Thursday, 19th September 2024

ಕ್ರಿಕೆಟ್ ಅಂಪಾಯರ್ ಆಗಿ ಆಲ್ ರೌಂಡರ್ ಜಿಮ್ಮಿ ನೀಶಮ್

ಕ್ರೈಸ್ಟ್ ಚರ್ಚ್: ನ್ಯೂಜಿಲ್ಯಾಂಡ್ ನ ಪ್ರತಿಭಾವಂತ ಆಲ್ ರೌಂಡರ್ ಜಿಮ್ಮಿ ನೀಶಮ್ ಕ್ರಿಕೆಟ್ ಅಂಪಾಯರ್ ಆಗಿದ್ದಾರೆ. ಪ್ರಸಿದ್ದ ಅಂಪಾಯರ್ ಬಿಲ್ಲಿ ಬೌಡೆನ್ ಜೊತೆ ನೀಶಮ್ ತೀರ್ಪುಗಾರನ ಕೆಲಸ ಮಾಡಿದರು.

ಕ್ರೈಸ್ಟ್ ಚರ್ಚ್ ಮೈದಾನದಲ್ಲಿ ಕ್ರಿಕೆಟ್ ಆಟಗಾರರು ಮತ್ತು ರಗ್ಬಿ ಆಟಗಾರರ ನಡುವೆ ಚಾರಿಟಿ ಕ್ರಿಕೆಟ್ ಪಂದ್ಯ ಆಯೋಜಿಸ ಲಾಗಿತ್ತು. ಕಿವೀಸ್ ಮಾಜಿ ನಾಯಕ ಡೇನಿಯಲ್ ವೆಟೋರಿ ಕ್ರಿಕೆಟಿಗರ ತಂಡದ ನಾಯಕತ್ವ ವಹಿಸಿದ್ದರೆ, ರಗ್ಬಿ ಆಟಗಾರರ ತಂಡದ ನಾಯಕತ್ವವನ್ನು ಸರ್ ಗ್ರಹಾಂ ಹೆನ್ರಿ ವಹಿಸಿದ್ದರು.

ಪಂದ್ಯದಲ್ಲಿ ಜಿಮ್ಮಿ ನೀಶಮ್ ಅಂಪಾಯರಿಂಗ್ ನಡೆಸಿ ಗಮನ ಸೆಳೆದರು.