ನವದೆಹಲಿ: ಶುಕ್ರವಾರ ಭಾರತೀಯ ಷೇರುಪೇಟೆ ಸಾಕಷ್ಟು ಏರಿಳಿತಗಳ ನಡುವೆ ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಏರಿಕೆ ದಾಖಲಿಸಿ ದರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಕುಸಿತ ಕಂಡಿತು.
ಬಿಎಸ್ಇ ಸೂಚ್ಯಂಕ ಸೆನ್ಸೆಕ್ಸ್ 12.78 ಅಂಕಗಳು ಏರಿಕೆಗೊಂಡು 51,544.30 ಪಾಯಿಂಟ್ಸ್ಗೆ ಹಾಗೂ ಎನ್ಎಸ್ಇ ಸೂಚ್ಯಂಕ ನಿಫ್ಟಿ 10 ಪಾಯಿಂಟ್ ಇಳಿಕೆಗೊಂಡು 15,163.30 ಅಂಕ ತಲುಪಿದೆ. 1400 ಷೇರುಗಳು ಏರಿಕೆಗೊಂಡರೆ, 1520 ಷೇರುಗಳು ಕುಸಿದವು.
ಬ್ಯಾಂಕ್ ಮತ್ತು ಐಟಿ ಹೊರತುಪಡಿಸಿ ಎಲ್ಲಾ ಇತರ ವಲಯದ ಸೂಚ್ಯಂಕಗಳಾದ ಲೋಹ, ಔಷಧ, ಎಫ್ಎಂಸಿಜಿ ಮತ್ತು ಪವರ್ ಕೆಂಪು ಬಣ್ಣದಲ್ಲಿ ಕೊನೆಗೊಂಡಿವೆ. ಭಾರತೀಯ ರೂಪಾಯಿ 11 ಪೈಸೆ ಏರಿಕೆ ಕಂಡು ಪ್ರತಿ ಡಾಲರ್ಗೆ 72.75 ರೂಪಾಯಿಗೆ ತಲುಪಿದೆ.