ಸಿಂಧನೂರು: ರೈತರು ಭತ್ತ ಇನ್ನಿತರ ಧಾನ್ಯಗಳನ್ನು ಈಗಾಗಲೇ ಸರ್ಕಾರದಿಂದ ಖರೀದಿ ಕೇಂದ್ರ ತೆರೆಯಲಾಗಿದೆ ಅಲ್ಲಿ ಕೊಟ್ಟು ಎಲ್ಲ ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೃಷಿ ಬೆಲೆ ಆಯೋಗ ರಾಜ್ಯ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಹೇಳಿದರು.
ಅವರು ನಗರದ ತಸಿಲ್ದಾರ್ ಕಾರ್ಯಾಲಯದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಹಮ್ಮಿಕೊಳ್ಳಲಾಗಿದ್ದ ಸೋಮವಾರ ಸಭೆಯಲ್ಲಿ ಮಾತನಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಭತ್ತ ,ಜೋಳ ಹಾಗೂ ತೊಗರಿ ಖರೀದಿ ಕೇಂದ್ರಗಳು ತೆರೆಯಲಾಗಿದೆ ಇದರ ಲಾಭ ರೈತರು ಪಡೆದುಕೊಳ್ಳಬೇಕು ಎಂದರು.
ಭತ್ತಕ್ಕೆ 1869, ಎ ಗ್ರೇಡ್ ಭತ್ತಕ್ಕೆ 1888, ತೊಗರಿ 6 ಸಾವಿರ ರೂ. ಒಬ್ಬರಿಗೆ 20 ಕ್ವಿಂಟಾಲ್ ನಂತೆ ಇರುತ್ತದೆ, ಜೋಳ 2620 ರಂತೆ ಎಕರೆಗೆ 25 ಕ್ವಿಂಟಾಲ್ ಇರುತ್ತದೆ, ಗರಿಷ್ಠ 75 ಕ್ವಿಂಟಾಲ್ ಇರುತ್ತದೆ, ಬಿಳಿ ಜೋಳ 2640 ಎಕರೆಗೆ 15 ಗರಿಷ್ಠ 75 ಇರುತ್ತದೆ, ಸಣ್ಣ ಅತಿ ಸಣ್ಣ ರೈತರಿಗೆ ಖರೀದಿ ಕೇಂದ್ರಗಳಿಂದ ಲಾಭವಾಗುತ್ತದೆ ಎಂದರು.
ರೈತರಿಗೆ ಹೆಚ್ಚು ಆದಾಯ ಯಾವುದರಲ್ಲಿ ಬರುತ್ತದೆ ಅಲ್ಲಿ ಕೊಡುವುದು ತಪ್ಪು ಇಲ್ಲ ಎಂದರು ಈ ಸಂದರ್ಭದಲ್ಲಿ ಜಿಪಂ ಸದಸ್ಯ ರಾದ ಎನ್ .ಶಿವನಗೌಡ ಗೊರೆಬಾಳ್, ಅಮರೇಗೌಡ ವಿರುಪಾಪುರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.