Thursday, 19th September 2024

ನಿತೀಶ್ ಸಂಪುಟಕ್ಕೆ ಶಹನವಾಜ್ ಹುಸೇನ್ ಸೇರ್ಪಡೆ

ಪಾಟ್ನಾ: ಬಿಹಾರ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದ ಬಿಜೆಪಿ ರಾಷ್ಟ್ರೀಯ ವಕ್ತಾರ ಮತ್ತು ಮಾಜಿ ಕೇಂದ್ರ ಸಚಿವ ಸೈಯದ್ ಶಹನವಾಜ್ ಹುಸೇನ್ ಅವರು ನಿತೀಶ್ ಕುಮಾರ್ ಸಂಪುಟದ ನೂತನ ಸಚಿವರಾಗಿ ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದರು.

ರಾಜ್ ಭವನದಲ್ಲಿ ನಡೆದ ಸಂಪುಟ ವಿಸ್ತರಣೆ ಸಮಾರಂಭದಲ್ಲಿ ರಾಜ್ಯಪಾಲ ಫಾಗು ಚೌಹಾನ್ ಅವರು ಶಹನವಾಜ್ ಹುಸೇನ್ ಅವರಿಗೆ ಪ್ರಮಾಣವಚನ ಬೋಧಿಸಿದರು.

ನಂತರ ಜೆಡಿಯು ನಾಯಕರಾದ ಸಂಜಯ್ ಕುಮಾರ್ ಜಾ, ಶ್ರವಣ್ ಕುಮಾರ್, ಲೆಸಿ ಸಿಂಗ್ ಮತ್ತು ಮದನ್ ಸಾಹ್ನಿ, ಹಾಗೂ ಬಿಜೆಪಿಯ ಪ್ರಮೋದ್ ಕುಮಾರ್ ಅವರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

 

Leave a Reply

Your email address will not be published. Required fields are marked *