ರೋಹ್ಟಕ್: ಹರಿಯಾಣದ ರೋಹ್ಟಕ್ ನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ನೈಟ್ರೋಜನ್ ತುಂಬಿದ ಬಲೂನ್ ಸ್ಪೋಟಗೊಂಡು ಆರು ಮಂದಿ ಗಾಯಗೊಂಡಿದ್ದಾರೆ.
ಬಿಜೆಪಿ ವತಿಯಿಂದ ರೋಹ್ಟಕ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಲೂನ್ ಸ್ಪೋಟಗೊಂಡಿದೆ. ಈ ವೇಳೆ ಮಾಜಿ ಸಚಿವ ಮನೀಶ್ ಗ್ರೋವರ್, ಸಂಸದ ಸಂಸದ ಅರವಿಂದ ಶರ್ಮಾ ಅವರ ಪತ್ನಿ ಮತ್ತು ಪುತ್ರಿ ಕೂಡ ಗಾಯಗೊಂಡಿದ್ದಾರೆ.
ಸ್ಪೋಟದಿಂದ ಗಂಭೀರವಾಗಿ ಗಾಯಗೊಂಡಿರುವ ಬಿಜೆಪಿ ಮುಖಂಡರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.