Thursday, 19th September 2024

ಫಾಸ್ಟ್ಯಾಗ್‌ ಅನುಷ್ಠಾನ: ಗಡುವು ವಿಸ್ತರಣೆ ಇಲ್ಲ- ಸಚಿವ ಗಡ್ಕರಿ

ನಾಗಪುರ: ಫಾಸ್ಟ್ಯಾಗ್‌ ಅನುಷ್ಠಾನಕ್ಕೆ ವಿಧಿಸಿರುವ ಗಡುವನ್ನು ಮತ್ತಷ್ಟು ವಿಸ್ತರಿಸಲಾಗುವುದಿಲ್ಲ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಭಾನುವಾರ ಹೇಳಿದ್ದಾರೆ.

ವಾಹನ ಮಾಲೀಕರು ಕೂಡಲೇ ಇ – ಪಾವತಿ ಸೌಲಭ್ಯ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಎಲೆಕ್ಟ್ರಾನಿಕ್ ಶುಲ್ಕ ಪಾವತಿಸಲು ಅನುಕೂಲವಾಗುವ ಫಾಸ್ಟ್ಯಾಗ್‌ ‌ ಅನ್ನು ಕಡ್ಡಾಯಗೊಳಿಸಲಾಗಿದೆ. ಫೆ.15 ರಿಂದ ಎಲ್ಲಾ ವಾಹನಗಳಿಗೂ ಫಾಸ್ಟ್ಯಾಗ್‌ ಕಡ್ಡಾಯವಾಗಿದ್ದು ಇಲ್ಲದಿದ್ದರೆ ಎರಡುಪಟ್ಟು ಶುಲ್ಕ ಪಾವತಿಸಬೇಕಿದೆ.

ಈ ಹಿಂದೆ ಎರಡು, ಮೂರು ಸಲ ಫಾಸ್ಟ್ಯಾಗ್ ನೋಂದಣಿ ದಿನಾಂಕವನ್ನು ವಿಸ್ತರಿಸಲಾಗಿದ್ದು ಈಗ ಮತ್ತೆ ವಿಸ್ತರಿಸುವು ದಿಲ್ಲ. ಎಲ್ಲರೂ ಫಾಸ್ಟ್ಯಾಗ್ ಖರೀದಿಸಬೇಕು ಎಂದು ಗಡ್ಕರಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *