ಭೋಪಾಲ್: ಮಹಿಳಾ ಅಧಿಕಾರಿಯ ಮೇಲೆ ಮಧ್ಯಪ್ರದೇಶ ಕಾಂಗ್ರೆಸ್ ಶಾಸಕರೊಬ್ಬರು ದರ್ಪ ತೋರಿಸಿ, ಬೆದರಿಕೆ ಹಾಕಿದ್ದು, ನೀನು ಗಂಡಾಗಿದ್ದರೆ ನಿನ್ನ ಕಾಲರ್ ಹಿಡಿಯುತ್ತಿದ್ದೆ ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ.
ಕಾಂಗ್ರೆಸ್ ಶಾಸಕ ಹರ್ಷ್ ವಿಜಯ್ ಟ್ರ್ಯಾಕ್ಟರ್ ರ್ಯಾಲಿ ನಡೆಸುವ ಕುರಿತಾಗಿ ಉಪ ವಿಭಾಗೀಯ ಮೆಜಿಸ್ಟ್ರೇಟ್ (ಎಸ್ಡಿಎಂ) ಕಚೇರಿಗೆ ಮೆಮೋರೆಂಡಮ್ ನೀಡಲು ಹೋಗಿದ್ದರು. ಈ ವೇಳೆ ಎಸ್ಡಿಎಂ ಅವರು ಶಾಸಕರನ್ನು ಭೇಟಿ ಮಾಡುವಲ್ಲಿ ತಡವಾಗಿದೆ. ಸಿಟ್ಟಿಗೆದ್ದ ಶಾಸಕ ಮಹಿಳಾ ಅಧಿಕಾರಿಯೊಂದಿಗೆ ವಾಗ್ವಾದಕ್ಕಳಿದಿದ್ದಾರೆ. ನೀನು ಹೆಣ್ಣು. ಗಂಡಾಗಿದ್ದಿದ್ದರೆ ಕಾಲರ್ ಹಿಡಿದು ಮೆಮೋರೆಂಡಮ್ ಕೊಟ್ಟು ಹೋಗುತ್ತಿದ್ದೆ ಎಂದು ಬೆದರಿಸಿದ್ದಾರೆ.