Saturday, 9th November 2024

ರೋಹಿತ್‌ ಶತಕ: ಸುಸ್ಥಿತಿಯಲ್ಲಿ ಭಾರತ

ಚೆನ್ನೈ: ಆರಂಭಿಕ ಆಟಗಾರ ರೋಹಿತ್ ಶರ್ಮಾ ಶತಕದ ನೆರವಿನಿಂದ ಭಾರತ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಕುಸಿತದಿಂದ ಚೇತರಿಸಿಕೊಂಡಿದೆ. 54 ಓವರ್ ಗಳ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿದೆ.

ಶುಭಮನ್ ಗಿಲ್(0)ಹಾಗೂ ನಾಯಕ ವಿರಾಟ್ ಕೊಹ್ಲಿಯವರನ್ನು(0)ಬೇಗನೆ ಕಳೆದುಕೊಂಡಿತು. ಚೇತೇಶ್ವರ ಪೂಜಾರ 21 ರನ್ ಗಳಿಸಿ ಔಟಾದರು. ಔಟಾಗುವ ಮೊದಲು ರೋಹಿತ್ ಅವರೊಂದಿಗೆ 2ನೇ ವಿಕೆಟ್‍ಗೆ 85 ರನ್ ಜೊತೆಯಾಟ ನಡೆಸಿದರು.

ವಿಕೆಟ್ ಬೀಳುತ್ತಿದ್ದರೂ ರೋಹಿತ್ 130 ಎಸೆತಗಳನ್ನು ಎದುರಿಸಿ 14 ಬೌಂಡರಿ, 2 ಸಿಕ್ಸರ್ ಗಳನ್ನು ಒಳಗೊಂಡ 7ನೇ ಶತಕ ಸಿಡಿಸಿದರು. ಉತ್ತಮ ಪ್ರದರ್ಶನ ಮೂಲಕ ರೋಹಿತ್ ಶರ್ಮಾ ಅಂತರ್ ರಾಷ್ಟ್ರೀಯ ಕ್ರಿಕೆಟ್‍ನಲ್ಲಿ 2018ರ ಬಳಿಕ 106 ಇನಿಂಗ್ಸ್ ಗಳಲ್ಲಿ 19ನೇ ಶತಕ ಸಿಡಿಸಿದರು.

ರೋಹಿತ್ 21 ಟೆಸ್ಟ್ ಇನಿಂಗ್ಸ್ ಗಳಲ್ಲಿ 4 ಶತಕ, 49 ಏಕದಿನ ಇನಿಂಗ್ಸ್ ಗಳಲ್ಲಿ 13 ಶತಕ ಹಾಗೂ 36 ಟಿ-20 ಅಂತರ್ ರಾಷ್ಟ್ರೀಯ ಇನಿಂಗ್ಸ್ ಗಳಲ್ಲಿ 2 ಶತಕಗಳನ್ನು ಗಳಿಸಿದ್ದಾರೆ. ಕೊಹ್ಲಿ 120 ಅಂತರ್ ರಾಷ್ಟ್ರೀಯ ಇನಿಂಗ್ಸ್ ನಲ್ಲಿ 18 ಶತಕಗಳನ್ನುಸಿಡಿಸಿದ್ದರು.