ಮುಂಬೈ: ಭೂಗತ ಪಾತಕಿ ರವಿ ಪೂಜಾರಿಯನ್ನ ಮಂಗಳವಾರ ಮುಂಬೈಗೆ ಕರೆತರಲಾಗಿದೆ.
ಕಳೆದ ವಾರ ಬೆಂಗಳೂರು ಕೋರ್ಟ್ನಲ್ಲಿ ಸುದೀರ್ಘ ವಾದ – ವಿವಾದದ ಬಳಿಕ ಮುಂಬೈ ಪೊಲೀಸರಿಗೆ ಪೂಜಾರಿ ಕಸ್ಟಡಿ ನೀಡಲಾ ಗಿದೆ. ರವಿ ಪೂಜಾರಿ ಮಾರ್ಚ್ 9ನೇ ತಾರೀಖಿನವರೆಗೂ ಮುಂಬೈ ಪೊಲೀಸರ ಕಸ್ಟಡಿಯಲ್ಲೇ ಇರಲಿದ್ದಾನೆ.
ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಲೇ ಬಂದಿದ್ದ ಭೂಗತಪಾತಕಿ ರವಿ ಪೂಜಾರಿ ಯನ್ನ 2020ರ ಫೆಬ್ರವರಿ ತಿಂಗಳಲ್ಲಿ ಕರ್ನಾಟಕ ಪೊಲೀಸರು ಸೆನೆಗಲ್ನಲ್ಲಿ ಬಂಧಿಸಿ ಬೆಂಗಳೂರಿಗೆ ಕರೆ ತಂದಿದ್ದರು.