ಬೆಂಗಳೂರು: ಡ್ರಗ್ಸ್ ಕೇಸ್ನಲ್ಲಿ ಬಂಧನಕ್ಕೊಳಪಟ್ಟು ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಸ್ಯಾಂಡಲ್ವುಡ್ನ ನಟಿ ರಾಗಿಣಿ ದ್ವಿವೇದಿಗೆ ಗುರುವಾರ ಜಾಮೀನು ಸಿಕ್ಕಿದ್ದರೂ ಬಿಡುಗಡೆಗಾಗಿ ಶುಕ್ರವಾರ ಸಂಜೆವರೆಗೂ ಕಾಯಬೇಕಾಗಿದೆ.
ಕಳೆದ ವರ್ಷ ಸೆಪ್ಟೆಂಬರ್ 14ರಿಂದ ಜೈಲಿನಲ್ಲೇ ಇರುವ ರಾಗಿಣಿ, ಜಾಮೀನು ಕೋರಿ ಸುಪ್ರೀಂಕೋರ್ಟ್ನ ಮೊರೆಹೋಗಿದ್ದರು. ಕೋರ್ಟ್ ಗುರುವಾರ ರಾಗಿಣಿಗೆ ಜಾಮೀನು ಮಂಜೂರು ಮಾಡಿದೆ. ಆದರೆ, ಸುಪ್ರೀಂಕೋರ್ಟ್ನ ಆದೇಶ ಪ್ರತಿ ಎನ್ಡಿಪಿಎಸ್ ನ್ಯಾಯಾಲಯಕ್ಕೆ ಇನ್ನೂ ಬಂದಿಲ್ಲ. ಹಾಗಾಗಿ ರಾಗಿಣಿಗೆ ಬಿಡುಗಡೆ ಸಿಕ್ಕಿಲ್ಲ. ನಾಳೆ ಎನ್ಡಿಪಿಎಸ್ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟಿನ ಆದೇಶ ಪತ್ರಿಯನ್ನ ರಾಗಿಣಿ ಪರ ವಕೀಲರು ಹಾಜರು ಪಡಿಸಲಿದ್ದಾರೆ. ಸಂಜೆ ಬಳಿಕವೇ ರಾಗಿಣಿಗೆ ಜೈಲಿನಿಂದ ಬಿಡುಗಡೆ ಭಾಗ್ಯ ಸಿಗಲಿದೆ.
ನಾಳೆ ಸಂಜೆಯವರೆಗೆ ಕಾಯಬೇಕಾದ ಹಿನ್ನೆಲೆ ಮಂಕಾದ ರಾಗಿಣಿ ಕೊಠಡಿಯಲ್ಲಿ ಸುಮ್ಮನೆ ಕುಳಿತಿದ್ದರು ಎಂದು ಮೂಲಗಳು ತಿಳಿಸಿವೆ.