Wednesday, 30th October 2024

ಚೆನ್ನೈ ಮೆಟ್ರೋ ಪ್ರಯಾಣ ದರದಲ್ಲಿ 20 ರೂ. ಕಡಿತ: ಫೆ.22ರಿಂದಲೇ ಜಾರಿ

ಚೆನ್ನೈ: ಚೆನ್ನೈ ಮೆಟ್ರೋ ರೈಲು ಪ್ರಯಾಣ ದರಗಳ ಪೈಕಿ ಗರಿಷ್ಠ ಶುಲ್ಕದಲ್ಲಿ 20 ರೂ. ಕಡಿತಗೊಳಿಸಲಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಶನಿವಾರ ಹೇಳಿದರು.

ದೀರ್ಘ ಪ್ರಯಾಣದ ಶುಲ್ಕವನ್ನು 70 ರೂಪಾಯಿಯಿಂದ 50 ರೂ.ಗೆ ಇಳಿಸಲಾಗಿದ್ದು, ಫೆಬ್ರವರಿ 22ರಿಂದಲೇ ಜಾರಿಗೆ ಬರಲಿದೆ.

2 ಕಿಲೋಮೀಟರ್ ದೂರಕ್ಕೆ 10 ರೂ., 2 ರಿಂದ ಐದು ಕಿ.ಮೀ ದೂರಕ್ಕೆ 20 ರೂ. ಮತ್ತು 5 ರಿಂದ 12 ಕಿ.ಮೀ ದೂರಕ್ಕೆ 30 ರೂ.ದರ,  12 ರಿಂದ 21 ಕಿ.ಮೀ ದೂರಕ್ಕೆ 40 ರೂಪಾಯಿ, ಮತ್ತು 21 ಕಿ.ಮೀ ಗಿಂತ ಹೆಚ್ಚಿನ (32 ಕಿ.ಮೀ ವರೆಗೆ) ಅಂತರಕ್ಕೆ 50 ರೂ. ದರ ನಿಗದಿಪಡಿಸಲಾಗಿದೆ.

ಕ್ಯೂಆರ್ ಕೋಡ್ ಅಥವಾ ಸಿಎಮ್‌ಆರ್ ಎಲ್ ಸ್ಮಾರ್ಟ್ ಕಾರ್ಡ್‌ಗಳನ್ನು ಬಳಸಿ ರಿಚಾರ್ಜ್ ಮಾಡುವವರಿಗೆ ಶೇ.20 ರಷ್ಟು ಶುಲ್ಕ ರಿಯಾಯಿತಿ ನೀಡಲಾಗುವುದು.