Thursday, 19th September 2024

ಹಿಮ ಸ್ಪೋಟ: ಮೃತರ ಸಂಖ್ಯೆ 34ಕ್ಕೆ ಏರಿಕೆ, ತಪೋವನ ಸುರಂಗದೊಳಗೆ ಡ್ರಿಲ್ಲಿಂಗ್​ ಆರಂಭ

ಚಮೋಲಿ: ಉತ್ತರಾಖಂಡದ ಚಮೋಲಿಯಲ್ಲಿ ಹಿಮಸ್ಫೋಟಿಸಿ ಉಂಟಾದ ಪ್ರವಾಹ ದುರಂತ ಸಂಭವಿಸಿ  ಇಲ್ಲಿವರೆಗೆ ಮೃತ ಪಟ್ಟವರ ಸಂಖ್ಯೆ 34ಕ್ಕೆ ಏರಿಕೆಯಾಗಿದೆ. ಈ ಪೈಕಿ 10 ಮಂದಿಯನ್ನು ಮಾತ್ರ ಗುರುತಿಸಲಾಗಿದೆ.

204 ಮಂದಿ ನಾಪತ್ತೆಯಾಗಿದ್ದು, ಐಟಿಬಿಪಿ, ಎನ್​ಡಿಆರ್​ಎಫ್​, ಎಸ್​ಡಿಆರ್​ಎಫ್​ ತಂಡಗಳು 5ನೇ ದಿನವೂ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ಮುಂದುವರೆಸಿವೆ. ಸೇತುವೆಗಳನ್ನು ಮೂಲಕ ಆಹಾರ ಸಾಮಗ್ರಿಗಳನ್ನು ಸಂತ್ರಸ್ತರಿಗೆ ಸಾಗಿಸಲಾಗುತ್ತಿದೆ.

ತಪೋವನ ಸುರಂಗದೊಳಗೆ ಕೆಸರು ಮತ್ತು ಕಲ್ಲುಗಳನ್ನು ತೆರವುಗೊಳಿಸುತ್ತಿರುವ ರಕ್ಷಣಾ ತಂಡಗಳು ಸುರಂಗವನ್ನು ಕೊರೆಯಲು ಡ್ರಿಲ್ಲಿಂಗ್​ ಆಪರೇಶನ್​ ಆರಂಭಿಸಿರುವುದಾಗಿ ಉತ್ತರಾಖಂಡ ಡಿಜಿಪಿ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *