Thursday, 19th September 2024

ಜೋ ಬೈಡೆನ್, ಕಮಲಾ ಹ್ಯಾರಿಸ್ ಪದಗ್ರಹಣ ಇಂದು

ವಾಷಿಂಗ್ಟನ್: ಅಮೆರಿಕದ ನೂತನ ಅಧ್ಯಕ್ಷ- ಉಪಾಧ್ಯಕ್ಷರಾಗಿ ಜೋ ಬೈಡೆನ್ ಮತ್ತು ಕಮಲಾ ಹ್ಯಾರಿಸ್ ಬುಧವಾರ ಪದಗ್ರಹಣ ಮಾಡಲಿದ್ದಾರೆ. ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿದಾಯ ಭಾಷಣದಲ್ಲಿ ನೂತನ ಅಧ್ಯಕ್ಷರಿಗೆ ಶುಭ ಹಾರೈಸಿದ್ದಾರೆ.

ಹೊಸ ಅಧ್ಯಕ್ಷರಿಗೆ ನಮ್ಮ ಶುಭಾಶಯಗಳನ್ನು ಅರ್ಪಿಸುತ್ತಿದ್ದೇವೆ. ಅದೃಷ್ಟ ಅವರ ಪಾಲಿಗಿರಲೆಂದು ಬಯಸು ತ್ತೇವೆ ಎಂದು ಟ್ರಂಪ್ ತನ್ನ ಸಂದೇಶದಲ್ಲಿ ಹೇಳಿದ್ದಾರೆ.

ಭಿನ್ನಾಭಿಪ್ರಾಯಗಳ ನಡುವೆ ಏಕತೆಯನ್ನು ತೋರಲು, ಪಕ್ಷಪಾತದ ಹಗೆತನವನ್ನು ಮೀರಿ ಬರಲು ಮತ್ತು ಸಮಾನ ಗುರಿಯತ್ತ ಮುನ್ನಡೆಯಲು ಡೊನಾಲ್ಡ್ ಟ್ರಂಪ್‌ ಕರೆ ನೀಡಿದ್ದಾರೆ.

ಹೊಸ ಯುದ್ಧಗಳನ್ನು ಪ್ರಾರಂಭಿಸದ ದಶಕಗಳಲ್ಲಿ ಮೊದಲ ಅಧ್ಯಕ್ಷನಾಗಿರುವುದಕ್ಕೆ ನಾನು ವಿಶೇಷವಾಗಿ ಹೆಮ್ಮೆಪಡುತ್ತೇನೆ ಎಂದರು.