Sunday, 24th November 2024

ಅರುಣಾಚಲ ಪ್ರದೇಶ, ಮಿಜೋರಾಂ, ಹಿಂದೂ ಕುಶ್​ನಲ್ಲಿ ಭೂಕಂಪನ

ಚಂಪೈ : ಅರುಣಾಚಲ ಪ್ರದೇಶ ರಾಜ್ಯದ ಚಂಪೈನಲ್ಲಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 3.1 ತೀವ್ರತೆಯ ಭೂಕಂಪನ ರಾತ್ರಿ ಅಪ್ಪಳಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

ಅಫ್ಘಾನಿಸ್ತಾನದ ಹಿಂದೂ ಕುಶ್​ನಲ್ಲಿ 4.9 ತೀವ್ರತೆಯಲ್ಲಿ ಭೂಕಂಪನ ಸಂಭವಿಸಿದೆ ಎಂದು ಅಲ್ಲಿನ ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಹೇಳಿದೆ.

ಮಿಜೋರಾಂ ಚಾಂಫೈನ 30 ಕಿ.ಮೀ. ಭೂ ಆಳದಲ್ಲಿ 3.1 ತೀವ್ರತೆಯಲ್ಲಿ ಇತ್ತು ಎಂದು ಎನ್‌ಸಿಎಸ್ ಹೇಳಿದೆ. ಇದಕ್ಕೂ ಮುನ್ನ ಅರುಣಾಚಲ ಪ್ರದೇಶದಲ್ಲಿ 2.3 ತೀವ್ರತೆಯ ಭೂಕಂಪನ ಸಂಭವಿಸಿತ್ತು.