Friday, 15th November 2024

ಎಲ್ಲ ತಪ್ಪಿಗೆ ಕಾರಣ ಮೋದಿ ಎಂಬ ಶನೇಶ್ವರ

ರಾವ್‌-ಭಾಜಿ

ಪಿ.ಎಂ.ವಿಜಯೇಂದ್ರ ರಾವ್‌

ದೇಶದ ಬೊಕ್ಕಸದಿಂದ ಹರಿದು ಹೋಗುತ್ತಿದ್ದ ಹಣ ವನ್ನು ಉಳಿಸುವ ದೃಷ್ಟಿಯಿಂದ ರಾಜ ಮನೆತನಗಳಿಗೆ ನೀಡುತ್ತಿದ್ದ ವಿಶೇಷ ಸವಲತ್ತುಗಳನ್ನು ಕಾಂಗ್ರೆಸ್ ಪಕ್ಷ ರದ್ದುಪಡಿಸಿ 50 ವರ್ಷಗಳಾದವು. ಮತ್ತೊಂದು ಉದ್ದೇಶಕ್ಕೆ ಪೋಲಾಗುತ್ತಿದ್ದ ಹಣಕ್ಕೆ ಕಡಿವಾಣ ಹಾಕಲಿಲ್ಲ.

ಅಂದಿನ ಮಹಾರಾಜರುಗಳಿಗೆ ಪೈಪೋಟಿ ಒಡ್ಡುವಂತೆ ಸಾರ್ವಜನಿಕರ ಹಣದಲ್ಲಿ ದಶಕಗಳಿಂದ ಮಜಾ ಉಡಾಯಿಸುತ್ತಿದ್ದ
ಒಂದು ವರ್ಗವನ್ನು ಅನಾಥರನ್ನಾಗಿಸಲು ದೇಶ ಇನ್ನೊಂದು ೪೩ ವರ್ಷಗಳ ಕಾಲ ಕಾಯಬೇಕಾಯಿತು. ಕಾಂಗ್ರೆಸ್ ಒಡ್ಡೋಲಗ ದಲ್ಲಿ ವಿವಿಧ ಉನ್ನತ ಹುzಗಳನ್ನು ಅಲಂಕರಿಸಿಯೋ ಅಥವಾ ಅಂತಹ ಹುದ್ದಗಳಿಂದ ಹೊರಗುಳಿದೂ ಪಂಚತಾರಾ ಜೀವನಕ್ರ ಮಕ್ಕೆ ಹೊಂದಿಕೊಂಡಿದ್ದ ದೇಶದ ಎಡ ಪಂಥೀಯರನ್ನು ಏಕಾಏಕಿ ಸ್ವಸ್ಥಾನಗಳಿಗೆ ಕಳಿಸಲು ನರೇಂದ್ರ ಮೋದಿ ಬರಬೇಕಾಯಿತು.

ದೇಶ ಸಾಗುವ ಪಥವನ್ನು ನಿರ್ಧರಿಸುತ್ತಿದ್ದುದು ಈ ಅರ್ಥಸಾರಥಿಗಳೇ. ಕಾಂಗ್ರೆಸ್ ದುರಾಡಳಿತ ನೀತಿಗಳನ್ನು  ಅನುಮೋದಿಸು ತ್ತಿದುದೂ ಇದೇ ಜಾಣ-ಜಾಣೆಯರ ಹಿಂಡು. ಮಾದಕವಸ್ತುಗಳಿಗೆ ಒಗ್ಗಿಹೋದವರನ್ನು ದಿಢೀರನೆ ಅದರಿಂದ ಹೊರತರಲು ಮನೋವೈದ್ಯರೂ ಒಪ್ಪುವುದಿಲ್ಲ. ಭೋಗಜೀವನದ ಉನ್ಮಾದದಲ್ಲಿದ್ದ ಈ ಬುದ್ಧಿವಂತರಿಗೆ ಮುನ್ಸೂಚನೆಯಿಲ್ಲದೆ ಸವಲತ್ತು ಗಳನ್ನು ಹಿಂಪಡೆದು ಬೀದಿಪಾಲು ಮಾಡಿದ್ದರ ನೋವು, ಕ್ರೋಧ, ಹತಾಶೆ ಇಂದಿಗೂ ಕಡಿಮೆಯಾಗಿಲ್ಲ.

ಗುಹ್ಯರೋಗದಿಂದ ಪಡುವ ಯಾತನೆಯನ್ನು ಮೀರಿಸುವ ಸವಾಲು ಅದನ್ನು ಗೋಪ್ಯವಾಗಿರಿಸುವುದು. ಕಾಂಗ್ರೆಸ್‌ನಿಂದ ಸುದೀರ್ಘಕಾಲ ಮುದ್ದು ಮಾಡಿಸಿಕೊಂಡ ಈ ನವ ಹೊಗಳುಭಟರಿಗೆ ತಮ್ಮ ದುಃಖದ/ನೋವಿನ ಕಾರಣವನ್ನು ಮರೆಮಾಚ ಲಾಗಿಲ್ಲ. ತಮ್ಮ ಉದ್ವೇಗಕ್ಕೆ ಕಾರಣವೇ ಬೇರೆ ಎಂದು ಜನರನ್ನು ದಿಕ್ಕುತಪ್ಪಿಸುತ್ತಾ ದೇಶದ ಹಿತ ಚಿಂತಕರೆಂದು ಸೋಗು ಹಾಕುತ್ತಾರೆ.

ಇವರ ಕಣ್ಣೀರಿನ ಕಾರಣ ತಿಳಿಯದ ಒಂದಷ್ಟು ಮುಗ್ಧರು ಆ ಕಣ್ಣೀರು ರೈತರ ಸಲುವಾಗಿ ಹರಿಸಿದ್ದು, ದೀನದಲಿತರ ಪರವಾಗಿ ಹನಿಸಿದ್ದು, ಅಲ್ಪಸಂಖ್ಯಾತರಿಗಾಗಿ ಮೀಸಲಾದದ್ದು ಎಂದು ನಂಬುತ್ತಾರೆ. ಹೊಗಳಿಸಿಕೊಂಡವರು ಅಧಿಕಾರವನ್ನು ಕಳೆದು  ಕೊಂಡ ನಂತರ ದಲ್ಲಿ ಹೊಸ ಬದುಕು ಕಂಡುಕೊಳ್ಳಲು ಹೊಸದಾಗಿ ಅಧಿಕಾರಕ್ಕೆ ಬಂದವರನ್ನು ತೆಗಳುವುದು ಇವರ ಕಸುಬಾ ಯಿತು. ದೇಶದ ಏಳಿಗೆಗೆ ಇವರಾಗಲೀ, ಇವರ ಅನ್ನದಾತರಾಗಲೀ ಅಂದೂ ತಲೆಕೆಡಿಸಿಕೊಂಡಿರಲಿಲ್ಲ, ಇಂದಂತೂ ಇಲ್ಲವೇ ಇಲ್ಲ.

ಏಳಿಗೆಗಾಗಿ ದುಡಿಯುವವರು ಆ ಕಾರಣಕ್ಕಾಗಿಯೇ ಮತ್ತೆ ಚುನಾಯಿತರಾಗಿರುವುದು ಈ ಪಾದಸೇವಾಕರ್ತರ ಸದ್ಯದ
ವರ್ತಮಾನವನ್ನೂ, ಮುಂದಿನ ಭವಿಷ್ಯವನ್ನೂ ಕಂಗೆಡಿಸಿದೆ. ಅವರ ಗೋಳೂ ಎಲ್ಲಾ ಮೀರಿದೆ. ತಮ್ಮ ಭವಿಷ್ಯದಂತೆ ಭಾರತದ ಭವಿಷ್ಯವೂ ಗಾಡಾಂಧಕಾರದಲ್ಲಿ ಮುಳುಗಿದೆ ಎಂದು ಬಿಂಬಿಸಲು ಹವಣಿಸುತ್ತಿದ್ದಾರೆ.  ದೇಶದ ಪ್ರತಿ ಪ್ರಗತಿಪರ ಹೆಜ್ಜೆಯೂ ಅವರಿಗೆ ಹಿನ್ನಡೆಯಾಗುತ್ತಿದೆ. ಗೋಕುಲದಲ್ಲಿನ ಕೃಷ್ಣನನ್ನು ಮುಗಿಸಲು ಬಂದ ರಕ್ಕಸರಂತೆ ಮೋದಿಯತ್ತ ಷಡ್ಯಂತರಗಳ ಅಸಗಳನ್ನು ಬೀಸುತ್ತಿದ್ದಾರೆ. ರಕ್ಕಸಿಯರ ಕಲಿಯುಗದ ಆವಿಷ್ಕಾರವಾಗಿ ರಿಹಾನಾ, ಗ್ರೇಟಾ, ಖಲೀಫರು ಬಂದರಾದರೂ ವಿಷವುಣಿ ಸಲು ಬಂದ ಪೂತನಿಯಂತೆ ಮುಖಭಂಗ ಅನುಭವಿಸಿದ್ದಾರೆ.

ಮೋದಿಯವರ ನೀಳ್ಗಡ್ಡದ ಒಂದು ಕೂದಲೂ ಅಲುಗಾಡಿಲ್ಲ. ಈ ಬಾಡಿಗೆ ರಕ್ಕಸಿಯರು ಮೋದಿಯನ್ನು ಮಣಿಸಿಬಿಟ್ಟರು ಎಂದು ಸೋನಿಯಾ ಕೃಪಾ ಪೋಷಿತರು ಹಿಗ್ಗಿದಂತೆ ನಟಿಸುತ್ತಿzರೆ. ದೇಶದ ವಿಭಜನೆಯ ಪರವಾಗಿ ದನಿ ಎತ್ತಿದ ಆ ಪ್ರಾಯೋಜಿತ ರಕ್ಕಸಿಯರನ್ನು ಖಂಡಿಸಿದ ಸಚಿನ್ ತೆಂಡುಲ್ಕರ್‌ನ ಭಾರತ ರತ್ನ ಪುರಸ್ಕಾರವನ್ನು ವಾಪಸ್ ಪಡೆಯಬೇಕೆಂದು ಬೇಡಿಕೆ ಬರುತ್ತದೆ. ಆ ಪ್ರಶಸ್ತಿ ಯನ್ನು ಕೊಟ್ಟವರು ಯಾರು ಎಂಬುದನ್ನು ಮರೆಮಾಚಿ, ಆತನಿಗೆ ಪ್ರಶಸ್ತಿ ನೀಡಿದ್ದು ಆತನ ಜಾತಿ ಕಾರಣದಿಂದ ಎಂಬ
ನೀಚ ವಾದವನ್ನು ಮಂಡಿಸಿದ್ದ ಹಳೆಯ ಲೇಖನವನ್ನು ಹೆಕ್ಕಿ ತೆಗೆದು ತೆಂಡುಲ್ಕರ್‌ನ ನಿಲುವಿಗೆ ಜಾತಿಯ ಬಣ್ಣ ಕಟ್ಟಲಾಗುತ್ತದೆ.

ರಾಹುಲ್ ಗಾಂಧಿಯ ಕ್ಷುದ್ರತೆಯ ಆಳದ ಪ್ರಮಾಣವನ್ನು ಅಳೆಯಲು ಭೂಮಿಯನ್ನು ಬಗೆಯಬೇಕೆನ್ನುವುದಾದರೆ, ನೀವು ಅಗೆಯುತ್ತಾ, ಅಗೆಯುತ್ತಾ ಭೂಗೋಳದ ಆ ಬದಿಯಿಂದ ಹೊರಬರುತ್ತೀರಿ. ಕೇಂಬ್ರಿಜ್ಡ್ ಅನಾಲಿಟಿಕಾಲ್‌ದೊಂದಿಗೆ ಬೆಳೆಸಿದ ಚುನಾವಣಾ-ಪೂರ್ವ ಸಂಬಂಧವೂ ಫಲಕಾರಿಯಾಗದೆ ವಿರೋಧ ಪಕ್ಷವಾಗಲಿಕ್ಕೆ ಬೇಕಾದ ಬಲವೂ ಇಲ್ಲದ ಕಾಂಗ್ರೆಸ್ ದೇಸೀ
ದೇಶವಿರೋಧಿಗಳನ್ನು ಎತ್ತಿಕಟ್ಟಿದ್ದು ಸಾಲದೆಂಬಂತೆ ಮತ್ತೆ ಬೆಂಬಲವನ್ನು ಪಡೆಯಲು ನೀಳ್ಗೈಯನ್ನು ಚಾಚಿದೆ.

ಪ್ರಜಾಪ್ರಭುತ್ವದ ಆಶಯಗಳಿಗೆ ಆ ಪಕ್ಷ ಎಂದೂ ಬದ್ಧವಾಗಿರಲಿಲ್ಲ. ಆ ಪ್ರವೃತ್ತಿಗೆ ತಕ್ಕಂತೆ ಪ್ರಜಾಪ್ರಭುತ್ವದ ನಿಯಮಗಳನ್ನು ಗಾಳಿಗೆ ತೋರಿ ಸಂಸತ್ತಿನ ಹೊರಗೆ ತನ್ನ ಬಲಪ್ರದರ್ಶನಕ್ಕೆ ತೊಡಗಿದೆ. ಸಂಸತ್ತಿನಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಲು ಬೇಕಾದ ಪ್ರಬುದ್ಧತೆಯಾಗಲೀ, ವಾಕ್ಪಟುತ್ವವಾಗಲೀ ಇಲ್ಲದ ಅಮ್ಮ, ಶಂಕಿತ ರೈತರ ಬೇಡಿಕೆ ಈಡೇರದಿದ್ದರೆ ದೇಶಕ್ಕೆ ಬೆಂಕಿ ಹಚ್ಚುವುದಾಗಿ ತನ್ನ ವಿಧ್ವಂಸಕ ಮಗನ ಕೈಯಲ್ಲಿ ಹೇಳಿಸುತ್ತಾಳೆ.

ಇದು, ನೆಹರು ವಂಶಾವಳಿಯ ಪ್ರಜಾಸತ್ತೆಯ ಮಾದರಿ. ಈ ರಾಷ್ಟ್ರಘಾತುಕ ಮಾತುಗಳನ್ನು ಸಹಿಸಿಕೊಂಡು ಕುಳಿತಿರಬೇಕಾದ್ದು ಮೋದಿಯ ಹಣೆಬರಹ. ತಮ್ಮ ಮೇಲೆಸಗಿದ ಕೃಷಿಕ ವೇಷಧಾರಿಗಳ ಹಯನ್ನು ಮೌನವಾಗಿ ಸಹಿಸಿದ ಪೊಲೀಸರ ಹಣೆಬರಹ ದಂತೆ. ಕಾಂಗ್ರೆಸ್ ಪಾದಸೇವಾನಿರತ ಪತ್ರಕರ್ತರಿಗೆ ಅದು ತಮಗೇ ಸಂದ ವಿಜಯ. ಪೋಲೀಸರ ಮೇಲಿನ ಹಲ್ಲೆಯನ್ನು ಪರೋಕ್ಷವಾಗಿ ಮೋದಿ ಮೇಲೆ ಮಾಡಿದ ಹಲ್ಲೆ. ಆ ವಿಜಯಕ್ಕೆ ನೈತಿಕ ನೆಲೆಗಟ್ಟು ಕೊಡುವ ಪ್ರಯತ್ನವೇ ಗೋಲಿಬಾರಿಗೆ ರೈತ ಸತ್ತನೆಂಬ ರಾಜ್ ದೀಪ್ ಸರ್‌ದೇಸಾಯಿಯ ಹುಸಿ ವರದಿಗೆ ಪ್ರೇರಣೆ. ಅದು ತಪ್ಪು ವರದಿಯಲ್ಲ, ಹುಸಿ ವರದಿ.

ಸರ್‌ದೇಸಾಯಿ ಎಂಬ ಹಾಗಲಕಾಯಿಗೆ ಸಂಪಾದಕರೆಂಬ ಬೇವಿನಕಾಯಿಯ ಸಾಕ್ಷಿ. ಈ ಸುಳ್ಳೆಂಬ ಸೊಂಪಾಗಿ ಬೆಳೆದ ಮುಳ್ಳು ಗಿಡಕ್ಕೆ ಆ ಮೂವರು ವಿದೇಶಿ ನಾರೀಮಣಿಯರ ಗೊಬ್ಬರ, ನೀರು. ಆ ಗೊಬ್ಬರದ ಒಂದು ಲೋಡಿಗೆ ಒಬ್ಬಳಿಗೇ ೧೮ ಕೋಟಿ
ರುಪಾಯಿ. ಇದು ಮೋದಿ ವಿರುದ್ಧದ ಸಂಚಾಗಿ ನೋಡ ಬಾರದು, ಇದು ಭಾರತದ ವಿರುದ್ಧದ ಸಂಚು. ಇದನ್ನು ಭಕ್ತನೆಂಬ ಸಂಭವನೀಯ ಆರೋಪದಿಂದ ತಪ್ಪಿಸಿಕೊಳ್ಳಲು ಹೇಳುತ್ತಿಲ್ಲ. (ಭಕ್ತ ಎಂಬ ಆ ಸುಲಭವಾಗಿ ದೊರೆವ ಗುಜರಿಯ ಅಸವೂ, ಭಕ್ತನೆಂಬ ಬಿರುದಿಗೆ ಪಾತ್ರನಾಗುವವನ  ದಸರಣಿಯನ್ನು ತುಂಡರಿಸುವ ಕುತಂತ್ರದಿಂದ ಕೂಡಿದೆ ಎನ್ನುವುದು ತಿಳಿದದ್ದೇ.) ಭಾರತವನ್ನು ಛಿದ್ರಗೊಳಿಸಲು ದೊರಕುವ ಯಾವುದೇ ಸಣ್ಣ ಅವಕಾಶವನ್ನೂ ದೇಶ ವಿರೋಧಿಗಳು ಪೋಲು ಮಾಡುವುದಿಲ್ಲ.

ಸಿಎಎ ಕಾನೂನು, ಕೃಷಿ ಕಾನೂನು ಮುಂತಾದ ಅವಕಾಶಗಳ ಪಟ್ಟಿಯನ್ನು ನಾನು ಮಾಡಲಿಕ್ಕೆ ಹೋಗುವುದಿಲ್ಲ. ಅದು ನಿಮಗೆ ತಿಳಿದದ್ದೇ. ಪ್ರತ್ಯಕ್ಷ ಶತ್ರುಗಳಾದ ಮಾರ್ಕ್‌ಸಿಸ್ಟರು, ಮಿಶನರಿಗಳು ಮತ್ತು ಮುಗಳು ತಮ್ಮ ವಿಚ್ಛಿದ್ರಕಾರಿ ಕಾರ್ಯಸೂಚಿಯ
ಅನುಷ್ಠಾನಕ್ಕೆ ಹೊರದೇಶಗಳ ಬೆಂಬಲ ಪಡೆಯುವುದು ಒಂದು ಬಗೆ. ವಿದೇಶೀಯರೂ, ತಮ್ಮದೇ ಕಾರಣಕ್ಕೆ ಭಾರತದ ಮೇಲೆ ನಿರಂತರ ದಾಳಿ ನಡೆಸುವುದು ಮತ್ತೊಂದು ಬಗೆ. ಆ ದಾಳಿ ನೇರ ರಾಷ್ಟ್ರಗಳಿಂದಷ್ಟೇ ಏರ್ಪಡುವುದಿಲ್ಲ ಮತ್ತು ಭಯೋತ್ಪಾದ ನೆಯ ರೂಪದಿಂದಿರುತ್ತದೆಂದೂ ಅಲ್ಲ.

ಇದಕ್ಕೊಂದು ಉದಾಹರಣೆಯಾಗಿ ಕಳೆದ ವರ್ಷದ ಬೆಳವಣಿಗೆಯೊಂದನ್ನು ಪರಿಗಣಿಸೋಣ. ಕೋವಿಡ್-19 ಭಾರತದಲ್ಲಿ ಕಾಣಿಸಿಕೊಂಡು ವರ್ಷ ಪೂರ್ಣಗೊಂಡಿದೆ. ಜನರ ಜೀವದ ಮುಂದೆ ಮಿಕ್ಕೆಲ್ಲವೂ ಗೌಣ ಎಂದು ಪರಿಗಣಿಸಿದ ಮೋದಿ ತಮ್ಮ ಎಂದಿನ ದಿಟ್ಟತನವನ್ನು ಮೆರೆದು ಮಾರ್ಚ್‌ನಲ್ಲಿ ಲಾಕ್‌ಡೌನ್ ಘೋಷಿಸಿದರು. ಕೋವಿಡ್ ಹೆಮ್ಮಾರಿಯನ್ನು ನಿಯಂತ್ರಿಸುವಲ್ಲಿ ನಡೆಸಿದ ಪೂರ್ವಸಿದ್ಧತೆ ಅಭೂತಪೂರ್ವವಾದದ್ದು.

ಉಳಿದೆಡೆಯಂತೆ ಭಾರತದ ಮೇಲೂ ಪೆಡಂಭೂತದಂತೆ ಎರಗಿದ ಕರೋನಾ ವೈರಸ್ ಬಾರಿಸಿದ ಹೊಡೆತಕ್ಕೆ ಯಾವುದೇ
ಅಳ್ಳೆದೆಯ ನಾಯಕ ಪತರಗುಟ್ಟುತ್ತಿದ್ದ. ಲಾಕ್‌ಡೌನ್ ಉಲ್ಲಂಸಿದ ತಬ್ಲೀಗಳ ಬಗ್ಗೆ (ಸಲ್ಲದ) ಮೃದು ಧೋರಣೆ ತೋರಿದ ನಂತರವೂ ಅಲ್ಪಸಂಖ್ಯಾತ ವಿರೋಧಿ ಹಣೆಪಟ್ಟಿಯನ್ನು ಮೋದಿಗೆ ಕಟ್ಟಲಾಯಿತು.

ಗುಜರಾತ್‌ನ ಭುಜ್‌ನಲ್ಲಿ ಸಂಭವಿಸಿದ ಭೂಕಂಪವನ್ನು ವರದಿ ಮಾಡಲು ಹೋದ ಕನ್ನಡ ಚಾನೆಲ್‌ನ ಪತ್ರಕರ್ತರೊಬ್ಬರು
ಅಲ್ಲಿನ ಸಾವುನೋವುಗಳನ್ನು ಕಂಡು ಭಯ ಭೀತ ರಾಗಿದ್ದರು. ಕ್ಯಾಮರಾ ಮುಂದೆ ನಿಂತು ಮಾತನಾಡುವಾಗ ಅವರ ದನಿ
ಅದುರುತ್ತಿತ್ತು. ಮಾತೇ ಹೊರಡುತ್ತಿರಲಿಲ್ಲ. ಸಹಜವೇ. foreignpolicy.com ನಲ್ಲಿ ಕೋವಿಡ್ ಭಾರತಕ್ಕೆ ಕಾಲಿಟ್ಟ ಬೆನ್ನ ಸ್ಟೀವನ್ ಫಾಲ್ಡೇಸ್ಟ್‌ಯ್ ಎಂಬ ಪರಿಣತ (ಕೋವಿಡ್ ಕಾರಣದಿಂದ) ಯಾವುದೆಲ್ಲ ದೇಶಗಳಲ್ಲಿ ಪ್ರಜಾಪ್ರಭುತ್ವ ಕೊನೆಗೊಳ್ಳುತ್ತವೆಂದು ಭವಿಷ್ಯ ನುಡಿಯುತ್ತಾನೆ.

ಅದು ಬ್ರಹ್ಮಾಂಡ ಗುರೂಜಿಯ ಭವಿಷ್ಯದಂತೆ ತಲೆಕೆಳಕಾಗುತ್ತದೆ, ಆ ವಿಷಯ ಬೇರೆ. ಆದರೆ ಬ್ರೆಜಿಲ, ಫಿಲಿಪೀ, ಇಂಡೊನೇಷ್ಯಾ ದೇಶಗಳಲ್ಲೂ ಹಂಗರಿಯಲ್ಲಿಯಂತೆ ಪ್ರಜಾಸತ್ತೆ ನಾಶವಾಗುತ್ತದೆ ಎಂದು ಗೋಳೊ ಅತ್ತಿದ್ದ. ಇಂಡೋನೇಷ್ಯಾ ಅಧ್ಯಕ್ಷ ಜೊಕೊ ವಿಡೋಡೊ ಕೋವಿಡ್ ನಿಯಂತ್ರಿಸಲು ಮೂಲಿಕೆಗಳನ್ನು ನೆಚ್ಚಿಕೊಂಡು, ಸಾಮಾಜಿಕ ಅಂತರವನ್ನು ಕಾಪಾಡಲಿಲ್ಲ ಎಂದು ಸ್ಟೀವನ್ ಆರೋಪಿಸುತ್ತಾನೆ. ( ಆಯುರ್ವೇದದಲ್ಲಿ ಔಷಧವಿದೆ ಎಂಬ ನಮ್ಮ ಗಿರಿಧರ್ ಕಜೆ ಮಾತನ್ನು ಪುರಸ್ಕರಿಸಿದಿದ್ದುದಕ್ಕೆ ಇಂತಹ ಅಡ್ಡಗಾಲು ಹಾಕಿರಬಹುದೇ?) ಫಿಲಿಪೀ ಅಧ್ಯಕ್ಷ ರೋಡ್ರಿಗೊ ಡುಟಾರ್ಟೆ ತನ್ನ 17000 ನಾಗರಿಕರನ್ನು ಒಳತಳ್ಳಿದ ರೆಂಬುದನ್ನು ವಿರೋಧಿಸಿ ಆತನ ನಡೆಯನ್ನು ವಿಶ್ವಾದ್ಯಂತ 50000 ಟ್ವೀಟಿಗರು ಖಂಡಿಸಿ ಸ್ಟೀವನ್ ಡೆಮಾಕ್ರಸಿ ಇನ್ ಡೇಂಜರ ಎಂದು ಬೊಬ್ಬಿರಿದಿದ್ದ.

ಎಂದಿನಂತೆ, ಭಾರತದಲ್ಲಿ ಕೋವಿಡ್ ನೆಪದಲ್ಲಿ ಮುಸ್ಲಿಮರನ್ನೂ, ದಲಿತರನ್ನೂ, ಮೂಲವಾಸಿಗಳನ್ನೂ ಹತ್ತಿಕ್ಕಲಾಗುತ್ತಿದೆ ಎಂದು ಬಾಯಿಬಡಿದುಕೊಳ್ಳುವುದನ್ನು ಸ್ಟೀವನ್ ಮರೆಯಲಿಲ್ಲ. ಸ್ಟೀವನ್‌ನ ಕೈಯಲ್ಲಿ ಯಾರು ಇಂತಹ ಲೇಖನವನ್ನು
ಬರೆಸುತ್ತಾರೆ ಅನ್ನುವುದನ್ನು ಸ್ಥಳದ ಅಭಾವದ ಕಾರಣ ನಿಮ್ಮ ಊಹೆಗೆ ಬಿಡುತ್ತೇನೆ. ಆದರೆ, ಆತನ ಲೇಖನಗಳಲ್ಲಿ ಪ್ರಸ್ತಾಪ ವಾಗದ ಅಂಶಗಳನ್ನು ಸಂಕ್ಷಿಪ್ತವಾಗಿ ತಿಳಿಸುತ್ತೇನೆ.

ಕೋವಿಡ್ ನಿಯಂತ್ರಣಕ್ಕಾಗಿ ಡೊನಾಲ್ಡ್ ಟ್ರಂಪ್ ಕೇವಲ ಒಂದು ವಾರ ಮುಂಚೆ ಕ್ರಮ ತೆಗೆದುಕೊಂಡಿದ್ದರೆ 36000
ಅಮೆರಿಕನ್‌ರ ಜೀವ ಉಳಿಯುತ್ತಿತ್ತು. ವಿಶ್ವದ ಅತಿ ಪ್ರಬಲ ರಾಷ್ಟ್ರದಲ್ಲಿ ವರ್ಣಭೇದ ನೀತಿ ರಾಜಾರೋಷವಾಗೇ ನಡೆಯುತ್ತಿದ್ದು ಆ ಕಾರಣದಿಂದ ಕೋವಿಡ್ ಮಾರಿಗೆ ಬಲಿಯಾದವರು ಕರಿಯರು ಮತ್ತು ಮೂಲವಾಸಿಗಳು. ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿಣಿ ಮಂಡಳಿಯಲ್ಲಿ ಅಮೆರಿಕಗೆ ಒಂದು ಸ್ಥಾನವಿದೆ. ಎರಡು ವರ್ಷಕ್ಕೂ ಹೆಚ್ಚು ಕಾಲ ಆ ಸ್ಥಾನವನ್ನು ತುಂಬದೇ ನಿರ್ಲಕ್ಷ್ಯ ಮಾಡಿದ ಆರೋಪವೂ ಟ್ರಂಪ್ ಮೇಲಿದೆ.

ಚೀನಾ ದೇಶದಲ್ಲಿನ ರೋಗ ನಿಯಂತ್ರಣ ಮತ್ತು ನಿವಾರಣಾ ಕಚೇರಿಯಲ್ಲಿದ್ದ 30 ಜನ ಸಿಬ್ಬಂದಿಯನ್ನು 2017ರಿಂದೀಚೆಗೆ ವಾಪಸ್ ಕರೆದ ಅಸಡ್ಡೆಯ ಆರೋಪಕ್ಕೂ ಟ್ರಂಪ್ ಗುರಿಯಾಗಿzರೆ. ಇಂತಹ ಉಡಾಫೆ ಮಾಡದಿದ್ದರೆ ಸಕಾಲಕ್ಕೆ ಚೀನಾದಿಂದ ಅಮೆರಿಕಗೆ ಕೊರೋನಾ ಮಾಹಿತಿ ರವಾನೆಯಾಗಿ ಅಮೆರಿಕ ಅಲ್ಲದೆ ಉಳಿದ ದೇಶಗಳೂ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬಹುದಾಗಿತ್ತು.

ಪಾಶ್ಚಿಮಾತ್ಯ ದೇಶಗಳ ಜೈಲುಗಳಿಗಿಂತ ಅಮೆರಿಕ ಜೈಲುಗಳು (ಐದರಿಂದ 18 ಪಟ್ಟು ) ಹೆಚ್ಚು ದಟ್ಟವಾಗಿರುವುದರಿಂದ ಕೈದಿ ಗಳ ನಡುವೆ ಅಂತರ ಕಾಪಾಡಿಕೊಳ್ಳಲು ಸಾಧ್ಯವಾಗದೇ ಅಮೆರಿಕ ಕೋವಿಡ್‌ಗೆ ಶರಣಾಗಲು ಮತ್ತೊಂದು ಕಾರಣ. ಎಪ್ಪತ್ತರ ದಶಕದ ಶಕ್ತಿಯ ವ್ಯಾಪಕ ಕೊರತೆಯಿಂದ ನಿರ್ಮಿತವಾದ ಅಮೆರಿಕದ ನೂತನ ಕಟ್ಟಡಗಳಲ್ಲಿ (ಸ್ವಚ್ಛ) ಗಾಳಿ ಒಳಬಾರದಂತೆ ತಡೆಯ ಲಾಯಿತು. ಕೋವಿಡ್ ನಂತರದಲ್ಲಿ ಇಂತಹ ಅಸಂಖ್ಯಾತ ಕಟ್ಟಡಗಳನ್ನು ರೋಗಪೀಡಿತ ಕಟ್ಟಡ ಗಳೆಂದು ಕರೆಯಲಾಗುತ್ತಿದೆ.

ಶುಶ್ರೂಷೆ ನೀಡುವಲ್ಲಿ ಬಡವರನ್ನೂ (ಕರಿಯರನ್ನೂ) ಹಿರಿಯ ನಾಗರಿಕರನ್ನೂ, ಮಹಿಳೆ ಯರನ್ನೂ ಕಡೆಗಣಿಸಲಾಯಿತು. ನವಾಜೊ ನೇಷನ್ ಎಂದು ಕರೆಯಲ್ಪಡುವ ಮೂಲನಿವಾಸಿಗಳನ್ನು ಅವರಿಗೇ ಸೇರಿದ ನೀರನ್ನು ಸ್ವಚ್ಛತೆ ಕಾಪಾಡಿಕೊಳ್ಳಲು ಬಳಸದಂತೆ ನಿರ್ಬಂಧ ಹೇರುವುದರ ಜತೆಗೆ ಅವರಿಗೆ ಕೈ ತೊಳೆದು ಅಭ್ಯಾಸವಿಲ್ಲ, ಶ್ವಪಚರು ಎಂದು ಕೋವಿಡ್ ಸಮಸ್ಯೆಗೆ ಅವರ ತಲೆ ಮೇಲೇ ಗೂಬೆ ಕೂಡಿಸಲಾಯಿತು.

ಭಾರತದಲ್ಲಿ ಸ್ವಚ್ಛತೆಯ ಅಭಾವದ ಕಾರಣದಿಂದ ರೋಗ ನಿರೋಧಕ ಶಕ್ತಿ ಬೆಳೆಸಿಕೊಂಡಿದ್ದೇವೆ ಎನ್ನುವವರ ತಲೆಯನ್ನು
ಮಟುಕಿ. ಇನ್ನು, ಅಮೆರಿಕದಲ್ಲಿನ ಸಾಮಾಜಿಕ, ರಾಜಕೀಯ ತಾರತಮ್ಯತೆಯತ್ತ ಗಮನ ಹರಿಸಲು ರಿಹಾನಾ- ಗ್ರೇಟಾ-ಖಲೀಫಾ ತ್ರಯರಿಗೆ ಟ್ವೀಟ್ ಮಾಡೋಣ.

ಉಳಿದಂತೆ, ಪಾದಸೇವಾನಿರತರಿಗೆ ಮೋದಿಯ ಬಗ್ಗೆ ಸಹನೆ ಬೆಳೆಸಿಕೊಳ್ಳುವದರ ಜತೆಗೆ ಇಂಗ್ಲೆಂಡ-ಭಾರತ ಕ್ರಿಕೆಟ್ ಸರಣಿಯನ್ನು ಜತ್ಯಾತೀತ ಮನಸ್ಸಿನಿಂದ ವೀಕ್ಷಿಸಿ ಆನಂದಿಸುವ ಬುದ್ಧಿ ಕೊಡಲೆಂದು ದೇವರಲ್ಲಿ ಬೇಡೋಣ.