Saturday, 23rd November 2024

ಆರಂಭಿಕ ವಹಿವಾಟಿನಲ್ಲಿ ಬಂಪರ್‌: 100ಕ್ಕೂ ಅಧಿಕ ಅಂಕಗಳಷ್ಟು ಏರಿಕೆ

ಮುಂಬಯಿ: ಮುಂಬೈ ಷೇರು ಮಾರುಕಟ್ಟೆ ಶುಕ್ರವಾರ ಆರಂಭಿಕ ವಹಿವಾಟಿನಲ್ಲಿಯೇ 100ಕ್ಕೂ ಅಧಿಕ ಅಂಕಗಳಷ್ಟು ಏರಿಕೆ ಕಂಡಿದ್ದು, ಇನ್ಫೋಸಿಸ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಎಚ್ ಡಿಎಫ್ ಸಿ ಬ್ಯಾಂಕ್ ಷೇರುಗಳು ಲಾಭ ಗಳಿಸಿದೆ.

ಸಂವೇದಿ ಸೂಚ್ಯಂಕ 141.75 ಅಂಕ ಏರಿಕೆಯಾಗಿದ್ದು, 51,673.27 ಅಂಕಗಳ ದಾಖಲೆಯ ವಹಿವಾಟಿಗೆ ಸಾಕ್ಷಿಯಾಗಿದೆ. ಎನ್ ಎಸ್ ಇ ನಿಫ್ಟಿ ಕೂಡಾ 36.50ಅಂಕಗಳಷ್ಟು ಏರಿಕೆಯಾಗಿ 15, 209.80 ಅಂಕಗಳ ಗಡಿ ತಲುಪಿದೆ.

ಗುರುವಾರ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ 222.13 ಅಂಕಗಳಷ್ಟು ಏರಿಕೆಯೊಂದಿಗೆ 51.531.52 ಅಂಕಗಳೊಂದಿಗೆ ವಹಿವಾಟು ಮುಕ್ತಾಯಗೊಂಡಿತ್ತು. ನಿಫ್ಟಿ 15,173.30ರ ಗಡಿ ತಲುಪಿತ್ತು.