Friday, 22nd November 2024

ಮಾರ್ಚ್‌ 1ರಿಂದ ಈ ರಾಜ್ಯದಲ್ಲಿ ಹಾಲಿನ ದರ 12 ರೂ. ಹೆಚ್ಚಳ ?

ಇಂದೋರ್‌: ತೈಲೋತ್ಪನ್ನಗಳಾದ ಪೆಟ್ರೋಲ್, ಡೀಸೆಲ್, ಗ್ಯಾಸ್ ಹಾಗೂ ಬಸ್ ದರ, ಈರುಳ್ಳಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಹಾಲಿನ ದರ ಏರಿಕೆಯಾಗುವ ಸಾಧ್ಯತೆ ಇದ್ದು, ಮಾರ್ಚ್ 1ರಿಂದ ನೂತನ ದರ ಜಾರಿಗೆ ಬರುವ ಸಾಧ್ಯತೆ ಇದೆ.

ರಾಜಧಾನಿ ನವದೆಹಲಿ, ಮಧ್ಯಪ್ರದೇಶ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಹಾಲಿನ ದರ ಪ್ರತಿ ಲೀಟರ್ 12 ರೂ. ಹೆಚ್ಚಳವಾಗಲಿದ್ದು, ಮಾರ್ಚ್ 1ರಿಂದ ಜಾರಿಗೆ ಬರಲಿದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಸಾರಿಗೆ ವೆಚ್ಚ ಹೆಚ್ಚಾಗಿದ್ದು, ಹಾಲು ಪ್ರತಿ ಲೀಟರ್ ಗೆ 12 ರೂ.ಗೆ ಏರಿಸಲು ತೀರ್ಮಾನಿಸಲಾಗಿದೆ. ಮಧ್ಯಪ್ರದೇಶದ ರಾಟ್ಲಮ್ ನಗರದಲ್ಲಿ 55 ಗ್ರಾಮದವರು ಸಭೆ ನಡೆಸಿ ಪ್ರತಿ ಲೀಟರ್ ಹಾಲಿಗೆ 55 ರೂ. ನಿಗದಿ ಮಾಡಲು ತೀರ್ಮಾನಿಸಿದ್ದಾರೆ.

ಪ್ರಸ್ತುತ 43 ರೂ. ಹಾಲಿನ ದರ ಚಾಲ್ತಿಯಲ್ಲಿದೆ.