Saturday, 23rd November 2024

ಮಲಯಾಳಂನ ಗಾಯಕ ಎಂ.ಎಸ್ ನಸೀಂ ಇನ್ನಿಲ್ಲ

ತಿರುವನಂತಪುರ: ಮಲಯಾಳಂನ ಖ್ಯಾತ ಹಿರಿಯ ಗಾಯಕ ಎಂ.ಎಸ್ ನಸೀಂ ದೀರ್ಘಕಾಲದ ಅನಾರೋಗ್ಯದಿಂದಾಗಿ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನರಾದರು.

16 ವರ್ಷಗಳ ಹಿಂದೆ ಕಾಣಿಸಿಕೊಂಡಿದ್ದ ಪಾರ್ಶ್ವವಾಯುಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಸೀಂ ಅವರಿಗೆ ಪತ್ನಿ ಮತ್ತು ಇಬ್ಬರು ಮಕ್ಕಳು ಇದ್ದಾರೆ.

ನಸೀಂ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ನಸೀಂ ಅವರು ಗಾನಮೇಳದ ಮೂಲಕ ಪ್ರಸಿದ್ಧಿ ಪಡೆದರು ಎಂದು ಹೇಳಿದರು.

ದೂರದರ್ಶನ, ಆಕಾಶವಾಣಿ ಮತ್ತು ಇತರೆ ಕಾರ್ಯಕ್ರಮಗಳಲ್ಲಿ ಮೊಹಮ್ಮದ್‌ ರಫಿ ಮತ್ತು ಬಾಬುರಾಜು ಅವರ ಗೀತೆಗಳನ್ನು ಹಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದರು. 1992,1993,1995 ಮತ್ತು 1997ರಲ್ಲಿ ನಸೀಂ ಅವರಿಗೆ ಅತ್ಯುತ್ತಮ ಕಿರುತೆರೆ ಗಾಯಕ ಪ್ರಶಸ್ತಿ ಮತ್ತು ಕೇರಳ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.