ಥಾಣೆ: ರೈಲು ಹಳಿ ನಿರ್ವಹಣಾ ಕಾರ್ಯದ ವೇಳೆ ಟ್ರ್ಯಾಕ್ ರಿಲೇ ರೈಲು (ಟಿಆರ್ಟಿ) ಯಂತ್ರದಲ್ಲಿ ಸಿಕ್ಕಿ ಬಿದ್ದ ಕಾರಣ, ಕಾರ್ಮಿಕ ಮೃತಪಟ್ಟು, ಇಬ್ಬರು ತೀವ್ರ ಗಾಯಗೊಂಡಿದ್ದಾರೆ.
ಬುಧವಾರ ಮಹಾರಾಷ್ಟ್ರದ ಕಲ್ಯಾಣ್ ಬಳಿ ರೈಲು ಹಳಿ ನಿರ್ವಹಣೆ ಸಂದರ್ಭದಲ್ಲಿ ಟಿಆರ್ಟಿ ಯಂತ್ರ ವಿಫಲಗೊಂಡು ಘಟನೆ ಸಂಭವಿಸಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಥಾಣೆ ಜಿಲ್ಲೆಯ ಅಂಬರ್ನಾಥ್ ಮತ್ತು ಬದ್ಲಾಪುರ ವಿಭಾಗದ ನಡುವಿನ ಟಿಆರ್ಟಿ ಯಂತ್ರ ಹಾಗೂ ರೈಲು ಸಂಚಾರವನ್ನು ಸ್ಥಗಿತ ಗೊಳಿಸಲಾAಗಿದೆ ಎಂದು ಕೇಂದ್ರ ರೈಲ್ವೆ ಅಧಿಕಾರಿ ಹೇಳಿದ್ದಾರೆ.
ಗಾಯಗೊಂಡವರನ್ನು ಸಮೀಪದ ಆಸ್ಪತ್ರೆ ಸೇರಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ಕಾರ್ಮಿಕನ ದೇಹವನ್ನು ಬದ್ಲಾಪುರ ಗ್ರಾಮೀಣ ಆಸ್ಪತ್ರೆಯಲ್ಲಿರಿಸಲಾಗಿದೆ. ಬೆಳಗ್ಗಿನ ಜಾವ ಅಂಬರ್ನಾಥ್ ಮತ್ತು ಬದ್ಲಾಪುರ ನಡುವೆ ಟಿಆರ್ಟಿ ಟ್ರ್ಯಾಕ್ ಯಂತ್ರ ವಿಫಲವಾಗಿತ್ತು. ಅದರ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು ವೇಳೆ ಈ ಅಪಘಾತ ಸಂಭವಿಸಿದೆ.