Wednesday, 23rd October 2024

ಕುಸ್ತಿ ಅಖಾಡಾದಲ್ಲಿ ಗುಂಡಿನ ದಾಳಿ: ಐದು ಮಂದಿ ಸಾವು

ಹರಿಯಾಣ: ಹರಿಯಾಣದ ಕಾಲೇಜಿನ ಕುಸ್ತಿ ಅಖಾಡಾದಲ್ಲಿ ಗುಂಡಿನ ದಾಳಿ ನಡೆದಿದ್ದು, ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಕುಸ್ತಿ ಅಖಾಡಾ ನಡೆಯುತ್ತಿದ್ದ ಸಂದರ್ಭ ಏಕಾಏಕಿ ಗುಂಡಿನ ದಾಳಿ ನಡೆಸಲಾಗಿದೆ. ಘಟನೆ ಹಿನ್ನೆಲೆ ಕುರಿತು ಇದುವರೆಗೆ ಮಾಹಿತಿ ಲಭ್ಯವಾಗಿಲ್ಲ.

ಈ ಕುರಿತಂತೆ ಮಾತನಾಡಿದ ಪೊಲೀಸರು, ಗುಂಡಿನ ದಾಳಿಯಿಂದ ಮೃತಪಟ್ಟವರಲ್ಲಿ ಓರ್ವ ಕುಸ್ತಿ ತರಬೇತುದಾರನಾಗಿದ್ದು, ಕೆಲವರು ಗಾಯಗೊಂಡಿದ್ದಾರೆ. ಇಬ್ಬರ ಗಂಭೀರ ಸ್ಥಿತಿಯಲ್ಲಿದ್ದಾರೆ. ಅಲ್ಲದೆ 3 ವರ್ಷದ ಬಾಲಕ ಕೂಡ ಗಾಯಗೊಂಡಿದ್ದಾನೆ ಎಂದು ತಿಳಿಸಿದ್ದಾರೆ.