ಅವಲೋಕನ
ವಿಶ್ವವಾಥ ಹೆಗ್ಡೆ
ಹೆಣಗಳು ಬೀಳುತ್ತಿದೆ! ಮುಖಪುಟದ ಸುದ್ದಿಯಾಗುತ್ತಿದೆ ! ಗಣಿಕಾರಿಕೆಯ ಸುತ್ತ ಮುತ್ತ ವಾಸಿಸುವ ಲಕ್ಷಾಂತರ ಕುಟುಂಬಗಳು ಹೆದರಿಕೆಯ ನೆರಳಿನಲ್ಲಿಯೇ ಬದುಕುತ್ತಿದ್ದಾರೆ, ದೃಶ್ಯ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಎಷ್ಟೇ ಎಚ್ಚರಿಕೆಯ ಸುದ್ದಿ ಬಂದಿದ್ದರೂ ನಮ್ಮ ಮರೆವು ಎಂಬ ಮಹಾನ್ ಶಕ್ತಿಯ ಮುಂದೆ ನಾವು ಮರೆತು ಇನ್ನೊಂದು ಬಿಸಿ ಸುದ್ದಿಯ ಹಿಂದೆ ಹೋಗಿರುತ್ತೇವೆ.
ಈ ಅಕ್ರಮ ಗಣಿಗಾರಿಕೆಯೆಂದರೆ ಕೇವಲ ಕಲ್ಲು ಗಣಿಗಾರಿಕೆ ಮಾತ್ರವಲ್ಲ, ಮರಳು, ಕಲ್ಲಿದ್ದಲು, ಕಲ್ಲು, ಮಣ್ಣು, ಅದಿರುಗಳು ಒಟ್ಟಾರೆ ಭೂಮಿ ಯಲ್ಲಿ ಸಿಗುವ ಖನಿಜ ಸಂಪನ್ಮೂಲಗಳು! ಹೌದು, ಭಾರತದಂಥ ದೊಡ್ಡ ರಾಷ್ಟ್ರಕ್ಕೆ ಖನಿಜ ಸಂಪನ್ಮೂಲಗಳ
ಗಣಿಗಾರಿಕೆಯ ಅವಶ್ಯಕತೆ ಇದೆ. ಆದರೆ ಇವೇನೂ ನಮಗೆ ಸಂಪೂರ್ಣ ಲಾಭವನ್ನೇ ತಂದುಕೊಡುತ್ತವೆ ಎಂದು ಅನ್ನೋದು ಮಾತ್ರ ಸುಳ್ಳು, ಗಣಿಗಾರಿಕೆಯ ಜತೆಗೆ ಅಕ್ರಮ ಗಣಿಗಾರಿಕೆ ಎಂಬ ಬಳುವಳಿ ನಮ್ಮ ಜತೆ ಬಂದು ಭಾರತದ ನಿಜವಾದ ಸಂಪತ್ತು ಲೂಟಿಯಾಗುತ್ತಿದೆ.
ಅಂದು ಬ್ರಿಟಿಷರು ನಮ್ಮ ಭಾರತದ ಸಂಪತ್ತನ್ನು ದೋಚಿ ಹೋದಂತೆ, ಇಂದು ನಮ್ಮವರೇ ನಮ್ಮ ಸಂಪತ್ತಿನ ದುರುಪಯೋಗ ಆಗುವಂತೆ ಮಾಡುತ್ತಿದ್ದಾರೆ. ಇಲ್ಲಿ ನಿರಪೇಕ್ಷಣ ಪತ್ರ ಇಲ್ಲದೆಯೂ, ಪರವಾನಗಿ ಇಲ್ಲದೆಯೂ, ಸ್ಫೋಟಿಸುವ ವಸ್ತುವಿಗಾಗಲಿ ಅಥವಾ ಸ್ಫೋಟಕ ಸಾಗಿಸುವ ವಾಹನಗಳು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಯ ಅವಶ್ಯಕತೆಗಳಿಲ್ಲದೆಯೂ, ಹಾಗೆಯೇ ವ್ಯವಹಾರದ ಪರವಾನಗಿ ಇದ್ದರೂ ಅದಕ್ಕೂ ಮಿಗಿಲಾಗಿ ನಿರಂಕುಶವಾಗಿ ಎಗ್ಗಿಲ್ಲದೆ ಮಾನವನ ದುರಾಸೆಯ ಪ್ರತೀಕವಾಗಿ ಈ ಗಣಿಗಾರಿಕೆ ದಿನಂಪ್ರತಿ ಮಿಲಿಯನ್ ಮಿಲಿಯನ್ ಗಟ್ಟಲೆಯ ವ್ಯವಹಾರಕ್ಕಾಗಿ ನಾಗಲೊಟದಲ್ಲಿ ಓಡುತ್ತಿದೆ.
ಈ ಗಣಿಗಾರಿಕೆ ಎಂದ ಮೇಲೆ ಅದಕ್ಕೊಂದು ಕಾನೂನು ಇರಲೇಬೇಕಲ್ಲ, ಈ ಗಣಿಗಾರಿಕೆ ಸಂಬಂಧಪಟ್ಟ ನಿರ್ದಿಷ್ಟವಾದ ಭೂಮಿಯ ಭಾಗದ ನಡೆಯಬೇಕು ಹಾಗೆಯೇ ನಿರ್ದಿಷ್ಟವಾದ ಕಾನೂನಿನ ಚೌಕಟ್ಟಿನ ನಡೆಯಬೇಕು ಅಂದಾದ ಮೇಲೆ ನಿಮಗೆ ತಲೆಯಲ್ಲಿ ಕಾಡುವ ಪ್ರಶ್ನೆ ಅಕ್ರಮ ಹೇಗಾಗಬಹುದು ಅಲ್ಲವೇ? ಮರಳಿನ ದಂಧೆಯಿಂದ ಹಿಡಿದು ಕಲ್ಲಿದ್ದಲು ಹಗರಣವರೆಗೆ ಈ
ಅಕ್ರಮದ ಬಲೆ ಹರಡಿಕೊಂಡಿದೆ.
ಕೆಲವೇ ವಾರಗಳ ಹಿಂದೆ ನಡೆದ ಶಿವಮೊಗ್ಗದ ಕೇಸಿಗೂ, ಈ ವಾರ ಚಿಕ್ಕಬಳ್ಳಪುರದಲ್ಲಿ ನಡೆದ ಅವಗಡಕ್ಕೂ ಅಜಗಜಾಂತರ ವ್ಯತ್ಯಾಸವೇನಿಲ್ಲ. ಎಲ್ಲವೂ ಕಾನೂನು ಮೀರಿ ನಡೆಯುವುದಾದರೆ ಮತ್ತೆ ಕಾನೂನು ಯಾಕೆ? ಒಂದುವೇಳೆ ಈಗಿರುವ ಕಾನೂನು ಈಗಿನ ಗಣಿಗಾರಿಕೆ ಪದ್ಧತಿಯ ವ್ಯವಸ್ಥೆ ಹೊಂದಿಕೆ ಆಗದಿದ್ದರೆ ಮತ್ತೆ ಗಣಿಗಾರಿಕೆಗೆ ಪರವಾನಗಿ ಯಾಕೆ ನೀಡಬೇಕು. ಒಂದು
ಕಾಲಘಟ್ಟ ದಲ್ಲಿ ಮಾಜಿ ಲೋಕಾಯುಕ್ತರಾದ ಸಂತೋಷ್ ಹೆಗಡೆಯವರು ಗಣಿಗಾರಿಕೆಯ ಬಗೆಗಿನ ತೀರ್ಮಾನ ಕೈಗೊಳ್ಳುವಲ್ಲಿ
ಮೀನಮೇಷ ಎಣಿಸಿದ ಸರಕಾರಕ್ಕೆ ಚಾಟಿ ಏಟನ್ನು ನೀಡಿದ್ದರು.
ಆದರೆ ಅದು ಯಾವ ಮಟ್ಟಕ್ಕೆ ಬೆಳೆಯಿತು ಅಂದರೆ ಈ ಮಟ್ಟದಲ್ಲಿ ಈ ಅಕ್ರಮ ಗಣಿಗಾರಿಕೆ ಸದ್ದು ಮಾಡಲು ಎಲ್ಲ ಹಿಂದಿನ ಸರಕಾರಗಳ ಪಾಲು ಕೂಡ ಮಹತ್ವದ್ದು. ಈ ಅಕ್ರಮ ಗಣಿಗಾರಿಕೆಯ ಉರುಳು ಪಕ್ಷ ಭೇದವಿಲ್ಲದೆ ಜಾತಿ ಭೇದವಿಲ್ಲದೆ ನಮ್ಮ ಕೊರಳಿಗೆ ಸುತ್ತುಕೊಂಡಿದ್ದಾಗಿದೆ. ನಾವು ನಮ್ಮ ಕೆಲವು ಕಾರ್ಪೊರೇಟ್/ಖಾಸಗಿ ವ್ಯಕ್ತಿಗಳ ಮತ್ತು ರಾಜಕೀಯ ನಾಯಕರುಗಳ ಕೈಯಲ್ಲಿ ಬದುಕುತಿದ್ದೇವೆ ಹೇಗೆಂದರೆ ಸ್ವಂತವಾಗಿ ಯೋಚಿಸಲು ಸಾಧ್ಯವಿಲ್ಲದ್ದಷ್ಟೂ ಅಥವಾ ಗೊತ್ತಿದ್ದರೂ ಸೊತ್ತಲು ಸಾಧ್ಯ ವಿಲ್ಲದಿರುವಷ್ಟು.
HH ಅತ್ತ ಪ್ರತಿಭಟಿಸಲೂ ಸಾಧ್ಯವಿಲ್ಲದೆ, ಸಮಸ್ಯೆಯ ಜತೆ ಬದುಕಲು ಆಗದೆ ಅರ್ಧ ಸತ್ತಂತೆ ಅಗಿದ್ದೇವೆ. ಹಾಗೆಯೇ ನಮ್ಮ ಮಾಜಿ ಮುಖ್ಯಮಂತ್ರಿಯೋರ್ವರು ಹೇಳಿದ್ದು ನಮ್ಮ ರಾಜ್ಯದಲ್ಲಿ ಜನಪ್ರತಿನಿಽಗಳೇ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿಕೊಂಡ್ಡಿದ್ದಾರೆ ಎನ್ನುವ ಸೋಟಕ ಮಾಹಿತಿ. ಈ ಮಾಹಿತಿ ಎಲ್ಲರಿಗೂ ತಿಳಿದಿದ್ದೇ, ಆದರೆ ಇಟದು ಒಂದು ಹೆಮ್ಮರವಾಗಿ ಬೆಳೆಸಿದ್ದು ಯಾರು ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆ. ಇದು ಈಗಿನ ಸಮಸ್ಯೆ ಅಲ್ಲವೇ ಅಲ್ಲ, ಅದು ದಶಕ ದಶಕದ ಸಮಸ್ಯೆ, ಆದರೆ ವೇಗ
ಪಡೆದುಕೊಡಿದ್ದು ಮಾತ್ರ ಕಳೆದ ಒಂದು ದಶಕದಲ್ಲಿ ಎಂದರೆ ತಪ್ಪಾಗಲಾರದು.
ಸುಲಭವಾಗಿ ಮತ್ತು ಬಹಳ ವೇಗವಾಗಿ ನೀವು ಶ್ರೀಮಂತಗೊಳ್ಳಬೇಕೆ ಹಾಗಾದರೆ ನೀವು ಮರಳೋ, ಕ ಗಣಿಗಾರಿಕೆ ಮಾಡಬೇಕು ಎನ್ನುವ ಮಾತಿದೆ. ಹಾಗೆಯೇ ಅದು ನಿಜವೂ ಹೌದು. ಮುಂದೆ ನೀವೊಬ್ಬ ಪ್ರತಿಷ್ಠಿತ ವ್ಯಕ್ತಿಯಾಗಿ ರೂಪುಗೊಳ್ಳಬೇಕೆಂದರೆ ಒಂದೋ ನೀವು ಈ ವ್ಯವಹಾರ ಮಾಡಬೇಕು ಇಲ್ಲವೇ ಇಂತ ವ್ಯವಹಾರಸ್ಥರ ಕೈಹಿಡಿಯಬೇಕು ಎಂದು ಜನ ಸಾಮಾನ್ಯರು ಮಾತಾಡುವಂತಾಗಿಬಿಟ್ಟಿದೆ. ಇಷ್ಟಾದರೂ ಇದು ನಮಗೆ ಮುಖ್ಯವಾದ ವಿಷಯವೇ ಅಲ್ಲ ಬಿಡಿ !
ಬೆಳವಣಿಗೆ ಅನ್ನುವುದು ಒಂದು ನಿರಂತರ ಪ್ರಕ್ರಿಯೆ ಮತ್ತು ಧನಾತ್ಮಕ ಬೆಳವಣಿಗೆ ನಮ್ಮೆಲ್ಲರ ಪ್ರಗತಿಯ ಸಂಕೇತವೂ ಹೌದು. ಆದರೆ ಪ್ರಗತಿ, ಬೆಳವಣಿಗೆ, ಉದ್ಯೋಗ ಸೃಷ್ಟಿ ಎಂಬ ಹೆಸರಿನಲ್ಲಿ ಸಮಾಜ ಮತ್ತು ಪರಿಸರದ ಅಸಮತೋಲನ ಎಷ್ಟು ಸರಿ? ನಾವಿಲ್ಲಿ ಅಭಿವೃದ್ಧಿಯ ಮತ್ತು ಉದ್ಯೋಗ ಸೃಷ್ಟಿಯ ವ್ಯಾಖ್ಯಾನವನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು ಅಲ್ಲವೇ ಸ್ನೇಹಿತರೇ. ಅಸಮತೋಲನವಿಲ್ಲದ, ಪರಿಸರ ನಾಶವಿಲ್ಲದ, ಸಮಾಜದ ಹಿತಕರ ಹೊಂದಾಣಿಕೆಯ ಮತ್ತು ಸಾಮಾಜಿಕ ಭದ್ರತೆಯ ಅಭಿವೃದ್ಧಿ ನಿಜವಾದ ಪ್ರಗತಿಯೇ ಹೊರತು ಅಕ್ರಮ, ಕಾನೂನು ಬಾಹಿರವಾದ ಮತ್ತು ಪ್ರಶ್ನಾರ್ಹವಾದ ಅಭಿವೃದ್ಧಿ ನಮ್ಮೆಲ್ಲರ ಕಾಲ್ಪನಿಕ ಮತ್ತು ಭ್ರಮೆಯ ಪ್ರಗತಿ ಎನ್ನಬಹುದಲ್ಲವೇ ?
ರಾಜ್ಯದ ಅಥವಾ ರಾಷ್ಟ್ರದ ಅಭಿವೃದ್ಧಿಯ ದೃಷ್ಟಿಯಿಂದ ಗಣಿಗಾರಿಕೆ ಎಂಬ ಉದ್ಯಮ ಅನಿವಾರ್ಯವಾದರೂ ಅದನ್ನು ನಡೆಸಿ ಕೊಂಡು ಹೋಗುತ್ತಿರುವ ರೀತಿ ಮತ್ತು ಆಡಳಿತಾತ್ಮಕ ವ್ಯವಸ್ಥೆ ನಮ್ಮ ಹಿತ ಕಾಯುವ ಉದ್ಯಮವಾಗುವ ಬದಲು ಕೆಲವರ ಪಾಲಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿಯೂ ಹಾಗೆಯೇ ಜನತೆ ಮತ್ತು ಈ ಪರಿಸರಕ್ಕೆ ಬೆಂಕಿ ಇಡುವ ಕೊಳ್ಳಿಯಾಗಿ ಯೂ ಮಾರ್ಪಾಡು ಆಗುತ್ತಿರುವುದು ಖೇದವೆ ಸರಿ. ಇದು ಹೇಗೆ ಮಿಲಿಯನ್ ರುಪಾಯಿ ಬ್ಯುಸಿನೆಸ್ ಎಂದು ನೀವು ಕೇಳಬಹುದು.
ಸಾಮಾನ್ಯವಾಗಿ ಗಣಿಗಾರಿಕೆ ಮಾಡಲಾದ ಪ್ರತಿ ಖನಿಜಕ್ಕೂ ಸರಕಾರಕ್ಕೆ ಗಣಿಗಾರಿಕೆ ಮಾಡುವ ಪ್ರತಿಯೊಬ್ಬರೂ ನಿರ್ದಿಷ್ಟಪಡಿಸಿದ ಹಣ ಸಂದಾಯ ಮಾಡಲೇಬೇಕು. ಅದಕ್ಕೆ ಅವರು ಅನುಮತಿ ತೆಗೆದುಕೊಂಡು ಕಾನುನಾತ್ಮಕವಾಗಿಯೇ ಗಣಿಗಾರಿಕೆ ಮಾಡಿದ್ದರೆ ಇಲ್ಲಿ ಆಕ್ರಮವೇ ಉದ್ಭವಿಸುವುದಿಲ್ಲ. ಇ ಇರುವುದು ನಿಜವಾದ ಸಮಸ್ಯೆ. ಸರಕಾರಕ್ಕೆ ರಾಜಾದಾಯ ಸಂದಾಯ ಮಾಡದೆ ಸಾಗಿಸುವ ಮತ್ತು ಸರಕಾರದ ಜತೆಗೆ ಅಧಿಕಾರಿಗಳ ಕಣ್ಣು ತಪ್ಪಿಸಿ ಕಾನೂನಾತ್ಮಕವಾಗಿ ಪಡೆದ ಜಾಗದಿಂದಲೇ ಹೆಚ್ಚಿನ ಮತ್ತು
ರಾಜಾದಾಯ ನೀಡದೆ ಗಣಿಗಾರಿಕೆ ಮಾಡಿ ಹಣ ಮಾಡುವ ಈ ದಂಧೆಯೇ ಅಕ್ರಮ ಗಣಿಗಾರಿಕೆ. ಇಲ್ಲಿ ಗಣಿಗಾರಿಕೆ ಮಾಡುವ
ಪರವಾನಗಿ ಇಟ್ಟುಕೊಂಡೆ ಇದ್ದು ಕೂಡ ಅಕ್ರಮ ನಡೆಯತ್ತದೆ.
ಜತೆಗೆ ಪರವಾನಗಿಯ ಅವಧಿ ಮುಗಿದಿದ್ದರೂ ಕೆಲಸ ಮುಂದುವರಿಸುವ ಇವರ ಬಗ್ಗೆ ಹಲವಾರು ವರದಿಗಳು ಆಗುತ್ತಲೇ ಇರುತ್ತದೆ. ಇದಕ್ಕೆ ಸಂಬಂಧಿತ ಗಣಿ ಇಲಾಖೆ ಅಧಿಕಾರಿಗಳು ದಂಡ ವಸೂಲಿ ಮಾಡುತ್ತಲೇ ಇದ್ದಾರೆ. ಯಾವುದೇ ಪರವಾನಗಿ ಇಲ್ಲದೆ ಕಳ್ಳತನದ ದಂಧೆ ಒಂದೆಡೆಯಾದರೆ, ಪರವಾನಗಿ ಇದ್ದು ರಾಜಾರೋಷ ವಾಗಿ ಮಾಡುವ ಶ್ರೀಮಂತಿಕೆಯ ಉದ್ಯಮವೇ ಈ ಅಕ್ರಮ ಗಣಿಗಾರಿಕೆಯ ಮತ್ತು ಇದರ ಅಂದಾಜು ನಮ್ಮ ಮನಸಿಗೆ ನಿಲುಕದ್ದು ಎನ್ನುವುದು ಸತ್ಯ. ಇಲ್ಲಿ ನಾವು ಕರ್ನಾಟಕವೇ ಈ ಅಕ್ರಮ ದಂಧೆಗಳ ಭಾದ್‌ಷಾ ಅನ್ನುವಂತಿಲ್ಲ. ಯಾಕೆಂದರೆ ಈ ಅಕ್ರಮ ಮರಳುಗಾರಿಕೆ ಅಥವಾ ಅಕ್ರಮ ಗಣಿಗಾರಿಕೆ ದಶಕಗಳಿಂದ ದೇಶದ ಎಲ್ಲ ಭಾಗಗಳಲ್ಲೂ ನಡೆದುಕೊಡು ಬಂದಿದೆ.
ಕರ್ನಾಟಕದಲ್ಲಿ ಸ್ವಲ್ಪವಾದರೂ ಕಡಿವಾಣ ಹಾಕಲು ಕೆಲವು ಕಾನೂನುಗಳನ್ನು ಜಾರಿ ಮಾಡಿದ್ದನ್ನು ಸ್ಮರಿಸಲೇಬೇಕು ಮತ್ತು ಆ ನಿಟ್ಟಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಮನೋಧೈರ್ಯ ಮೆಚ್ಚಲೇಬೇಕು. ಇದನ್ನು ಇಲ್ಲಿ ಪ್ರಸ್ತಾಪ ಮಾಡಲು ಕಾರಣವಿದೆ, ಯಾಕೆಂದರೆ ರಾಜಕೀಯ ಒತ್ತಡದಲ್ಲಿ ಜನತೆಗೆ ಮತ್ತು ಈ ಮಣ್ಣಿಗೆ ಬೇಕಾದ ಮತ್ತು ಕಳ್ಳಕಾಕರ ಕೈಯಿಂದ ರಕ್ಷಿಸುವ ಕಾನೂನು ತರುವ ಕೆಲಸ ಕಡಿಮೆಯದ್ದಲ್ಲ. ಅಂತೂ ಇತ್ತೀಚಿಗೆ ಮರಳಿಗೆ ಸಂಬಂಧಿಸಿದಂತೆ ಹೊಸ ಮರಳು ನೀತಿ ತರಲಾಗಿದೆ. ಆದರೂ ಎಷ್ಟೋ ಕಾನೂನುಗಳು ಬಂದಿದ್ದರೂ, ತಾಂತ್ರಿಕತೆ ಅಳವಡಿಸಿದರೂ ಎಲ್ಲಾ ಒಂದುಕಡೆ ಅವೆಲ್ಲವನ್ನು ಮೀರಿದ ಒತ್ತಡಗಳು, ರಂಗೋಲಿ ಕೆಳಗೆ ತೂರುವ ಜಾಯಮಾನದವರಿಂದಾಗಿ ಮಿಗಲಾಗಿ ಅತಿಯಾದ ಭ್ರಷ್ಟಾಚಾರ ಎಲ್ಲವನ್ನೂ ಹಾಳುಗೆಡುವಿದೆ.
ನೀವು ಕೆಲವರ ಮಾತನ್ನು ಕೇಳಿರಬಹುದು, ಇನ್ನೂ ಬಿಡಿ ಸ್ವಾಮಿ, ಚುನಾವಣಾ ಖರ್ಚು ಮಾಡಿದ್ದು ವಾಪಸ್ಸು ಪಡೆಯಬೇಕಲ್ಲ ಮತ್ತು ಬರುವ ಚುನಾವಣೆಗೆ ಒಂದಿಷ್ಟು ಹಣ ಬೇಕಲ್ಲ ಎನ್ನುವುದು. ಇತ್ತೀಚಿಗೆ ಒಂದು ಪತ್ರಿಕೆ ವರದಿ ಮಾಡಿದ್ದು ಹೀಗೆ, ಪಂಜಾಬಿನ ಘನೌರ ಎಂಬ ಪ್ರದೇಶದ ಸುಮಾರು ೧೦ ಹಳ್ಳಿಗೆ ಸಂಬಂಧಿಸಿದ ಕೋಟ್ಯಂತರ ರುಪಾಯಿ ಮೌಲ್ಯದ ಮರಳು ಕಾಣೆಯಾಗಿದ್ದು ಎಲ್ಲಾ ಐಆರ್ ಆಗಿ ಒಂದು ತಿಂಗಳುಗಳೇ ಕಳೆದರೂ ಪೊಲೀಸರು ಮತ್ತು ಸಂಬಂಧಪಟ್ಟ ಇಲಾಖೆ ಜತೆಗೆ ಜಿಡಳಿತಕ್ಕೆ ಅಧಿಕೃತವಾಗಿ ಯಾವುದೇ ಸುಳಿವು ಸಿಕ್ಕಿಲ್ಲ ಎನ್ನುವುದು.
ಕೋಟ್ಯಂತರ ರುಪಾಯಿ ಮರಳನ್ನು ಯಾರೂ ಬ್ಯಾಗ್‌ಗಳಲ್ಲಿ ತುಂಬಿಸಿ ಬೈಕ್‌ಗಳಲ್ಲಿ ತೆಗೆದುಕೊಂಡು ಹೋಗುವುದಿಲ್ಲ. ಅಂದಮೇಲೆ ಕೆಲಸಗಾರರನ್ನು ಇಟ್ಟು ಗಣಿಗಾರಿಕೆ ಮಾಡಿ, ವಾಹನಗಳಲ್ಲಿ ತುಂಬಿಸಿ ಹೋಗುವ ಈ ವ್ಯವಸ್ಥೆಯ ಬಗ್ಗೆ ಸುಳಿವು ಇಲ್ಲ ಎನ್ನುವಾಗಲೇ ನಮಲ್ಲಿ ಸಂದೇಹ ಮೂಡಿ ಪ್ರಶ್ನೆಯಾಗಿ ಬದಲಾಗಿರುತ್ತದೆಯಲ್ಲವೇ? ಇನ್ನೊಂದು ಹಸಿಬಿಸಿಯ ವಿಷಯ ಏನೆಂದರೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಸೋದರಳಿಯ ಅವರ ಪತ್ನಿಗೆ ರಾಜ್ಯದಲ್ಲಿನ ಕಲ್ಲಿದ್ದಲು ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ ಸಮನ್ಸ್ ಜಾರಿಗೊಳಿಸಿದ್ದು ಅಕ್ರಮದ ಇನ್ನೊಂದು ಮುಖ
ತೆರೆಯುವ ಹಂತದಲ್ಲಿದೆ. ಇದೊಂದು ಕೋಟಿ ಕೋಟಿ ರುಪಾಯಿಯ ಬ್ಯುಸಿನೆಸ್ಸು.
ನೋಡು ನೋಡುತ್ತಿದ್ದಂತೆ ಸಿರಿವಂತರಾಗುವ ಆಸೆ ಈ ಅಕ್ರಮ ಗಣಿಗಾರಿಕೆ ಮೂಲ. ಇಲ್ಲಿ ಕೆಲಸಗಾರಿಗೆ ಸಿಗುವ ಹಣ ಕೂಲಿ
ಜತೆಗೆ ಒಳ್ಳೆ ಊಟವಿರಬಹುದು ಅಷ್ಟೇ. ಅದನ್ನು ನಡೆಸುವ ಮಾಲೀಕ ಶ್ರೀಮಂತರಾಗುತ್ತ ಹೋಗ್ತಾರೆ, ಕೋಟಿಯ ಬಂಗಲೆ, ಕಾರು, ಇತ್ಯಾದಿ ಇತ್ಯಾದಿ. ಇಲ್ಲಿ ನಿರ್ದಿಷ್ಟ ಪಡಿಸಿದ ಜಾಗದಲ್ಲಿ ಮಾತ್ರ ಗಣಿಗಾರಿಕೆ ನಡೆಯಬೇಕು ಮತ್ತು ಇಲಾಖೆ ಕೊಟ್ಟ ಪರವಾನಗಿ ಪ್ರಕಾರವಷ್ಟೇ ಪ್ರಮಾಣವನ್ನು ವಾಹನಗಳಿಗೆ ತುಂಬಿಸಿ ಮಾರುಕಟ್ಟೆಗೆ ಅಥವಾ ಖರೀದಿದಾರರಿಗೆ ಕಳುಹಿಸಬೇಕು. ಆದರೆ ಜಾಗದ ಇತಿಮಿತಿಯಿಲ್ಲದೇ ಒಂದೇ ಪರವಾನಗಿಯಲ್ಲಿ ಹಲವಾರು ಲೋಡ್‌ಗಳನ್ನು ಯಾವುದೇ ಭಯವಿಲ್ಲದೆ ಕಳುಹಿಸಲಾಗುತ್ತದೆ. ಆಸ್ತೆ ಅಲ್ಲ, ಇಲ್ಲಿ ತೂಕದ ಸೇತುವೆಯ ಅಂಕಿ ಅಂಶ ನೇರವಾಗಿ ಸಿಗುವುದೇ ಇಲ್ಲ. ಇದು ದುರುಪಯೋಗಕ್ಕೆ ಹಾದಿಯಲ್ಲವೇ? ಇಲ್ಲಿ ಆ ದಿನ ಅಧಿಕೃತ ಲೆಕ್ಕ ೫೦೦ ಟನ್ ಇದ್ದರೆ ಅನಧಿಕೃತವಾಗಿ ಈ ಸಂಖ್ಯೆ ಏನಾಗಬಹುದು.
ಇದು ಕೇವಲ ಉದಾಹರಣೆ ಮಾತ್ರ. ಲಕ್ಷ ಕೊಟ್ಟು ಕೋಟಿ ದುಡಿಯುವ ಈ ಆಟ ಆಡುವವರು ಮತ್ತು ಅಡಿಸುವವರು ಮಾತ್ರ ಪಂಚತಾರಾ ಹೋಟೆಲ್‌ಗಳಲ್ಲಿ ಮಜವಾಗಿರುತ್ತಾರೆ. ಯಾವುದೇ ರಾಜಧನ ಸರಕಾರಕ್ಕೆ ನೀಡದೆ, ಪರಿಸರಕ್ಕೂ ಹಾನಿ ಮಾಡಿ ಸಂಪಾದಿಸುವುದು ಕೋಟಿ ಕೋಟಿ ರುಪಾಯಿಗಳು. ಅತ್ತ ಸರಕಾರಕ್ಕೂ ಬೊಕ್ಕಸಕ್ಕೂ ನಷ್ಟ, ಇತ್ತ ಪರಿಸರಕ್ಕೂ ಹಾನಿ, ಹಾಗಾದರೆ ಲಾಭ ಯಾರಿಗೆ? ಕಾನೂನು ಕ್ರಮಕ್ಕಿಂತ ಮಿಗಿಲಾದವರೇ ಅವರು? ನದಿಯ ಒಡಲಿಗೆ ಕನ್ನಹಾಕಿ ದಿನಕ್ಕೆ ಲೋಡು ಲೋಡು ಮರಳು ಸಾಗಾಟ ಮಾಡಲಾಗುತ್ತೆ, ಯಾವುದೇ ಪಾಸ್ ಅಥವಾ ಅನುಮತಿ ಪತ್ರ ಇಲ್ಲದೆ ನಡೆಯೊ ಈ ದಂಧೆಯೇನು ರಾಜಕೀಯ ನಾಯಕರುಗಳ ಕೃಪಾ ಕಟಾಕ್ಷಕ್ಕೆ ಒಳಾಗಾಗಿದೆಯಾ?
ಇನ್ನೊಂದು ದುರದೃಷ್ಟದ ಸಂಗತಿಯೆಂದರೆ ಯಾವುದೇ ರಾಜ್ಯದ ಯಾವುದೇ ಅಕ್ರಮ ಗಣಿಗಾರಿಕೆಯ ವಾಸನೆ ಹಿಡಿದು ಹೋದರೆ ಅದರ ಮಾಲೀಕ ಒಂದಲ್ಲ ಒಂದು ರಾಜಕೀಯ ಪಕ್ಷದ ನಾಯಕರುಗಳಿಗೆ ಸಂಬಂಧಿಸಿರುತ್ತಾನೆ. ಇನ್ನೂ ಒಂದು ಮಾತು ಕೇಳಿ ಬಂದಿದ್ದು ಏನೆಂದರೆ ನಮ್ಮ ರಾಜಕೀಯ ಮಹಾನುಭಾವರುಗಳ ಪಾಲು ಇಂತಹ ಗಣಿಗಾರಿಕೆ ಯಂಥ ಉದ್ಯಮದಲ್ಲಿ ಇರುವುದು.
ಇದು ನೇರವಾಗಿಯೂ ಇಲ್ಲದಿದ್ದರೂ ಅವರ ಹಿಂಬಾಲಕರ ಮೂಲಕ ಆಗುವ ಈ ವ್ಯಾಪಾರಕ್ಕೆ ಯಾವುದೇ ಕಡಿವಾಣ ಇರೋದೆ
ಇಲ್ಲವಲ್ಲ.
ಇನ್ನೊಂದು ಹಾಸ್ಯದ ವಿಷಯವೇನೆಂದರೆ ನೀವು ಯಾವುದೇ ಪತ್ರಿಕೆ ತಿರುವಿ ಹಾಕಿದರೆ ಅಲ್ಲಿ ಈಗಿನ ಹಾಲಿ ನಾಯಕರುಗಳು, ಮಾಜಿಗಳು ಹೇಳುವುದು ಅಕ್ರಮ ಚಟುವಟಿಕೆ ನಿಲ್ಲಬೇಕು, ಯಾವುದೇ ಕಾರಣಕ್ಕೂ ಸಹಿಸಲು ಅಸಾಧ್ಯ ಎಂಬ ಮಾತುಗಳು. ಹಾಗಾದರೆ ಪಕ್ಷಾತೀತವಾಗಿ ಹೇಳಿ, ಯಾಕೆ ಈ ಮಾತುಗಳು ಕೇವಲ ಮಾತಾಗಿ ಇಂದಿಗೂ ಉಳಿದಿದೆ.