ವಾಷಿಂಗ್ಟನ್: ಲಿಂಡಾ ಥಾಮಸ್-ಗ್ರೀನ್ಫೀಲ್ಡ್ ಅವರನ್ನು ವಿಶ್ವಸಂಸ್ಥೆಯ ಮುಂದಿನ ಅಮೆರಿಕದ ರಾಯಭಾರಿಯಾಗಿ ಅಧ್ಯಕ್ಷ ಜೋ ಬೈಡನ್ ನಾಮನಿರ್ದೇಶಿಸಿದ್ದು, ಅಮೆರಿಕದ ಸೆನೆಟ್ ದೃಢಪಡಿಸಿದೆ.
ನೂರು ಸದಸ್ಯರ ಸೆನೆಟ್ ಥಾಮಸ್-ಗ್ರೀನ್ಫೀಲ್ಡ್ ಅವರನ್ನು 78 ರಿಂದ 20 ಮತಗಳಿಂದ ಬೆಂಬಲಿಸಿ ವಿಶ್ವ ಸಂಸ್ಥೆಯಲ್ಲಿ ಅಮೆರಿ ಕದ ಪ್ರತಿನಿಧಿಯಾಗಿ ಮತ್ತು ಬೈಡನ್ ಸಂಪುಟ ಸದಸ್ಯರಾಗಿ ಆಯ್ಕೆ ಮಾಡಿತು.
ಥಾಮಸ್ ಕಳೆದ 35 ವರ್ಷಗಳಿಂದ ನಾಲ್ಕು ಖಂಡಗಳೊಂದಿಗೆ ವಿದೇಶಾಂಗ ಸೇವೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ‘ಥಾಮಸ್ – ಗ್ರೀನ್ಫೀಲ್ಡ್ ಒಬ್ಬ ಅನುಭವಿ ರಾಜತಾಂತ್ರಿಕ ಅಧಿಕಾರಿ. ಅಮೆರಿಕನ್ ಮೌಲ್ಯಗಳ ಬಗ್ಗೆ ಬಹಳ ಬದ್ಧತೆ ಹೊಂದಿದ್ದಾರೆ.
ವಿಶ್ವಸಂಸ್ಥೆ ಸೇರಿದಂತೆ ವಿಶ್ವದ ಬೇರೆ ಬೇರೆ ಸ್ಥಳಗಳಲ್ಲಿ ನಮ್ಮ ರಾಷ್ಟ್ರವನ್ನು ಸಮರ್ಪಕವಾಗಿ ಪ್ರತಿನಿಧಿಸಲು ಸೂಕ್ತ ವ್ಯಕ್ತಿ’ ಎಂದು ವಿದೇಶಾಂಗ ಕಾರ್ಯದರ್ಶಿ ಟೋನಿ ಬ್ಲಿಂಕೆನ್ ಹೇಳಿದ್ದಾರೆ.