Thursday, 19th September 2024

ಪೆಟ್ರೋಲ್, ಡೀಸೆಲ್ ಬೆಲೆ 25 ಪೈಸೆ ಹೆಚ್ಚಳ ಇಂದು

ನವದೆಹಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೂಡ್ ಆಯಿಲ್ ಬೆಲೆ ಸ್ವಲ್ಪ ವ್ಯತ್ಯಾಸ ಆಗಿದ್ದನ್ನೇ ನೆಪ ಮಾಡಿಕೊಂಡಿರುವ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ನಿರಂತರವಾಗಿ ಹೆಚ್ಚಳ ಮಾಡುತ್ತಿದೆ.

ಕಳೆದ 53 ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 26 ಬಾರಿ ಹೆಚ್ಚಾಗಿದೆ. ಜನವರಿ 1ರಿಂದೀಚೆಗೆ 7.93 ರೂಪಾಯಿ ಹೆಚ್ಚಾಗಿದೆ. ಫೆಬ್ರವರಿ ತಿಂಗಳಲ್ಲಿ 16ನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಲಾಗಿದೆ. ಫೆಬ್ರವರಿ 27ರಂದು ಮತ್ತೆ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 25 ಪೈಸೆ ಹೆಚ್ಚಳ ಮಾಡಲಾಗಿದೆ.

ವಿವಿಧ ನಗರಗಳಲ್ಲಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ವಿವರ ಹೀಗಿದೆ.
ಬೆಂಗಳೂರು- ಪೆಟ್ರೋಲ್ 94.22 ರೂ., ಡೀಸೆಲ್ 86.37 ರೂ.
ಮುಂಬೈ- ಪೆಟ್ರೋಲ್ 97.57 ರೂ., ಡೀಸೆಲ್ 88.60 ರೂ.
ಚೆನ್ನೈ- ಪೆಟ್ರೋಲ್ 93.11 ರೂ., ಡೀಸೆಲ್ 86.45 ರೂ.
ಕೋಲ್ಕತ್ತಾ- ಪೆಟ್ರೋಲ್ 91.78 ರೂ., ಡೀಸೆಲ್ 84.56 ರೂ.
ದೆಹಲಿ- ಪೆಟ್ರೋಲ್ 91.17 ರೂ., ಡೀಸೆಲ್ 81.47 ರೂ.