Thursday, 19th September 2024

ಪೆಟ್ರೋಲ್ ದರ ಏರಿಕೆ: ಬೆಂಗಳೂರಿನಲ್ಲಿ ₹93.98, ನವದೆಹಲಿಯಲ್ಲಿ ₹90.93

ಬೆಂಗಳೂರು: ದಿನದಿಂದ ದಿನಕ್ಕೆ ಪೆಟ್ರೋಲ್‌ ಬೆಲೆ ಹೆಚ್ಚುತ್ತಲೇ ಇದ್ದು, ಬುಧವಾರ ಕೂಡ ಪೆಟ್ರೋಲ್​ ದರ ಏರಿಕೆ ಕಂಡಿದೆ.

ಪೆಟ್ರೋಲ್​ ಮತ್ತು ಡೀಸೆಲ್​ ದರ 35 ಪೈಸೆ ಹೆಚ್ಚಳವಾಗಿದ್ದು, ಬೆಂಗಳೂರಿನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ ₹93.98 ಹಾಗೂ ಪ್ರತಿ ಲೀಟರ್​ ಡೀಸೆಲ್​ ದರ ₹86.21ಗೆ ಮಾರಾಟವಾಗುತ್ತಿದೆ.

ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರಸ್ತುತ ಲೀಟರ್‌ʼಗೆ ₹90.93 ರೂ. ಹಾಗೂ ಡೀಸೆಲ್ ಬೆಲೆ ₹81.32 ರೂ.ಗೆ ಮಾರಾಟವಾಗುತ್ತಿದ್ದು, ಇಂಧನ ದರ ಹೆಚ್ಚಳದ ನಂತರ ಮುಂಬೈಯಲ್ಲಿ ಪೆಟ್ರೋಲ್ ಬೆಲೆ ₹97.34 ರೂ. ಹಾಗೂ ಡೀಸೆಲ್ ಬೆಲೆ ₹88.44 ರೂ.ಗೆ ಮಾರಾಟ ವಾಗುತ್ತಿದೆ.