Saturday, 23rd November 2024

ಬ್ರಿಸ್ಬೇನ್ ನಲ್ಲಿ ಆಸೀಸ್‌ ಸೋತಿರಲಿಲ್ಲ… ಈಗ…?

ಬ್ರಿಸ್ಬೇನ್: ಆಸ್ಟ್ರೇಲಿಯಾ 33 ವರ್ಷಗಳಿಂದ ಇಲ್ಲಿ ಸೋಲು ಕಂಡಿರಲಿಲ್ಲ.

33 ವರ್ಷಗಳ ನಂತ್ರ ಟೀಂ ಇಂಡಿಯಾ ಬ್ರಿಸ್ಬೇನ್ ನಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ 369 ರನ್ ಗಳಿಸಿತ್ತು. ಗುರಿ ಬೆನ್ನು ಹತ್ತಿದ ಟೀಂ ಇಂಡಿಯಾ 336 ರನ್ ಗಳಿಸಿತ್ತು. ಎರಡನೇ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ 294 ರನ್ ಗಳಿಸಿತ್ತು. ಒಟ್ಟು 328 ರನ್ ಗಳ ಗುರಿ ಬೆನ್ನು ಹತ್ತದ ಭಾರತ ಗೆಲುವು ಸಾಧಿಸಿದೆ.

ಶುಭಮನ್ ಗಿಲ್, ಚೇತೇಶ್ವರ ಪೂಜಾರ ನಂತರ ರಿಷಭ್ ಪಂತ್ ಅವರ ಅತ್ಯುತ್ತಮ ಬ್ಯಾಟಿಂಗ್ ಕಾರಣ ಭಾರತ ನಾಲ್ಕನೇ ಟೆಸ್ಟ್ ಗೆದ್ದಿದೆ. ಗಿಲ್ 91, ಪೂಜಾರಾ 56 ಮತ್ತು ಪಂತ್ ಅಜೇಯ 89 ರನ್ ಗಳಿಸಿದರು.