Sunday, 15th December 2024

ಸೋಲಾರ್ ಕಂಪನಿ ಎಸಿಎಂಇ ಘಟಕದಲ್ಲಿ ವಿದ್ಯುತ್ ಅವಘಡ

ಎರಡು ದ್ವಿಚಕ್ರ ವಾಹನ, ಒಂದು ಕಾರು ಭಸ್ಮ, ಭಯ ಭೀತಿಗೂಂಡ ಸ್ಥಳೀಯರು

ಪಾವಗಡ: ತಾಲೂಕಿನ ತಿರುಮಣಿ ಗ್ರಾಮದ ಸೋಲಾರ್ ಕಂಪನಿ ಎಸಿಎಂಇ ಘಟಕದಲ್ಲಿ ವಿದ್ಯುತ್ ಅವಘಡ ಸಂಭವಿಸಿ ಒಂದು ಕಾರು, ಎರಡು ದ್ವಿಚಕ್ರ ವಾಹನ ಮತ್ತು ಸೋಲಾರ್ ಪ್ಯಾನೆಲ್‌ಗಳು ಸುಟ್ಟಿರುವ ಘಟನೆ ಭಾನುವಾರ ಸಂಜೆ ಸಂಭವಿಸಿದೆ.

ಅವಘಡಕ್ಕೆ ಒಂದು ಕಡೇ ಸಿಬ್ಬಂದಿ ಕೊರತೆ ಒಂದು ಕಡೆಯಾದರೆ, ಇಬ್ಬರಿಗೆ ಮಾತ್ರ ಸೆಕ್ಯೂರಿಟಿ ಗಾರ್ಡ್ ನೇಮಕ. ಮೂಲ ಸೌಕರ್ಯಗಳು ನೀಡಿಲ್ಲ ಎಂಬುದು ಸ್ಥಳಿಯರು ಆರೋಪ. ಕೆಲಸ ಮಾಡುತ್ತಿರುವ ಸಿಬ್ಬಂದಿ ಗಳಿಗೆ ಪಿಎಫ್ ಆಗಲಿ, ಅವರಿಗೆ ಇಂತಹ ವಿದ್ಯುತ್ ಅವಘಡದಿಂದ ರಕ್ಷಣೆಗಳಿಗೆ ಬೇಕಾಗುವ ಸಮವಸ್ತ್ರಗಳು ಸಹ ಇಲ್ಲಾ ಎಂಬುದು ಸ್ಥಳೀಯರು ತಿಳಿಸಿದ್ದಾರೆ.

ಸೋಲಾರ್ ಘಟಕದ ಸುತ್ತಲೂ ಗ್ರಾಮ ಅವರಿಸಿದೆ. ತಕ್ಷಣವೇ ಅಧಿಕಾರಿಗಳು ಪರಿಶೀಲನೆ ಮಾಡಿ, ಮುಂದಿನ ದಿನಗಳಲ್ಲಿ ಇಂತಹ ಅವಘಡ ನಡೆಯದೆ ಮುಂಜಾಗ್ರತೆ ಕ್ರಮಗಳು ಕೈಗೊಳ್ಳಲು ಮುಂದಾಗಬೇಕು ಎಂಬುದು ಸ್ಥಳಿಯರು ಆರೋಪಿಸಿದ್ದಾರೆ.