Monday, 25th November 2024

ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಪಿ.ಬಿ.ಸಾವಂತ್ ಇನ್ನಿಲ್ಲ

ಮುಂಬೈ: ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ, ಭಾರತೀಯ ಪತ್ರಿಕಾ ಮಂಡಳಿಯ ಮಾಜಿ ಅಧ್ಯಕ್ಷ ಪಿ.ಬಿ.ಸಾವಂತ್  (91) ಸೋಮವಾರ ನಿಧನರಾದರು.

ಹೃದಯಾಘಾತದಿಂದಾಗಿ ಸೋಮವಾರ ಪುಣೆಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. ಮಂಗಳವಾರ ಪುಣೆಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಪುಣೆಯಲ್ಲಿ ನಡೆದ ಮೊದಲ ಎಲ್ಗಾರ್ ಪರಿಷತ್ ಸಭೆಯ ಅಧ್ಯಕ್ಷತೆಯನ್ನು ಪಿ.ಬಿ.ಸಾವಂತ್ ವಹಿಸಿದ್ದರು. ಶಿಸ್ತುಬದ್ಧ ನ್ಯಾಯ ಮೂರ್ತಿಗಳೆಂದು ಹೆಸರಾಗಿದ್ದ ಪಿ ಬಿ ಸಾವಂತ್ ಹಲವು ಮಹತ್ವದ ತೀರ್ಪುಗಳನ್ನು ನೀಡಿದ್ದರು. 1995 ರಲ್ಲಿ ನಿವೃತ್ತಿಯಾದ ನಂತರ ಅನೇಕ ಜನಪರ ಹೋರಾಟಗಳಲ್ಲಿ ಸಕ್ರಿಯರಾಗಿದ್ದರು

ಸಾವಂತ್ ಅವರ ನಿಧನಕ್ಕೆ ಹಲವು ವಕೀಲರು, ಹೋರಾಟಗಾರರು ಹಾಗೂ ಕಾರ್ಯಕರ್ತರು ಸಂತಾಪ ಸೂಚಿಸಿದ್ದಾರೆ. ನ್ಯಾಯಮೂರ್ತಿ ಸಾವಂತ್, ಪತ್ನಿ ಜಯಶ್ರೀ, ವಕೀಲ ಪುತ್ರ ವಿಶ್ವಜೀತ್ ಮತ್ತು ಇಬ್ಬರು ಪುತ್ರಿಯರಾದ ಸುಜಾತಾ ಹಾಗೂ ರಾಜಶ್ರೀ ಅವರನ್ನು ಅಗಲಿದ್ದಾರೆ.

1973 ರಲ್ಲಿ ಮುಂಬೈ ಹೈಕೋರ್ಟ್ ನ್ಯಾಯಾಧೀಶರಾಗಿ ಮತ್ತು 1989 ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು.