Saturday, 23rd November 2024

ಫೆಬ್ರವರಿ 28ರವರೆಗೆ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವಿಲ್ಲ

ನವದೆಹಲಿ : ಭಾರತ ಸರ್ಕಾರ ಫೆಬ್ರವರಿ 28ರ ರಾತ್ರಿ 11.59ರ ವರೆಗೆ ನಿಗದಿತ ವಾಣಿಜ್ಯ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ನಿಷೇಧಿಸಿದೆ. ಆದರೆ, ಈ ನಿರ್ಬಂಧ ಅಂತಾರಾಷ್ಟ್ರೀಯ ಸರಕು ಸಾಗಾಟ ವ್ಯವಹಾರಗಳಿಗೆ ಅನ್ವಯಿಸುವುದಿಲ್ಲ ಎಂಬುದಾಗಿ ತಿಳಿಸಿದೆ. ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ  ಈ ಆದೇಶ ಹೊರಬಿದ್ದಿದೆ.

ಈ ಸಂಬಂಧ ಪರಿಷ್ಕೃತ ಆದೇಶ ಹೊರಡಿಸಿರುವ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಅಂತಾರಾ ಷ್ಟ್ರೀಯ ನಿಗದಿತ ಮಾರ್ಗಗಳಲ್ಲಿ ನಿಗದಿತ ಮಾರ್ಗಗಳಲ್ಲಿ ‘ಸಕ್ಷಮ ಪ್ರಾಧಿಕಾರ’ (ಕೇಸ್-ಟು ಕೇಸ್ ಆಧಾರದ ಮೇಲೆ) ವಿಮಾನ ಹಾರಾಟಕ್ಕೆ ಅವಕಾಶ ನೀಡಬಹುದು ಎಂದು ಹೇಳಿದೆ.

ಇನ್ನೂ ಮುಂದುವರೆದು, ಕೊರೋನಾ ಸೋಂಕಿನ ಭೀತಿಯ ಹಿನ್ನಲೆಯಲ್ಲಿ, ಭಾರತಕ್ಕೆ ಅಂತರಾಷ್ಟ್ರೀಯ ವಿಮಾನಗಳ ಸಂಚಾರವನ್ನು ಫೆಬ್ರವರಿ 28, 2021ರವರೆಗೆ ನಿಷೇಧಿಸಲಾಗಿದೆ ಎಂಬುದಾಗಿ ಆದೇಶಿಸಿದೆ.