ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ನಿಂತು ಹೋರಾಡುತ್ತೇವೆ. ರಾಜ್ಯದ ಚುನಾವಣೆ ಆಟವನ್ನು ನ್ಯಾಯಯುತವಾಗಿ ಆಡೋಣ. ಪಶ್ಚಿಮ ಬಂಗಾಳದಲ್ಲಿ ಗೋಲ್ ಕೀಪರ್ ಆಗಿ ನಿಂತು ಚುನಾವಣೆ ಎದುರಿಸುತ್ತೇನೆ. ನೀವೆಷ್ಟು ಗೋಲ್ ಹೊಡೆಯುತ್ತೀರಾ ಎಂದು ನೋಡುತ್ತೇವೆ ಎಂದು ಬಿಜೆಪಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸವಾಲೆಸೆದಿದ್ಧಾರೆ
“ನೀವು ನನ್ನನ್ನು ನಿರ್ಲಕ್ಷಿಸುವಂತಿಲ್ಲ. ರೈತರನ್ನು ಲೂಟಿ ಮಾಡಿದ್ದೀರಿ. ದಂಗೆಯನ್ನು ಸೃಷ್ಟಿ ಮಾಡಿದ್ದೆಲ್ಲ ಮುಗಿದ ಮೇಲೆ ಇದೀಗ ನಿಮಗೆ ಪಶ್ಚಿಮ ಬಂಗಾಳ ಬೇಕಾಗಿದೆಯೇ. ಇಂಥವರಿಗೆ ಎಂದಿಗೂ ತಲೆ ಬಾಗುವುದಿಲ್ಲ ಎಂದು ಮಮತಾ ಕಿಡಿ ಕಾರಿದ್ದಾರೆ.
ವಿಧಾನಸಭಾ ಚುನಾವಣೆ ಹಿನ್ನೆಲೆ ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ನಲ್ಲಿ ನಡೆದ ಪರಿವರ್ತನ ಯಾತ್ರೆ ಉದ್ದೇಶಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜಾರಿಗೊಳಿಸಿರುವ ಯೋಜನೆಗಳನ್ನು ತಡೆ ಹಿಡಿದಿದ್ದೀರಿ. ಆದರೆ ಮೇ ತಿಂಗಳ ನಂತರದಲ್ಲಿ ನೀವು ಮುಖ್ಯಮಂತ್ರಿಯಾಗಿ ಮುಂದುವರಿಯುವುದಿಲ್ಲ. ಅಂದಿನಿಂದ ಯಾವುದೇ ಯೋಜನೆಗಳನ್ನು ತಡೆಯುವುದಕ್ಕೆ ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡುವ ರೀತಿಯಲ್ಲಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರು ಜನರ ಕಲ್ಯಾಣಕ್ಕೋಸ್ಕರ ಕೆಲಸ ಮಾಡುತ್ತಿದ್ದರೆ, ಮಮತಾ ಬ್ಯಾನರ್ಜಿಯವರು ಸೋದರಳಿಯ ಕಲ್ಯಾಣಕ್ಕಾಗಿ ಆಡಳಿತ ನಡೆಸುತ್ತಿದ್ದಾರೆ ಎಂದು ಶಾ ದೂಷಿಸಿದರು.