ಚೆನ್ನೈ : ಪ್ರಧಾನಿ ನರೇಂದ್ರ ಮೋದಿ ಅವರು ಅರ್ಜುನ್ ಮೈನ್ ಬ್ಯಾಟಲ್ ಟ್ಯಾಂಕ್ ಮಾರ್ಕ್ -1 ಎ ಯನ್ನು ಭಾನುವಾರ ಚೆನ್ನೈನಲ್ಲಿರುವ ಭಾರತೀಯ ಸೇನೆಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಡಿ ಆರ್ ಡಿ ಒ ದ ಯುದ್ಧ ವಾಹನಗಳ ಸಂಶೋಧನೆ ಮತ್ತು ಅಭಿವೃದ್ಧಿ ಸ್ಥಾಪನೆಯಿಂದ ಸ್ಥಳೀಯವಾಗಿ ವಿನ್ಯಾಸಗೊಳಿಸಲ್ಪಟ್ಟ, ಅಭಿವೃದ್ಧಿಪಡಿಸಿದ ಮತ್ತು ತಯಾರಿಸಿದ ಅತ್ಯಾಧುನಿಕ ಟ್ಯಾಂಕ್ ನಿಂದ ಗೌರವ ಸ್ವೀಕರಿಸಿದರು.
ತಮಿಳುನಾಡಿನ ಚೆನ್ನೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಭೂ ಸೇನಾ ಮುಖ್ಯಸ್ಥ ಜನರಲ್ ಎಂ.ಎ. ನರವಾಣೆ ಅವರಿಗೆ ಅರ್ಜುನ್ ಟ್ಯಾಂಕ್ ಹಸ್ತಾಂತರಿಸಿದರು.
ಯುದ್ಧ ವಾಹನ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರ, ಡಿಆರ್ಡಿಒ ಜಂಟಿಯಾಗಿ ಅರ್ಜುನ್ ಯುದ್ಧ ಟ್ಯಾಂಕ್ ದೇಶೀಯವಾಗಿ ವಿನ್ಯಾಸ, ಅಭಿವೃದ್ಧಿ ಹಾಗೂ ನಿರ್ಮಾಣಗೊಳಿಸಿದೆ. ಇದರ ನಿರ್ಮಾಣದಲ್ಲಿ 15 ಶೈಕ್ಷಣಿಕ ಸಂಸ್ಥೆಗಳು, ಎಂಟು ಪ್ರಯೋಗಾಲಯಗಳು ಮತ್ತು ಹಲವಾರು ಎಂಎಸ್ಎಂಇಗಳು ನೆರವಾಗಿದ್ದವು.
ತಮಿಳುನಾಡು ಹಾಗೂ ಕೇರಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಹಲವಾರು ಯೋಜನೆಗಳನ್ನು ಉದ್ಘಾಟಿಸುತ್ತಿದ್ದು, ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ.