ನವದೆಹಲಿ : ಠೇವಣಿದಾರರ ₹5 ಲಕ್ಷದವರೆಗಿನ ಹಣಕ್ಕೆ ವಿಮಾ ಖಾತ್ರಿ ನೀಡಲಾಗಿದೆ. ಠೇವಣಿದಾರರ ಹಣಕ್ಕೆ ಸುರಕ್ಷತೆ ನೀಡುವ ಭರವಸೆ, ಮತ್ತು ಸರ್ಕಾರಿ ಬ್ಯಾಂಕ್ಗಳಿಗೆ ₹20,000 ಕೋಟಿ ಹೊಸ ಬಂಡವಾಳ ಮರುಪೂರಣವನ್ನು ಕೇಂದ್ರ ಬಜೆಟ್ ನಲ್ಲಿ ಮಾಡಲಾಗಿದೆ.
ಇಂದು ಕೇಂದ್ರ ಬಜೆಟ್ ಮಂಡನೆ ವೇಳೆ ತಿಳಿಸಿದ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್, 2ಎ ಮತ್ತು 2ಬಿ ಹಂತದಲ್ಲಿ ಎರಡು ಮೆಟ್ರೋ ಮಾರ್ಗಗಳನ್ನು ಹೊಸದಾಗಿ ನಿರ್ಮಾಣ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ 58.19 ಕಿಲೋ ಮೀಟರ್ ಮೆಟ್ರೋ ಮಾರ್ಗದಲ್ಲಿ ಹೊಸ ಮೆಟ್ರೋ ಸಂಚಾರ ಆರಂಭಕ್ಕೆ ಅನುದಾನವಾಗಿ 14 ಸಾವಿರ ಕೋಟಿ ಮೀಸಲಿಡ ಲಾಗುತ್ತಿದೆ ಎಂಬುದಾಗಿ ಘೋಷಿಸಿದರು.
ಸರ್ಕಾರಿ ಬ್ಯಾಂಕ್ಗಳಿಗೆ ₹20,000 ಕೋಟಿ ಹೊಸ ಬಂಡವಾಳ ಮರುಪೂರಣ ಮಾಡಲಾಗುತ್ತದೆ ಎಂಬುದಾಗಿ ಘೋಷಿಸುವ ಮೂಲಕ, ಬ್ಯಾಂಕ್ ಠೇವಣಿದಾರರಿಗೆ ಬಿಗ್ ರಿಲೀಫ್ ನೀಡಿದ್ದಲ್ಲದೇ, 1 ಲಕ್ಷ ಇದ್ದ ಠೇವಣಿ ಹಣವನ್ನು 5 ಲಕ್ಷದವರೆಗೆ ಏರಿಕೆ ಮಾಡಿರುವುದಾಗಿ ಘೋಷಿಸಿದರು.