Friday, 22nd November 2024

ಗಾಯದ ಮೇಲೆ ಬರೆ ಎಳೆದ ತೈಲ ದರ ಏರಿಕೆ

ನವದೆಹಲಿ: ಸಾರ್ವಜನಿಕರಿಗೆ ಕಳೆದ ಹಲವು ದಿನಗಳಿಂದ ಏರಿಕೆಯಾಗುತ್ತಿರುವ ಪೆಟ್ರೋಲ್‌ – ಡಿಸೇಲ್‌ ಬೆಲೆ ಗಾಯದ ಮೇಲೆ ಬರೆ ಎಳೆದಂತೆ ಮಾಡುತ್ತಿದೆ.

ಗುರುವಾರ ಕೂಡಾ ದೇಶದ ವಿವಿಧ ನಗರಗಳಲ್ಲಿ ಪೆಟ್ರೋಲ್‌ ಬೆಲೆಯಲ್ಲಿ 24 ರಿಂದ 25 ಪೈಸೆ ಹಾಗೂ ಡಿಸೇಲ್‌ ಬೆಲೆಯಲ್ಲಿ 30 ರಿಂದ 31 ಪೈಸೆಗಳಷ್ಟು ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ದರ ಬುಧವಾರದಂತೆ ಯಥಾಸ್ಥಿತಿಯಿದ್ದು, ಡೀಸೆಲ್‌ ದರದಲ್ಲಿ 27 ಪೈಸೆ ಹೆಚ್ಚಳವಾಗಿದೆ.

ರಾಜಧಾನಿ ನವದೆಹಲಿಯಲ್ಲಿ ಲೀಟರ್‌ ಪೆಟ್ರೋಲ್‌ ಬೆಲೆ 87.85 ರೂಪಾಯಿ, ಲೀಟರ್‌ ಡಿಸೇಲ್‌ ಬೆಲೆ 78.03 ರೂಪಾಯಿಗಳಾಗಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಲೀಟರ್‌ ಪೆಟ್ರೋಲ್‌ ಬೆಲೆ 94.36 ರೂಪಾಯಿಗಳಾಗಿದ್ದು, ಲೀಟರ್‌ ಡಿಸೇಲ್‌ ಬೆಲೆ 84.94 ರೂಪಾಯಿ ಹಾಗೂ ಬೆಂಗಳೂರಿನಲ್ಲಿ ಲೀಟರ್‌ ಪೆಟ್ರೋಲ್‌ ಬೆಲೆ 90.53 ರೂಪಾಯಿ ಹಾಗೂ ಡೀಸೆಲ್‌ ದರ 82.40 ರೂಪಾಯಿ ಆಗಿದೆ.

ಬುಧವಾರದ ತೈಲೋತ್ಪನ್ನಗಳ ದರ ಹೀಗಿತ್ತು

ಬೆಂಗಳೂರು: 90.53, 82.40

ಚೆನ್ನೈ: 89.96, 82.90

ಹೈದರಾಬಾದ್: 91.09, 84.79

ಮುಂಬೈ: 94.12, 84.63

ದೆಹಲಿ: 87.60, 77.73

ಕೋಲ್ಕತ್ತಾ: 88.92, 81.31