Friday, 22nd November 2024

ಸ್ವಚ್ಛ ಭಾರತ ಅಭಿಯಾನಕ್ಕೆ ಹೆಚ್ಚುವರಿ ಅನುದಾನ: 1,28,700 ಕೋಟಿ ರೂ

ನವದೆಹಲಿ: ದೇಶದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಕೇಂದ್ರ ಬಜೆಟ್​ 2021ರಲ್ಲಿ ಸ್ವಚ್ಛ ಭಾರತ್​ 2.0 ಯೋಜನೆ ಘೋಷಿಸಿದ್ದಾರೆ.

2020ನೇ ವರ್ಷದ ಬಜೆಟ್​ನಲ್ಲಿ ಕೇಂದ್ರ ಸರ್ಕಾರ ಸ್ವಚ್ಛ ಭಾರತ ಅಭಿಯಾನಕ್ಕೆ 12300 ಕೋಟಿ ರೂಪಾಯಿಗಳನ್ನ ಮೀಸಲಿ ಟ್ಟಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಸ್ವಚ್ಛ ಭಾರತ ಅಭಿಯಾನಕ್ಕೆ 1,28,700 ಕೋಟಿ ರೂಪಾಯಿ ಹೆಚ್ಚುವರಿ ಅನುದಾನ ಮೀಸಲಿಡಲಾಗಿದೆ.

ಅಶುದ್ಧ ನೀರಿನ ಸಂಸ್ಕರಣೆ, ಕಸ ಬೇರ್ಪಡಿಕೆ, ಮರು ಬಳಕೆ ಮಾಡಲಾಗದ ಪ್ಲಾಸ್ಟಿಕ್​ಗಳನ್ನ ಬಳಸದೇ ಇರೋದು, ವಾಯು ಮಾಲಿನ್ಯ ಕಡಿಮೆ ಮಾಡುವುದು ಸೇರಿದಂತೆ ಕಸ ನಿರ್ವಹಣೆ ಮಾಡುವ ಸ್ವಚ್ಛ ಭಾರತ 2.0 ಮಿಷನ್​ಗೆ ಈ ಬಾರಿ ಕೇಂದ್ರ ಸರ್ಕಾರ 1.41 ಲಕ್ಷ ಕೋಟಿ ರೂಪಾಯಿ ಮೀಸಲಿಟ್ಟಿದೆ.