Saturday, 23rd November 2024

ಷೇರುಪೇಟೆ ಸತತ ಕುಸಿತ: ಸೆನ್ಸೆಕ್ಸ್ 379 ಪಾಯಿಂಟ್ಸ್ ನಷ್ಟ

ಮುಂಬೈ: ಭಾರತೀಯ ಷೇರುಪೇಟೆ ಗುರುವಾರ ಸತತ ಕುಸಿತ ಕಂಡಿದ್ದು, ಮುಂಬೈ ಷೇರುಪೇಟೆ ಸೆನ್ಸೆಕ್ಸ್ 379 ಪಾಯಿಂಟ್ಸ್ ಇಳಿಕೆ ಗೊಂಡರೆ, ನಿಫ್ಟಿ 90 ಪಾಯಿಂಟ್ಸ್ ಕುಸಿದಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇ.0.73ರಷ್ಟು ಕುಸಿದು 51,324.69 ಪಾಯಿಂಟ್ಸ್‌ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇ.90 ಪಾಯಿಂಟ್ಸ್‌ ಇಳಿಕೆಗೊಂಡು 15,118.95 ಪಾಯಿಂಟ್ಸ್‌ ಗಡಿ ಮುಟ್ಟಿದೆ.

1609 ಷೇರುಗಳು ಏರಿಕೆಗೊಂಡರೆ, 1316 ಷೇರುಗಳು ಕುಸಿತ ಕಂಡಿವೆ ಮತ್ತು 151 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಪಿಎಸ್‌ಯು ಬ್ಯಾಂಕ್ 5 ಪ್ರತಿಶತ ಮತ್ತು ಐಟಿ, ಮೆಟಲ್ ಮತ್ತು ಎನರ್ಜಿ ಸೂಚ್ಯಂಕಗಳು ಶೇಕಡಾ 1 ರಿಂದ 2ರಷ್ಟು ಏರಿಕೆ ಕಂಡರೆ, ಆಟೋ ವಲಯದ ಷೇರು ಸೂಚ್ಯಂಕ ಶೇಕಡಾ 1ರಷ್ಟು ಕುಸಿದಿದೆ.