ನವದೆಹಲಿ: ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯ ಆಯೋಜನೆಗೆ ಸಿದ್ದತೆ ಆರಂಭಿಸಿದೆ. ಏಕದಿನ ಪಂದ್ಯಾವಳಿ ಫೆ. 18ರಿಂದ ಆರಂಭವಾಗಲಿದೆ. ಆದರೆ ಪಂದ್ಯದ ತಾಣಗಳನ್ನು ಇನ್ನೂ ಪ್ರಕಟಿಸಲಾಗಿಲ್ಲ.
ಬೆಂಗಳೂರು, ಮುಂಬಯಿ, ಬರೋಡ, ಕೋಲ್ಕತಾ, ಇಂದೋರ್‌ನಲ್ಲಿ ಲೀಗ್ ಪಂದ್ಯಗಳು ನಡೆಯುವ ಸಾಧ್ಯತೆ ಇದೆ. ಬೆನ್ನು, ಬೆನ್ನಿಗೆ 2 ಟೆಸ್ಟ್ ಪಂದ್ಯಗಳನ್ನು ಆಯೋಜಿಸಿದ ಕಾರಣ ಚೆನ್ನೈಯನ್ನು ಹೊರಗಿಡಲಾಗಿದೆ. ಇದರ ಬದಲು ಕೇರಳದ ಕೇಂದ್ರ ವೊಂದರಲ್ಲಿ ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ.
ನಾಕೌಟ್ ಪಂದ್ಯಗಳನ್ನು ಅಹ್ಮದಾಬಾದ್ ಹೊರತುಪಡಿಸಿ ಉಳಿದ ಕೇಂದ್ರವೊಂದರಲ್ಲಿ ನಡೆಸುವುದು ಬಿಸಿಸಿಐ ಯೋಜನೆ ಯಾಗಿದೆ. ಭಾರತ-ಇಂಗ್ಲೆಂಡ್ ನಡುವಿನ 2 ಟೆಸ್ಟ್ ಪಂದ್ಯಗಳು ನಡೆಯಲಿರುವುದರಿಂದ ಆಹ್ಮದಾಬಾದನ್ನು ದೂರ ಇರಿಸಲಾಗಿದೆ.
ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯಂತೆ ವನಿತಾ ಏಕದಿನ ಸರಣಿಯನ್ನೂ ಬಿಸಿಸಿಐ ಆಯೋಜಿಸಲಿದ್ದು, ಫೆ. 18ರಿಂದಲೇ ಆರಂಭವಾಗಲಿದೆ. ವಿಜಯವಾಡ, ಹೈದರಾಬಾದ್ ಮತ್ತು ಪುಣೆಯಲ್ಲಿ ಪಂದ್ಯಗಳು ನಡೆಯಲಿವೆ.