ಚೆನ್ನೈ: ತಮಿಳುನಾಡಿನ ಮಧುರೈನಲ್ಲಿ ಸುಮಾರು 50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಜಯಲಲಿತಾ, ಎಂಜಿಆರ್ ದೇವಾಲಯ ಉದ್ಘಾಟನೆ ಶನಿವಾರ ನಡೆಯಲಿದೆ.
ತಮಿಳುನಾಡು ವಿಧಾನಸಭೆ ಚುನಾವಣೆಗೆ ಕೆಲವು ತಿಂಗಳು ಬಾಕಿ ಉಳಿದಿದ್ದು, ಅಣ್ಣಾಡಿಎಂಕೆಯ ಪ್ರಮುಖ ನಾಯಕರ ದೇಗುಲ ಉದ್ಘಾಟನೆ ಮಹತ್ವ ಪಡೆದುಕೊಂಡಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ ಅಣ್ಣಾಡಿಎಂಕೆ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಜಯಲಲಿತಾ ಪರಂಪರೆಯ ಲಾಭ ಪಡೆಯಲು ಯತ್ನಿಸುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
₹ 79 ಕೋಟಿ ವೆಚ್ಚದಲ್ಲಿ ಚೆನ್ನೈನ ಪೋಯಸ್ ಗಾರ್ಡನ್ ಪ್ರದೇಶದ ಜಯಲಲಿತಾ ನಿವಾಸವನ್ನು ಸ್ಮಾರಕವಾಗಿ ಪರಿವರ್ತಿಸ ಲಾಗಿದ್ದು, ಇದೇ ವಾರದ ಆರಂಭದಲ್ಲಿ ಸಿಎಂ ಪಳನಿಸ್ವಾಮಿ ಉದ್ಘಾಟನೆ ಮಾಡಿದ್ದರು.