Friday, 22nd November 2024

7 ಕೆಜಿ ಸ್ಫೋಟಕ ವಶ: ಉಗ್ರರ ಸಂಚು ವಿಫಲ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಪುಲ್ವಾಮಾ ದಾಳಿಯ ಎರಡನೇ ವಾರ್ಷಿಕೋತ್ಸವದಂದು ಉಗ್ರರು ದಾಳಿ ನಡೆಸಲು ಸಂಚು ರೂಪಿಸಿದ್ದು, ಭದ್ರತಾ ಪಡೆಗಳು ಭಯೋತ್ಪಾದಕರ ಈ ಪಿತೂರಿಯನ್ನ ವಿಫಲಗೊಳಿಸಿವೆ.

ಜಮ್ಮುವಿನಲ್ಲಿರುವ ಬಸ್ ನಿಲ್ದಾಣದ ಬಳಿ ಭದ್ರತಾ ಪಡೆಗಳು ಭಾನುವಾರ 7 ಕೆಜಿ ಸ್ಫೋಟಕಗಳನ್ನು ವಶಪಡಿಸಿಕೊಂಡಿದೆ. ಇಷ್ಟು ಪ್ರಮಾಣದ ಸ್ಫೋಟಕಗಳ ಬಗ್ಗೆ ತನಿಖೆ ನಡೆಯುತ್ತಿದ್ದು, ಜಮ್ಮು ಕಾಶ್ಮೀರ ಪೊಲೀಸರು ಸಂಜೆ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಲಿದ್ದಾರೆ.