Friday, 13th December 2024

ಗ್ರಾಮ ವಾಸ್ತವ್ಯ ಎಂದರೆ ಗ್ರಾಮದಲ್ಲಿ ಒಂದು ದಿನ ಮಲಗಿ ಹೋಗುವುದಲ್ಲ: ಶಾಸಕ ವೆಂಕಟರಮಣಪ್ಪ

ಪಾವಗಡ: ತಾಲೂಕಿನ ವೆಂಕಟಮ್ಮನಹಳ್ಳಿ ಗ್ರಾಮದಲ್ಲಿ ನೂತನವಾಗಿ ರಾಜ್ಯ ಸರ್ಕಾರದ ಜಾರಿಗೆ ತಂದಿರುವ ಯೋಜನೆ ಯಾದ ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ ಎಂಬ ಕಾರ್ಯಕ್ರಮ ಶನಿವಾರ ಉದ್ಘಾಟಿಸಿ ಮಾತನಾಡಿದ ಶಾಸಕರು ಇಂತಹ ಕಾರ್ಯಕ್ರಮಗಳಿಂದ ಸರ್ಕಾರಿ ಸವಲತ್ತುಗಳನ್ನು ಪಡೆಯದೇ ಇದ್ದ ಕೆಲವೊಂದು ಜನರಿಗೆ ಉಪಯುಕ್ತ ವಾಗುತ್ತದೆ.

ಸರ್ಕಾರದ ಅದೇಶ ಎಂದು ಅಧಿಕಾರಿಗಳು ಗ್ರಾಮಗಳಿಗೆ ಬಂದು ಗ್ರಾಮ ವಾಸ್ತವ್ಯ ಹೆಸರಲ್ಲಿ ನಿದ್ದೆ ಮಾಡಿ ಹೋಗಬಾರದು. ಗ್ರಾಮವಾಸ್ತವ್ಯ ಎಂದರೇನು ಇದರಿಂದ ಯಾರಿಗೆ ಉಪಯುಕ್ತ ಎಂಬುದು  ಜನರಿ ಅರಿವು  ಮೂಡಿಸಬೇಕು. ಯಾವ ಯಾವ ಇಲಾಖೆಗಳಿಂದ ಸರ್ಕಾರದ ಸವಲತ್ತುಗಳನ್ನು ಜಾರಿ ಮಾಡ ಲಾಗಿದೆ. ಇದನ್ನು ಯಾವ ರೀತಿಯಲ್ಲಿ ಜನರು ಸದುಪಯೋಗ ಪಡಿಸಿಕೊಳ್ಳಲು ಮುಂದಾಗಬೇಕು ಎಂಬುದು ತಿಳಿಸಬೇಕು ಎಂದರು.

ಏಕೆ ಗಡಿ ಭಾಗದ ಗ್ರಾಮ ಆಯ್ಕೆ ಮಾಡಲಾಗಿದೆ ಎಂಬುದು ಅಧಿಕಾರಿಗಳು ಅರಿತುಕೊಂಡು ಈ ಭಾಗದ  ಜನರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗ ಬೇಕು ಎಂದರು.

ಶಾಸಕರು ಕಾರ್ಯಕ್ರಮ ದಲ್ಲಿಯೇ ಕೆಲವೊಂದು ಸಮಸ್ಯೆಗಳನ್ನು ಬಗ್ಗೆ ಹರಿಸಿದರು.ಗ್ರಾಮಕ್ಕೆ ಸಾರಿಗೆ ವ್ಯವಸ್ಥೆ.ಈ ಭಾಗದ ಜನರ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ತಕ್ಷಣವೇ ನಾರ್ಸ್ ವ್ಯವಸ್ಥೆ. ಗಡಿ ಭಾಗವಾದ ಈ ಗ್ರಾಮದಲ್ಲಿ ಪಕ್ಕದ ಆಂಧ್ರದ ಪೋಲಿಸರ ಕಿರುಕುಳ ತಪ್ಪಿಸಲು ಸಿಪಿಐ ವೆಂಕಟೇಶ ರವರಿಗೆ ಶಾಸಕರು ಸೂಚಿಸಿದರು.

ತಹಶಿಲ್ದಾರ ನಾಗರಾಜ್ ರವರ ಇಲಾಖೆಯ ಯೋಜನೆಗಳು ಯಾವ ರೀತಿಯಲ್ಲಿ  ಉಪಯೋಗಿಸಿ ಕೊಳ್ಳಬೇಕು ಎಂಬುದು ವಿವರಿಸಿ ದರು. ಇದೇ ವೇಳೆ 33 ಇಲಾಖೆಯ ಅಧಿಕಾರಿಗಳಿಂದ ಅವರವರ ಇಲಾಖೆ ಸವಲತ್ತು ಗಳನ್ನು ಹೇಗೆ ಪಡೆಯಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು.

ಇದೇ  ವೇಳೆ  ಗ್ರಾಮ ವಾಸ್ತವ್ಯದಲ್ಲಿ ಭಾಗವಹಿಸಿರುವ ಉಪ ತಹಶಿಲ್ದಾರ ಎನ್ ಮೂರ್ತಿ. ಗ್ರಾಮ ಪಂಚಾಯತಿ ಅಧ್ಯಕ್ಷೆ ಅನುಷ ಉಪಾಧ್ಯ ಅಶೋಕ. ಮಾಜಿ ಗ್ರಾ.ಪಂ.ಅಧ್ಯಕ್ಷ ಚನ್ನಕೇಶವ. ನಾನಿ(ನಾಗೇಂದ್ರರಾವ್) ಕಂದಾಯ ಅಧಿಕಾರಿ ಶಿವನಂದರೆಡ್ಡಿ .ಸಣ್ಣ ಕೃಷ್ಣಪ್ಪ.ಮುತ್ಯಾಲಪ್ಪ.ತಾಲ್ಲೂಕು ಪಂಚಾಯತಿ ಸದಸ್ಯ ನರಸಿಂಹ. ಹಾಗೂ ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು ಭಾಗವಹಿಸಿದರು.

ಗ್ರಾಮ ವಾಸವ್ಯಕ್ಕೆ ವಂಕಟಮ್ಮನಹಳ್ಳಿ ಗ್ರಾಮಕ್ಕೆ ಬಂದಂತಹ ಶಾಸಕರಿಗೆ ಮತ್ತು ಅಧಿಕಾರಿಗಳಿಗೆ ಗ್ರಾಮಸ್ಥರು ಕಾರ್ಯಕ್ರಮದ ವೇದಿಕೆ ವರೆಗೆ ಹೂವು  ಹಾಕುವ ಮೂಲಕ ಸ್ವಾಗತಿಸಿದ್ದು ವಿಶೇಷವಾಗಿತ್ತು. ಇದೇ ವೇಳೆ ಗ್ರಾಮದ ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳಾದ ಉಚಿತ ಗ್ಯಾಸ್.ವೃದ್ಧಪ್ಪ ವೇತನ.ಇತರೆ ಅದೇಶ ಪತ್ರಗಳನ್ನು ನೀಡಿದರು.