಥೇಯರ ರನ್ ಪ್ರವಾಹಕ್ಕೆ ಕಡಿವಾಣ ಹೇರಿದರು. ಇವರಿಗೆ ಇನ್ನೋರ್ವ ವೇಗಿ ಶಾರ್ದೂಲ್ ಉತ್ತಮ ಬೆಂಬಲ ನೀಡಿದರು. ಶಾರ್ದೂಲ್ ನಾಲ್ಕು ವಿಕೆಟ್ ಕಬಳಿಸಿದರೆ, ಉಳಿದ ಒಂದು ವಿಕೆಟ್ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಪಾಲಾಯಿತು.